ಕರ್ನಾಟಕ

karnataka

ETV Bharat / business

ಆಲೂಗಡ್ಡೆ, ಈರುಳ್ಳಿ ಆಯ್ತು ಈಗ ಅಡುಗೆ ಎಣ್ಣೆ ಶಾಕ್​: ದರ ಹೆಚ್ಚಳಕ್ಕೆ ಬೆಚ್ಚಿಬಿದ್ದ ಗ್ರಾಹಕ!

ಮಲೇಷ್ಯಾದಲ್ಲಿ ತಾಳೆ ಎಣ್ಣೆ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ಕಳೆದ ಆರು ತಿಂಗಳಲ್ಲಿ ದೇಶೀಯ ಭವಿಷ್ಯದ ಮಾರುಕಟ್ಟೆಯಲ್ಲಿ ಕಚ್ಚಾ ಪಾಮ್ ಆಯಿಲ್ (ಸಿಪಿಒ) ಬೆಲೆ ಶೇ 53ರಷ್ಟು ಏರಿಕೆಯಾಗಿದೆ. ಸೋಯಾಬೀನ್ ಮತ್ತು ಸಾಸಿವೆ ಬೆಲೆಗಳು ಕೂಡ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿವೆ.

Edible Oil
ಅಡುಗೆ ಎಣ್ಣೆ

By

Published : Nov 6, 2020, 4:43 PM IST

ನವದೆಹಲಿ: ಆಲೂಗಡ್ಡೆ ಮತ್ತು ಈರುಳ್ಳಿಯ ಬಳಿಕ ಎಣ್ಣೆಕಾಳುಗಳ ಬೆಲೆಯಲ್ಲಿ ತೀವ್ರ ಏರಿಕೆಯಿಂದಾಗಿ ಖಾದ್ಯ ತೈಲದ ಬೆಲೆಯೂ ಹೆಚ್ಚಳವಾಗಿದೆ.

ಮಲೇಷ್ಯಾದಲ್ಲಿ ತಾಳೆ ಎಣ್ಣೆ ಉತ್ಪಾದನೆಯಲ್ಲಿನ ಕುಸಿತದಿಂದಾಗಿ ಕಳೆದ ಆರು ತಿಂಗಳಲ್ಲಿ ದೇಶೀಯ ಭವಿಷ್ಯದ ಮಾರುಕಟ್ಟೆಯಲ್ಲಿ ಕಚ್ಚಾ ಪಾಮ್ ಆಯಿಲ್ (ಸಿಪಿಒ) ಬೆಲೆ ಶೇ 53ರಷ್ಟು ಏರಿಕೆಯಾಗಿದೆ. ಸೋಯಾಬೀನ್ ಮತ್ತು ಸಾಸಿವೆ ಬೆಲೆಗಳು ಕೂಡ ನಿರಂತರವಾಗಿ ಏರುಗತಿಯಲ್ಲಿ ಸಾಗುತ್ತಿವೆ.

ಭಾರತದಲ್ಲಿ ಸಾಸಿವೆ, ಸೋಯಾ ಮತ್ತು ತಾಳೆ ಎಣ್ಣೆಯ ಬೆಲೆಗಳು ಸದ್ಯ ಗರಿಷ್ಠ ಮಟ್ಟದಲ್ಲಿವೆ. ವಿದೇಶದಿಂದ ಅಗ್ಗವಾಗಿ ಆಮದು ಮಾಡಿಕೊಳ್ಳುವುದರಿಂದ ಮುಂಬರುವ ದಿನಗಳಲ್ಲಿ ಬೆಲೆಗಳು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಮಾರುಕಟ್ಟೆ ಮೂಲಗಳ ಪ್ರಕಾರ, ದೇಶದಲ್ಲಿ ಕಚ್ಚಾ ಸಾಸಿವೆ ಸಗಟು ಬೆಲೆ ಗುರುವಾರ 10 ಕೆ.ಜಿ.ಗೆ 1,155 ರೂ., ಸೋಯಾ ಎಣ್ಣೆಯ ಸಗಟು ಬೆಲೆ 10 ಕೆ.ಜಿ.ಗೆ 995-1,010 ರೂ., ಪಾಮ್ ಆಯಿಲ್ (ಆರ್​​ಬಿಡಿ) 10 ಕೆ.ಜಿ.ಗೆ 935-945 ರೂ. ಆಸುಪಾಸಿನಲ್ಲಿ ಖರೀದಿ ಆಗುತ್ತಿದೆ. ಅದೇ ಸಮಯದಲ್ಲಿ ಸೂರ್ಯಕಾಂತಿ ಎಣ್ಣೆಯ ಸಗಟು ಬೆಲೆ 10 ಕೆ.ಜಿ.ಗೆ 1,180-1,220 ರೂ.ನಷ್ಟಿದೆ.

ಸಿಪಿಒ ಆನ್ ಮಲ್ಟಿ ಕಮೋಡಿಟಿ ಎಕ್ಸ್​ಚೇಂಜ್ (ಎಂಸಿಎಕ್ಸ್) 10 ಕೆ.ಜಿ. ಮೇಲೆ ಶೇ 2ರಷ್ಟು ಏರಿಕೆ ಕಂಡು 869.70 ರೂ.ಗೆ ತಲುಪಿದೆ. ಸಿಪಿಒ ಒಪ್ಪಂದ 2020ರ ಮೇ 7ರಂದು 10 ಕೆ.ಜಿ.ಗೆ 567.30 ರೂ. ದರ ಏರಿಕೆಯಾಗಿದೆ. ಸಿಪಿಒ ಬೆಲೆಗಳು ಕಳೆದ ಆರು ತಿಂಗಳಲ್ಲಿ ಶೇ 53ಕ್ಕಿಂತ ಅಧಿಕವಾಗಿ ಏರಿಕೆಯಾಗಿದೆ.

ಮಲೇಷ್ಯಾದಲ್ಲಿ ತಾಳೆ ಎಣ್ಣೆ ಉತ್ಪಾದನೆಯಲ್ಲಿನ ಕುಸಿತವು ಬೆಲೆ ಏರಿಕೆಗೆ ಕಾರಣವಾಗಿದೆ. ಕಚ್ಚಾ ತಾಳೆ ಎಣ್ಣೆ ಜತೆಗೆ ದೇಶದಲ್ಲಿ ಸಾಸಿವೆ ಮತ್ತು ಸೋಯಾಬೀನ್ ಬೆಲೆ ಏರಿಕೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಖಾದ್ಯ ತೈಲದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕೆಡಿಯಾ ಸಲಹಾ ನಿರ್ದೇಶಕ ಅಜಯ್ ಕೆಡಿಯಾ ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಸೋಯಾಬೀನ್ ಮತ್ತು ಸೋಯಾ ಎಣ್ಣೆಯ ಬೆಲೆಯೂ ಏರಿಕೆಯಾಗಿದೆ.

ABOUT THE AUTHOR

...view details