ನವದೆಹಲಿ: ವಾಣಿಜ್ಯ ವಾಹನ ತಯಾರಿಕಾ ಕಂಪನಿ ಅಶೋಕ್ ಲೇಲ್ಯಾಂಡ್, ಅಕ್ಟೋಬರ್ ತಿಂಗಳಲ್ಲಿ ತನ್ನ ವಿವಿಧ ಘಟಕಗಳಲ್ಲಿ 15 ದಿನಗಳವರೆಗೆ ತಯಾರಿಕೆ ಚಟುವಟಿಕೆ ನಿಲ್ಲಿಸುವುದಾಗಿ ಪ್ರಕಟಣೆಯ ಮೂಲಕ ತಿಳಿಸಿದೆ.
ಆಟೋಮೊಬೈಲ್ನ ಕರಾಳ ಛಾಯೆ: ಅಶೋಕ್ ಲೇಲ್ಯಾಂಡ್ 2-15 ದಿನ ಉತ್ಪಾದನೆ ಸ್ಥಗಿತ
ಮಾರಾಟ ಬೆಳವಣಿಗೆ ಕುಸಿತದ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ವಾಣಿಜ್ಯ ವಾಹನ ತಯಾರಕಾ ಅಶೋಕ್ ಲೇಲ್ಯಾಂಡ್, ಉತ್ಪದಾನೆ ಮತ್ತು ಮಾರಾಟದ ನಡುವಿನ ಅಂತರ ಅಗಾಧವಾಗಿದೆ. ಹೀಗಾಗಿ, 2019ರ ಅಕ್ಟೋಬರ್ ತಿಂಗಳಂದು 2ರಿಂದ 15 ದಿನಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಎಸ್ಇಗೆ ತಿಳಿಸಿದೆ. ನಗದು ಕೊರತೆ, ಭಾರತ್ ಸ್ಟೇಜ್-6ನ ನೂತನ ನಿಯಮ, ಹೆಚ್ಚಿದ ತಯಾರಿಕಾ ವೆಚ್ಚ ಸೇರಿದಂತೆ ಇತರ ಕಾರಣಗಳಿಂದಲೂ ದೇಶದ ಎರಡನೇ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾದ ಅಶೋಕ್ ಲೇಲ್ಯಾಂಡ್ ಈ ನಿರ್ಧಾರ ತೆಗೆದುಕೊಂಡಿದೆ.
ಮಾರಾಟ ಬೆಳವಣಿಗೆ ಕುಸಿತದ ಹಿನ್ನೆಲೆಯಲ್ಲಿ ಚೆನ್ನೈ ಮೂಲದ ವಾಣಿಜ್ಯ ವಾಹನ ತಯಾರಕಾ ಅಶೋಕ್ ಲೇಲ್ಯಾಂಡ್, ಉತ್ಪದಾನೆ ಮತ್ತು ಮಾರಾಟದ ನಡುವಿನ ಅಂತರ ಅಗಾಧವಾಗಿದೆ. ಹೀಗಾಗಿ, 2019ರ ಅಕ್ಟೋಬರ್ ತಿಂಗಳಂದು 2ರಿಂದ 15 ದಿನಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಎಸ್ಇಗೆ ತಿಳಿಸಿದೆ.
ಕಳೆದ ಕೆಲವು ತಿಂಗಳಿಂದ ದೇಶಿ ವಾಹನೋದ್ಯಮದಲ್ಲಿ ಉಂಟಾಗಿರುವ ಆರ್ಥಿಕ ತಲ್ಲಣಗಳಿಂದ ಮಾರಾಟ ದರ ಇಳಿಕೆಯಾಗಿದೆ. ನಗದು ಕೊರತೆ, ಭಾರತ್ ಸ್ಟೇಜ್-6ನ ನೂತನ ನಿಯಮ, ಹೆಚ್ಚಿದ ತಯಾರಿಕಾ ವೆಚ್ಚ ಸೇರಿದಂತೆ ಇತರ ಕಾರಣಗಳಿಂದಲೂ ದೇಶದ ಎರಡನೇ ಅತಿದೊಡ್ಡ ವಾಹನ ಉತ್ಪಾದನಾ ಕಂಪನಿಯಾದ ಅಶೋಕ್ ಲೇಲ್ಯಾಂಡ್ ತಯಾರಿಕೆಯನ್ನೇ ಕೆಲ ದಿನಗಳ ಮಟ್ಟಿಗೆ ಸ್ಥಗಿತಗೊಳಿಸುತ್ತಿದೆ.