ನವದೆಹಲಿ: ದೇಶದದಲ್ಲಿ ಆರ್ಥಿಕ ಹಿಂಜರಿತದಿಂದ ಕೆಲವು ಉದ್ಯಮ ಕ್ಷೇತ್ರಗಳ ಮಾರಾಟ ಕುಸಿತವು ಪಾತಾಳ ಕಂಡಿದ್ದರೇ ಅಮೆಜಾನ್ ಮಾತ್ರ ಹಬ್ಬದ ಸೀಜನ್ ಮುಂದಿಟ್ಟುಕೊಂಡು ಭರ್ಜರಿ ವಹಿವಾಟು ನಡೆಸುತ್ತಿದೆ.
ಆರ್ಥಿಕ ಹಿಂಜರಿತದ ಮಧ್ಯೆಯೂ 1 ಗಂಟೆಗೆ ₹ 20.80 ಕೋಟಿ ಲಾಭ: ಹೇಗೆ ಸಾಧ್ಯ? - ಅಮೆಜಾನ್
ಕಳೆದ 4-5 ತಿಂಗಳಿಂದ ಮಾರಾಟದ ವಹಿವಾಟು ಕುಸಿತ ಕಂಡಿದ್ದ ಅಮೆಜಾನ್ ಇಂಡಿಯಾ, ಸಾಲು-ಸಾಲು ಹಬ್ಬಗಳು ಮುಂದಿರುವಂತೆ ‘ಗ್ರೇಟ್ ಇಂಡಿಯನ್ ಸೇಲ್’ ಮಾರಾಟ ಕೊಡುಗೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಹಬ್ಬದ ಕೊಡುಗೆಗೆ ಮುಗಿಬಿದ್ದ ಗ್ರಾಹಕರು ಕೇವಲ 36 ಗಂಟೆಗಳಲ್ಲಿ ₹ 750 ಕೋಟಿ (ಪ್ರತಿ ಗಂಟೆಗೆ ₹ 20.80) ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ಖರೀದಿಸಿದ್ದಾರೆ.
ಕಳೆದ 4-5 ತಿಂಗಳಿಂದ ಮಾರಾಟದ ವಹಿವಾಟು ಕುಸಿತ ಕಂಡಿದ್ದ ಅಮೆಜಾನ್ ಇಂಡಿಯಾ, ಸಾಲು-ಸಾಲು ಹಬ್ಬಗಳು ಮುಂದಿರುವಂತೆ ‘ಗ್ರೇಟ್ ಇಂಡಿಯನ್ ಸೇಲ್’ ಮಾರಾಟ ಕೊಡುಗೆಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಹಬ್ಬದ ಕೊಡುಗೆಗೆ ಮುಗಿಬಿದ್ದ ಗ್ರಾಹಕರು ಕೇವಲ 36 ಗಂಟೆಗಳಲ್ಲಿ ₹750 ಕೋಟಿ(ಪ್ರತಿ ಗಂಟೆಗೆ ₹ 20.80) ಮೌಲ್ಯದ ಸ್ಮಾರ್ಟ್ಫೋನ್ಗಳನ್ನು ಖರೀದಿಸಿದ್ದಾರೆ.
ಮೊಬೈಲ್ ದರದಲ್ಲಿ ಕಡಿತ ಘೋಷಿಸಿದ ಅಮೆಜಾನ್, ತನ್ನ ಉತ್ಪನ್ನಗಳನ್ನು ಕಂತುಗಳಲ್ಲಿ ಮಾರಾಟ ಮಾಡುವ ಮೂಲಕ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ನಲ್ಲಿ ದಾಖಲೆಯ ಆರಂಭ ಪಡೆದಿದೆ. ಮೊಬೈಲ್ ಜೊತೆಗೆ ಟಿವಿ ಮಾರಾಟ, ಫ್ಯಾಷನ್ ವಸ್ತುಗಳು, ಸೌಂದರ್ಯ ವರ್ಧಕಗಳಲ್ಲಿ, ದಿನಸಿ ಉತ್ಪನ್ನಗಳು, ಪಾದರಕ್ಷೆ, ಎಲೆಕ್ಟ್ರಾನಿಕ್ ಸಲಕರಣೆಗಳ ಮಾರಾಟದಲ್ಲಿ ಹೆಚ್ಚಳವಾಗಿದೆ.