ನವದೆಹಲಿ:ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದ 24 ಗಂಟೆಯೊಳಗೆ ಟಿಕೆಟ್ಗಳನ್ನು ರದ್ದುಪಡಿಸಿದರೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.
ಏರ್ ಇಂಡಿಯಾ ಮುಖ್ಯಸ್ಥ ಹಾಗು ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಮಾತನಾಡಿ, ಪ್ರಯಾಣಿಕರು 2019ರ ಮೇ 1ರ ಬಳಿಕ ಬುಕ್ ಮಾಡಿದ ವಿಮಾನ ಟಿಕೆಟನ್ನು 24 ಗಂಟೆಯೊಳಗೆ ರದ್ದುಪಡಿಸಿದರೆ ಯಾವುದೇ ಹೆಚ್ಚುವರಿ ಶುಲ್ಕವಿಧಿಸದೆ, ಬುಕ್ಕಿಂಗ್ ಹಣ ಮರುಪಾವತಿಸಲಾಗುವುದು ಎಂದು ತಿಳಿಸಿದ್ದಾರೆ.