ನವದೆಹಲಿ:ಇ-ಕಾಮರ್ಸ್ ದೈತ್ಯ ಅಮೆಜಾನ್‌ನ ತನ್ನ ಅಮೆಜಾನ್ ಪೇ ಸೇವೆಯಡಿ ಬಳಕೆದಾರರಿಗೆ ಡಿಜಿಟಲ್ ಚಿನ್ನದಲ್ಲಿ ಹೂಡಿಕೆಯ ಸೇವೆ ಪ್ರಾರಂಭಿಸಿದೆ.
ಕಂಪನಿಯು ತನ್ನ ಗೋಲ್ಡ್ ವ್ಯಾಲೆಟ್ ಅಡಿ ಡಿಜಿಟಲ್ ಹೂಡಿಕೆ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಟ್ಟ ಹಳದಿ ಲೋಹವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡುತ್ತಿದೆ.
ಜಾಗತಿಕ ಚಂಚಲತೆ ಮತ್ತು ಅಮೆರಿಕ ಡಾಲರ್ ದುರ್ಬಲಗೊಂಡಿದ್ದರಿಂದ ಕಳೆದ ಕೆಲವು ವಾರಗಳಲ್ಲಿ ಚಿನ್ನದ ಬೆಲೆ ವೇಗವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ, ಬಹುತೇಕ ಹೂಡಿಕೆದಾರರು ಚಿನ್ನದತ್ತ ಆಕರ್ಷಿತರಾಗಿದ್ದಾರೆ.
ಅಮೆಜಾನ್ ಪೇ ಬಳಕೆದಾರರು ಚಿನ್ನವನ್ನು ಡಿಜಿಟಲ್ ಲಾಕರ್‌ನಲ್ಲಿ ಇರಿಸಬಹುದು. ಲಾಕರ್ ಅನ್ನು ಬಾಡಿಗೆಗೆ ಪಡೆಯದೇ ಹಳದಿ ಲೋಹದ ಖರೀದಿ ಅಥವಾ ಮಾರಾಟ ಮಾಡಬಹುದು. ಗೋಲ್ಡ್ ವ್ಯಾಲೆಟ್ ಅಡಿ ಹೂಡಿಕೆದಾರರ ಚಿನ್ನ ಸುರಕ್ಷಿತವಾಗಿ ಇರುತ್ತದೆ ಎಂದು ಕಂಪನಿ ಭರವಸೆ ನೀಡಿದೆ.
ಸೇಫ್‌ಗೋಲ್ಡ್ ಜೊತೆ ಅಮೆಜಾನ್ ಪಾಲುದಾರಿಕೆ ಹೊಂದಿರುವ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರು 5 ರೂ.ಗಿಂತ ಕಡಿಮೆ ಬೆಲೆಗೆ ಚಿನ್ನ ಖರೀದಿಸಲು ಸಾಧ್ಯವಾಗುತ್ತದೆ. ಶೇ 99.5ರಷ್ಟು ಶುದ್ಧತೆಯ 24 ಕ್ಯಾರೆಟ್ ಚಿನ್ನ ನೀಡಲಾಗುತ್ತಿದೆ ಎಂದು ತಿಳಿಸಿದೆ.
ಅಮೆಜಾನ್ ಪೇ ಬಳಕೆದಾರರಿಗೆ ಡಿಜಿಟಲ್ ಪ್ಲಾಟ್ಫಾರ್ಮ್ ಅಡಿ ಚಿನ್ನ ಖರೀದಿಸಲು ನೆರವಾಗುತ್ತಿದೆ. ಪೇಟಿಎಂ, ಫೋನ್ಪೇ, ಗೂಗಲ್ ಪೇ, ಮತ್ತು ಮೊಬಿಕ್ವಿಕ್ ನಂತಹ ಡಿಜಿಟಲ್ ಪ್ಲಾಟ್ಫಾರ್ಮ್ ಸಹ ಸೇರಿಕೊಂಡಿವೆ.
ಪೇಟಿಎಂ 2017ರಲ್ಲಿ ಈ ಸೇವೆ ಪ್ರಾರಂಭಿಸಿದರೆ, ಮೊಬಿಕ್ವಿಕ್ 2018ರಲ್ಲಿ ಆರಂಭಿಸಿತು. ಗೂಗಲ್ ಪೇ ಬಳಕೆದಾರರಿಗೆ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಕಳೆದ ವರ್ಷ ಏಪ್ರಿಲ್‌ನಲ್ಲಿ ಅವಕಾಶ ನೀಡಿತು.
ಬಂಗಾರ ಖರೀದಿಸಲು ಡಿಜಿಟಲ್ ರೂಪದಲ್ಲಿ ಹೂಡಿಕೆ ಮಾಡಲಾಗುತ್ತದೆ. ಅನೇಕ ಕಂಪನಿಗಳು ಇಂತಹ ಸೇವೆಗಳನ್ನು ನೀಡುತ್ತಿವೆ. ಯಾರು ಬೇಕಾದರೂ ಈ ಚಿನ್ನ ಖರೀದಿಸಬಹುದು ಹಾಗೂ ಸಣ್ಣ ಮೊತ್ತವನ್ನು ಠೇವಣಿ ಇರಿಸುವ ಮುಖೇನ ಬಂಗಾರ ಕೊಳ್ಳಬಹುದು. ಖರೀದಿಗೆ ಯಾವುದೇ ಮಾರುಕಟ್ಟೆಗೆ ಅಲಿಯಬೇಕಿಲ್ಲ. 24 ಕ್ಯಾರೆಟ್ನ ಪರಿಶುದ್ಧ ಚಿನ್ನವನ್ನು ಆನ್ಲೈನ್ನಲ್ಲಿ ಖರೀದಿಸಬಹುದು.
ಡಿಜಿಟಲ್ ಬಳಕೆದಾರರು ಹೆಚ್ಚು ಹೂಡಿಕೆ ಮಾಡಿದಷ್ಟು ಹೆಚ್ಚು ಚಿನ್ನ ಸುರಕ್ಷಿತವಾಗಿರುತ್ತದೆ. ಇದಕ್ಕೆ ಬೇರೆ ಯಾವುದೇ ಶುಲ್ಕವನ್ನು ಪಾವತಿಸಬೇಕಿಲ್ಲ. ಕಂಪನಿಗಳು ಇದರ ಮೇಲೆ 2 ವರ್ಷಗಳ ತನಕ ಯಾವುದೇ ಯಾವುದೇ ಶುಲ್ಕ ವಿಧಿಸುವುದಿಲ್ಲ. 2 ವರ್ಷಗಳ ನಂತರ ನಾಮಮಾತ್ರದ ಶುಲ್ಕ ವಿಧಿಸುತ್ತವೆ. ವ್ಯಾಲೆಟ್ನಲ್ಲಿ ಡಿಜಿಟಲ್ ಚಿನ್ನದ ನಿಕ್ಷೇಪಗಳ ಹಿಡಿದಿಡಲು ಗರಿಷ್ಠ ಮಿತಿ 5 ವರ್ಷಗಳು.