ಮುಂಬೈ:ವಿದೇಶಿ ಸಾಂಸ್ಥಿಕ ಹೂಡಿಕೆಗಳ (ಎಫ್‌ಐಐ) ಏರಿಕೆಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಕಳೆದ ಮೂರು ದಿನಗಳಲ್ಲಿ ನಿವ್ವಳ ಎಫ್‌ಐಐ ಒಳಹರಿವು 14,786.57 ಕೋಟಿ ರೂ.ಯಷ್ಟಾಗಿದೆ.
ಮಂಗಳವಾರದ ವಹಿವಾಟಿನಂದು ಸೆನ್ಸೆಕ್ಸ್ ಮೊದಲ ಬಾರಿಗೆ 43,000 ಅಂಕಗಳ ಗಡಿ ದಾಟಿತು. ಕೋವಿಡ್ ಲಸಿಕೆಯ ಆರಂಭಿಕ ಪ್ರಾಯೋಗಿಕ ಫಲಿತಾಂಶಗಳು ಶೇ 90ರಷ್ಟು ಯಶಸ್ಸು ಕಂಡಿದೆ ಎಂದು ಫೈಜರ್ ಹೇಳಿಕೆಯ ನಂತರ, ಭಾರತೀಯ ಮಾರುಕಟ್ಟೆ ಹಾಗೂ ಜಾಗತಿಕ ಪೇಟೆಗಳು ಏರಿಕೆ ದಾಖಲಿಸಿದವು.
ಡೆಮೊಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಮುಂದಿನ ಅಮೆರಿಕ ಅಧ್ಯಕ್ಷರಾಗುತ್ತಾರೆ ಎಂಬುದು ಸ್ಪಷ್ಟವಾದ ನಂತರ ದೇಶೀಯ ಮಾರುಕಟ್ಟೆಗಳು ಜಿಗಿತ ಕಂಡವು. ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ನಿರ್ಗಮಿಸುವುದರಿಂದ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಉಂಟಾಗಬಹುದು ಎಂಬ ನಿರೀಕ್ಷೆ ಸುಳ್ಳಾಗಿಸಿವೆ.