ನವದೆಹಲಿ: ದೇಶದ ಅಗ್ರ ಶ್ರೀಮಂತರಲ್ಲಿ ಒಬ್ಬರಾಗಿರುವ ಗೌತಮ್ ಅದಾನಿ ಒಡೆತನದ ಅದಾನಿ ಗ್ರೀನ್ ಎನರ್ಜಿ ಕಂಪನಿ ನವೀಕರಿಸಬಹುದಾದ ಇಂಧನ ಯೋಜನೆಗಳ ನಿರ್ಮಾಣಕ್ಕಾಗಿ ಅಂತಾರಾಷ್ಟ್ರೀಯ ಬ್ಯಾಂಕ್‌ಗಳಿಂದ 288 ಮಿಲಿಯನ್ ಡಾಲರ್ (ಸುಮಾರು ರೂ 2,188 ಕೋಟಿ) ಸಾಲ ಪಡೆದಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (ಎಜಿಇಎಲ್) ತನ್ನ ನಿರ್ಮಾಣದ ಹಣಕಾಸು ಚೌಕಟ್ಟನ್ನು 1.64 ಶತಕೋಟಿ ಡಾಲರ್‌ಗೆ ವಿಸ್ತರಿಸಿಕೊಂಡಿದೆ. ನಿರ್ಮಾಣ ಹಂತದಲ್ಲಿರುವ ನವೀಕರಿಸಬಹುದಾದ ಯೋಜನೆಗಳ ಬಂಡವಾಳಕ್ಕಾಗಿ 288 ಮಿಲಿಯನ್ ಡಾಲರ್ ಸಾಲವನ್ನು ಪ್ರಮುಖ ಅಂತಾರಾಷ್ಟ್ರೀಯ ಸಾಲದಾತರ ಗುಂಪಿನೊಂದಿಗೆ ಪಡೆಯುತ್ತಿರುವುದಾಗಿ ಕಂಪನಿ ತಿಳಿಸಿದೆ.
ಗ್ರೀನ್ ಹೈಬ್ರಿಡ್ ಯೋಜನೆಗೆ ಒಪ್ಪಂದಗಳ ಪ್ರಕಾರ ಏಳು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಾದ ಬಿಎಲ್‌ಪಿ ಪರಿಬಾಸ್, ಸಹಕಾರಿ ರಾಬೋಬ್ಯಾಂಕ್ ಯುಎ, ಇಂಟೆಸಾ ಸ್ಯಾನ್‌ಪೋಲೊ ಎಸ್‌ಪಿಎ, ಜಪಾನ್‌ನ ಎಂಯುಎಫ್‌ಜಿ ಬ್ಯಾಂಕ್ , ಸೊಸೈಟಿ ಜನರಲ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಹಾಗೂ ಸುಮಿಟೊಮೊ ಮಿಟ್ಸುಯಿ ಬ್ಯಾಂಕಿಂಗ್ ಕಾರ್ಪೊರೇಷನ್ ಸಾಲ ನೀಡುತ್ತಿವೆ.