ಕರ್ನಾಟಕ

karnataka

ETV Bharat / business

Amul milk price hike: ದೇಶದೆಲ್ಲೆಡೆ ನಾಳೆಯಿಂದ ಹೊಸ ಬೆಲೆ ಜಾರಿ - ಅಮುಲ್​ ಹಾಲು

ದೇಶಾದ್ಯಂತ ನಾಳೆಯಿಂದ ಅಮುಲ್​ ಹಾಲಿನ ಬೆಲೆಯಲ್ಲಿ ಏರಿಕೆಯಾಗಲಿದ್ದು, ಪ್ರತಿ ಲೀಟರ್​ ಹಾಲಿಗೆ 2 ರೂ. ಹೆಚ್ಚಳ ಮಾಡಿ ಕಂಪನಿ ಆದೇಶ ಹೊರಡಿಸಿದೆ.

Amul Milk Price
Amul Milk Price

By

Published : Jun 30, 2021, 4:29 PM IST

Updated : Jun 30, 2021, 5:18 PM IST

ನವದೆಹಲಿ:ದೇಶಾದ್ಯಂತ ಪೆಟ್ರೋಲ್ ​- ಡಿಸೇಲ್​ ಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದ್ದು, ಇದರ ಮಧ್ಯೆ ಅಡುಗೆ ಎಣ್ಣೆ ಬೆಲೆಯಲ್ಲೂ ಕೂಡ ಏರಿಕೆ ಕಂಡು ಬಂದಿದೆ. ಇದರ ಮಧ್ಯೆ ಸದ್ಯ ದೈನದಿನ ಬಳಕೆಯ ಹಾಲಿನ ಬೆಲೆಯಲ್ಲಿ ಏರಿಕೆಯಾಗುತ್ತಿದೆ.

ಅಮುಲ್​ ಹಾಲಿನ ಬೆಲೆಯಲ್ಲಿ ನಾಳೆಯಿಂದ ಏರಿಕೆಯಾಗಲಿದ್ದು, ಪ್ರತಿ ಲೀಟರ್​ಗೆ 2 ರೂ ಹೆಚ್ಚು ಮಾಡಲಾಗಿದೆ. ಜುಲೈ 1ರಿಂದಲೇ ಈ ಪರಿಷ್ಕೃತ ದರ ಜಾರಿಗೊಳ್ಳಲಿದೆ. ಸದ್ಯ ಒಂದು ಲೀಟರ್​ ಹಾಲಿನ ಬೆಲೆ 55 ರೂ. ಇದ್ದು, ಅರ್ಧ ಲೀಟರ್​ ಪ್ಯಾಕೆಟ್​ 28 ರೂಗೆ ಲಭ್ಯವಾಗುತ್ತಿದೆ.

ಇನ್ಮುಂದೆ ಪ್ರತಿ ಲೀಟರ್ ಹಾಲಿನ ಬೆಲೆ 57ರೂ ಆಗಲಿದೆ. ಹೊಸ ಬೆಲೆ ದೆಹಲಿ, ಕರ್ನಾಟಕ, ಪಂಜಾಬ್​, ಗುಜರಾತ್​​ ಸೇರಿದಂತೆ ಎಲ್ಲೆಡೆ ಜಾರಿಗೊಳ್ಳಲಿದ್ದು, ಗ್ರಾಹಕರ ಜೇಬಿಗೆ ಮತ್ತೆ ಎರಡು ರೂ. ಹೊರೆ ಆಗಲಿದೆ.

ಇದನ್ನೂ ಓದಿರಿ: ಅತಿಯಾದ ಮೊಬೈಲ್​ ಬಳಕೆ: ಸಹೋದರಿಯನ್ನೇ ಕೊಲೆ ಮಾಡಿದ ಒಡಹುಟ್ಟಿದ ಅಣ್ಣ

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ, ಸುಮಾರು ಒಂದು ವರ್ಷ 7 ತಿಂಗಳ ನಂತರ ಹಾಲಿನ ಬೆಲೆಯಲ್ಲಿ ಏರಿಕೆ ಮಾಡುತ್ತಿದ್ದೇವೆ. ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲ ಅಮುಲ್​​ ಹಾಲಿನ ಬ್ರಾಂಡ್​​ಗಳಲ್ಲಿ ಏರಿಕೆಯಾಗಲಿದೆ ಎಂದಿದ್ದಾರೆ.

Last Updated : Jun 30, 2021, 5:18 PM IST

ABOUT THE AUTHOR

...view details