ನವದೆಹಲಿ:ಭಾರತದ ಆನ್ಲೈನ್ ಮಾರ್ಕೆಟ್ ಆಳುತ್ತಿರುವ ಅಮೇಜಾನ್ ಹಾಗೂ ಫ್ಲಿಪ್‌ಕಾರ್ಟ್ ಭಾರಿ ದರ ಕಡಿತ ಮಾರಾಟ ಮುಕ್ತಾಯವಾಗಿ ಎರಡು ದಿನಗಳು ಕಳೆದಿದ್ದು, ಆರು ದಿನದ ಫೆಸ್ಟಿವ್ ಸೇಲ್ನಲ್ಲಿ ಆಗಿದ್ದೇನು ಅನ್ನೋ ಮಾಹಿತಿ ಇಲ್ಲಿದೆ..
ಅಮೇಜಾನ್ 'ಗ್ರೇಟ್ ಇಂಡಿಯನ್ ಸೇಲ್' ಹಾಗೂ ಫ್ಲಿಪ್‌ಕಾರ್ಟ್ 'ಬಿಗ್ ಬಿಲಿಯನ್ ಡೇ ಸೇಲ್' ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆದಿತ್ತು. ಈ ದಿಗ್ಗಜ ಕಂಪನಿಗಳ ಫೆಸ್ಟಿವ್ ಸೇಲ್ನಲ್ಲಿ ಗ್ರಾಹಕರು ಅಮೇಜಾನ್ಗೆ ಮೊದಲ ಆದ್ಯತೆ ನೀಡಿದ್ದರು ಎನ್ನುವುದು ತಿಳಿದು ಬಂದಿದೆ. ಈ ಮೂಲಕ ಅಮೇಜಾನ್, ಭಾರತದಲ್ಲಿ ತನ್ನ ಪ್ರತಿಸ್ಪರ್ಧಿ ಫ್ಲಿಪ್‌ಕಾರ್ಟ್ ಹಿಂದಿಕ್ಕಿದೆ.
ಜಸ್ಟ್ 36 ಗಂಟೆಯಲ್ಲಿ ಅಮೇಜಾನ್ನಲ್ಲಿ ಅಬ್ಬಬ್ಬಾ ಇಷ್ಟೊಂದು ಕೋಟಿ ವ್ಯವಹಾರ..!
ಆರ್ಥಿಕ ಹಿಂಜರಿತದ ನಡುವೆಯೂ ಗ್ರಾಹಕರು ಫೆಸ್ಟಿವ್ ಸೇಲ್ನಲ್ಲಿ ಭಾರಿ ವ್ಯವಹಾರ ನಡೆಸಿದ್ದಾರೆ. ಪ್ರತಿ ಎರಡು ಗ್ರಾಹಕರಲ್ಲಿ ಓರ್ವ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ದಾನೆ. ಮೊಬೈಲ್ ಹಾಗೂ ಉಡುಪುಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ.
"ಫ್ಲಿಪ್‌ಕಾರ್ಟ್ ವ್ಯವಹಾರ ಸದ್ಯ ದುಪ್ಪಟ್ಟಾಗಿದೆ. ನಿರ್ದಿಷ್ಟ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದಲೇ ಕೆಲ ಆಫರ್ ನೀಡಲಾಗಿತ್ತು. ಆರು ದಿನದಲ್ಲಿ ನಮ್ಮ ಮಾರುಕಟ್ಟೆ ಶೇ.70ರಿಂದ ಶೇ.75ರಷ್ಟು ಪ್ರಗತಿ ಸಾಧಿಸಿದೆ. ಹೊಸ ಗ್ರಾಹಕರ ಪ್ರಮಾಣ ಶೇ.50ರಿಂದ ಶೇ.60ರಷ್ಟು ವೃದ್ಧಿಸಿದೆ. ಆರು ದಿನದ ಫೆಸ್ಟಿವ್ ಸೇಲ್ನಲ್ಲಿ 70 ಬಿಲಿಯನ್ ಗ್ರಾಹಕರು ವೆಬ್ಸೈಟ್ ಹಾಗೂ ಆ್ಯಪ್ಗೆ ಭೇಟಿ ನೀಡಿದ್ದಾರೆ" ಎಂದು ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.
ಅಮೇಜಾನ್ ಮೂಲಕ ಹಬ್ಬ ಆಚರಿಸಿದ ಒನ್ಪ್ಲಸ್...! ಎರಡೇ ದಿನದಲ್ಲಿ ಕೋಟಿ ಕೋಟಿ ಬಾಚಿದ ಚೀನಾ ಕಂಪನಿ ..
"ಅಮೇಜಾನ್ ಈ ಬಾರಿ ಫೆಸ್ಟಿವ್ ಸೇಲ್ನಲ್ಲಿ ಹಿಂದೆಂದಿಗಿಂತಲೂ ಅದ್ಭುತ ಮಾರಾಟ ಕಂಡಿದೆ. ಶೇ.99.4 ಅಂಚೆ ಕೋಡ್ ಮೂಲಕ ಗ್ರಾಹಕರು ತಮ್ಮಿಷ್ಟದ ವಸ್ತುಗಳನ್ನು ಕೊಂಡಿದ್ದಾರೆ. ಸುಮಾರು 600 ವಿಮಾನಗಳ ಮೂಲಕ ಆರು ದಿನದ ಅವಧಿಯಲ್ಲಿ ಗ್ರಾಹಕರು ಇಷ್ಟಪಟ್ಟ ವಸ್ತುಗಳನ್ನು ವಿತರಿಸಲಾಗಿದೆ" ಎಂದು ಅಮೇಜಾನ್ ಭಾರತದ ಹಿರಿಯ ಉಪಾಧ್ಯಕ್ಷ ಅಮಿತ್ ಅಗರ್ವಾಲ್ ಹೇಳಿದ್ದಾರೆ.