ನವದೆಹಲಿ: ಹದಗೆಟ್ಟ ಆರ್ಥಿಕ ಪರಿಸ್ಥಿತಿಯಲ್ಲಿ ವೊಡಾಫೋನ್, ಐಡಿಯಾ ಹೊರತುಪಡಸಿ ಜಿಯೋ ಮತ್ತು ಏರ್‌ಟೆಲ್ ಕಂಪನಿಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿವೆ.
ವೈರ್‌ಲೆಸ್ ಟೆಲಿಕಾಂ ಸರ್ವೀಸ್ಗಾಗಿ ಆದಾಯದ ಅಂದಾಜುಗಳನ್ನು ಕಡಿತ ಮಾಡಲಾಗಿದೆ. ಮ್ಯೂಟ್ ಮಾಡಿದ ಚಂದಾದಾರರ ಸೇರ್ಪಡೆ, ಲಾಕ್‌ಡೌನ್ ಹಾಗೂ ಕೆಲವು ನಿರ್ಬಂಧಗಳ ಸಂಭವನೀಯ ವಿಸ್ತರಣೆಯಿಂದಾಗಿ 4ಜಿ ಸಿಮ್‌ಗಳಿಗೆ 2 ಜಿ / 3 ಜಿ ಪರಿವರ್ತನೆ ಆಗುತ್ತಿವೆ. 2019ರ ಡಿಸೆಂಬರ್‌ನಲ್ಲಿ ಸುಂಕ ಹೆಚ್ಚಳದಿಂದ ಮುಂಬರುವ ತಿಂಗಳುಗಳಲ್ಲಿ ನಿರೀಕ್ಷಿತ ಆದಾಯದ ಬೆಳವಣಿಗೆಯ ಮೇಲೆ ಭಾಗಶಃ ಪರಿಣಾಮ ಬೀರಬಹುದು ಎಂದು ಆಕ್ಸಿಸ್ ಕ್ಯಾಪಿಟಲ್ ಹೇಳಿದೆ.
ವೈರ್‌ಲೆಸ್ ಪೂರೈಕೆದಾರರ 2021/22ರ ಹಣಕಾಸು ವರ್ಷದ (ಅಂದಾಜು) ಆದಾಯ ಶೇ 1-6ರಷ್ಟು ಮತ್ತು ಇಬಿಐಟಿಡಿಎ (ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯಕ್ಕೂ ಮುಂಚಿನ ಗಳಿಕೆ) 20-100 ಬಿಪಿಎಸ್ (ಬೇಸಿಸ್ ಪಾಯಿಂಟ್‌ಗಳು) ಕಡಿತಗೊಳಿಸಿದ್ದೇವೆ ಎಂದು ಟೆಲಿಕಾಂ ವಲಯದ ವರದಿಯಲ್ಲಿ ತಿಳಿಸಿದೆ.