ಕರ್ನಾಟಕ

karnataka

ETV Bharat / business

ಅಫ್ಘಾನ್‌ನಲ್ಲಿನ ಅನಿಶ್ಚಿತತೆ: ಭಾರತ ವ್ಯಾಪಾರದ ಮೇಲೆ ಪರಿಣಾಮ - ವ್ಯಾಪಾರ

ಅಫ್ಘಾನಿಸ್ತಾನವನ್ನು ತಾಲಿಬಾನ್‌ಗಳ ಕೈಗೆ ನೀಡಿ ಅಧ್ಯಕ್ಷ ಅಶ್ರಫ್‌ ಘನಿ ದೇಶವನ್ನು ತೊರೆದಿದ್ದಾರೆ. ಇದು ಅಫ್ಘಾನ್‌ ಜೊತೆ ಭಾರತದ ದ್ವಿಪಕ್ಷೀಯ ವ್ಯಾಪಾರ ಹಾಗೂ ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳಿಗೂ ಹೊಡೆತ ನೀಡಲಿದೆ ಎಂದು ಕೈಗಾರಿಕಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Afghanistan situation to impact trade with India: Exporters
ಅಫ್ಘಾನ್‌ನಲ್ಲಿನ ಅನಿಶ್ಚಿತತೆ ಭಾರತದ ವ್ಯಾಪಾರ ಮೇಲೆ ಪರಿಣಾಮ ಬೀರುವ ಸಾಧ್ಯತೆ: ತಜ್ಞರ ಅಭಿಪ್ರಾಯ

By

Published : Aug 16, 2021, 5:24 PM IST

Updated : Aug 16, 2021, 5:30 PM IST

ನವದೆಹಲಿ: ಕಾಬೂಲ್ ತಾಲಿಬಾನ್‌ಗಳ ಕೈವಶ ಆಗಿರುವ ಅನಿಶ್ಚಿತ ಸಮಯದಲ್ಲಿ ಅಫ್ಘಾನಿಸ್ತಾನ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರದ ಮೇಲೆ ಗಮನಾರ್ಹವಾದ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ದೇಶೀಯ ರಫ್ತುದಾರರು ಅಫ್ಘಾನ್‌ ರಾಜಕೀಯ ಬೆಳವಣಿಗೆ ಗಮನದಲ್ಲಿಟ್ಟುಕೊಳ್ಳಬೇಕು. ವಿಶೇಷವಾಗಿ ಪಾವತಿಗಳಿಗೆ ಸಂಬಂಧಿಸಿದಂತೆ, ಯಾವುದರಲ್ಲಿ ಕ್ರೆಡಿಟ್ ವಿಮೆ ಪಡೆಯಬಹುದು ಎಂದನ್ನು ನೋಡಬೇಕಿದೆ ಎಂದು ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ) ಮಹಾನಿರ್ದೇಶಕ ಅಜಯ್ ಸಹಾಯ್ ಹೇಳಿದ್ದಾರೆ.

ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಅನಿಶ್ಚಿತತೆಯಿಂದಾಗಿ ಬೆಳವಣಿಗೆ ಕಡಿಮೆಯಾಗುತ್ತದೆ ಎಂದಿದ್ದಾರೆ. ಮಾಜಿ ಎಫ್‌ಐಇಒ ಅಧ್ಯಕ್ಷ ಹಾಗೂ ದೇಶದ ಪ್ರಮುಖ ರಫ್ತುದಾರ ಎಸ್ ಕೆ ಸರಾಫ್ ಕೂಡ ದ್ವಿಪಕ್ಷೀಯ ವ್ಯಾಪಾರದಲ್ಲಿ ಗಮನಾರ್ಹ ಕುಸಿತ ಉಂಟಾಗಲಿದೆ ಎಂದು ಹೇಳಿದ್ದಾರೆ.

ನಮ್ಮ ಉತ್ಪನ್ನಗಳು ಮುಟ್ಟುವ ಮುನ್ನ ಅಧ್ಯಕ್ಷರ ನಿರ್ಗಮನ

ಅವರಿಗೆ ನಮ್ಮ ಉತ್ಪನ್ನಗಳು ಬೇಕಾಗಿರುವುದರಿಂದ ನಾವು ಎಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆ ಇಲ್ಲ ಎಂತಲೂ ಅಭಿಪ್ರಾಯ ಪಟ್ಟಿದ್ದಾರೆ. ಕಾಬೂಲ್‌ನಲ್ಲಿ ತಾಲಿಬಾನ್‌ಗಳ ಕೈಗೆ ಸಿಗುವ ಮುನ್ನವೇ ಅಧ್ಯಕ್ಷ ಅಶ್ರಫ್ ಘನಿ ದೇಶವನ್ನು ತೊರೆದಿದ್ದರಿಂದ ಅಫ್ಘಾನಿಸ್ತಾನದಲ್ಲಿ ಅನಿಶ್ಚಿತ ಪರಿಸ್ಥಿತಿ ಉಂಟಾಗಿದೆ.

ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ನಿಯಂತ್ರಣವಿಲ್ಲದ ಕಾರಣ ನಿರ್ದಿಷ್ಟ ಸಮಯದವರೆಗೆ ವ್ಯಾಪಾರದಲ್ಲಿ ಸಂಪೂರ್ಣ ಸ್ಥಗಿತ ಉಂಟಾಗುತ್ತದೆ ಎಂದು ಎಫ್‌ಐಇಒ ಉಪಾಧ್ಯಕ್ಷ ಖಾಲಿದ್ ಖಾನ್ ಹೇಳಿದ್ದಾರೆ. ಅಫ್ಘಾನ್‌ ಸದ್ಯ ಭೂಕುಸಿತ ದೇಶವಾಗಿದೆ. ವಾಯು ಮಾರ್ಗವು ರಫ್ತು ಮಾಡುವ ಮುಖ್ಯ ಮಾಧ್ಯಮವಾಗಿದ್ದು, ಇದಕ್ಕೆ ಅಡ್ಡಿಯಾಗಲಿದೆ. ಅನಿಶ್ಚಿತತೆ ಕಡಿಮೆಯಾದ ನಂತರ ಮಾತ್ರ ವ್ಯಾಪಾರ ಪುನಾರಂಭವಾಗುತ್ತದೆ ಎಂದು ಖಾನ್ ತಿಳಿಸಿದ್ದಾರೆ.

ಇದನ್ನೂ ಓದಿ: ವಿಮಾನದಿಂದ ಜಾರಿಬಿದ್ದ ಅಫ್ಘಾನ್ ಪ್ರಜೆಗಳು..ಭಯಾನಕ ವಿಡಿಯೋ!

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರಾಧ್ಯಾಪಕರಾದ ಬಿಸ್ವಜಿತ್ ಧರ್, ಅಫ್ಘಾನಿಸ್ತಾನಕ್ಕೆ ಭಾರತದ ನೆರವು ದೇಶೀಯ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಸೃಷ್ಟಿಸುತ್ತಿದೆ. ಪ್ರಸ್ತುತ ಪರಿಸ್ಥಿತಿಯಿಂದಾಗಿ ಇದೆಲ್ಲವೂ ನಿಲ್ಲುತ್ತದೆ ಎಂದಿದ್ದಾರೆ.

ಪ್ಲ್ಯಾಸ್ಟಿಕ್ ರಫ್ತು ಉತ್ತೇಜನ ಮಂಡಳಿ (PLEXCONCIL) ಅಧ್ಯಕ್ಷ ಅರವಿಂದ ಗೋಯೆಂಕಾ ಮಾತನಾಡಿ, ಖಾಸಗಿಯವರು ಈಗ ಅಫ್ಘಾನಿಸ್ತಾನಕ್ಕೆ ರಫ್ತು ಮಾಡಲು ಮೂರನೇ ದೇಶಗಳ ಮೂಲಕ ವ್ಯವಹರಿಸಬೇಕಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಾಯಿ ಇಂಟರ್‌ನ್ಯಾಷನಲ್‌ನ ಮಾಲೀಕ ಮತ್ತು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುವವರಾದ ರಾಜೀವ್ ಮಲ್ಹೋತ್ರಾ, ಭಾರತದಿಂದ ರಫ್ತುಗಳು ಸಂಪೂರ್ಣವಾಗಿ ನಿಲ್ಲುತ್ತವೆ. ಏಕೆಂದರೆ ಈಗ ಸಕಾಲಿಕ ಪಾವತಿಯ ಸಮಸ್ಯೆ ಇರುತ್ತದೆ. ಪರಿಸ್ಥಿತಿಯನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

1.4 ಶತಕೋಟಿ ಡಾಲರ್​​​​ ವ್ಯವಹಾರ

ದ್ವಿಪಕ್ಷೀಯ ವ್ಯಾಪಾರವು 2020-21ರಲ್ಲಿ 1.4 ಶತಕೋಟಿ ಡಾಲರ್‌ಗಳಷ್ಟಿತ್ತು. 2019-20ರಲ್ಲಿ 1.52 ಬಿಲಿಯನ್‌ ಡಾಲರ್‌ಗಳಷ್ಟಿತ್ತು. ಭಾರತದಿಂದ ರಫ್ತುಗಳು 826 ದಶಲಕ್ಷ ಡಾಲರ್‌ ಹಾಗೂ 2020-21 ರಲ್ಲಿ ಆಮದನ್ನು 510 ದಶಲಕ್ಷ ಡಾಲರ್‌ಗೆ ಒಟ್ಟುಗೂಡಿಸಲಾಯಿತು.

ಆಫ್ಘನ್‌ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ಪ್ರಮುಖ ಉತ್ಪನ್ನಗಳೆಂದರೆ ಒಣಗಿದ ಒಣದ್ರಾಕ್ಷಿ, ಅಡಕೆ, ಬಾದಾಮಿ, ಅಂಜೂರ, ಪಿಸ್ತಾ, ಒಣಗಿದ ಏಪ್ರಿಕಾಟ್. ಇನ್ನೂ ತಾಜಾ ಹಣ್ಣುಗಳಾದ ಏಪ್ರಿಕಾಟ್, ಚೆರ್ರಿ, ಕಲ್ಲಂಗಡಿ ಮತ್ತು ಔಷಧೀಯ ಗಿಡಮೂಲಿಕೆಗಳು ಸೇರಿವೆ. ಆ ದೇಶಕ್ಕೆ ಭಾರತದಿಂದ ಆಫ್ಘಾನ್‌ಗೆ ರಫ್ತು ಮಾಡುತ್ತಿದ್ದ ಸರಕುಗಳಲ್ಲಿ ಚಹಾ, ಕಾಫಿ, ಮೆಣಸು ಮತ್ತು ಹತ್ತಿ ಸೇರಿವೆ. ಸದ್ಯದ ಪರಿಸ್ಥಿತಿಯಿಂದ ದ್ವಿಪಕ್ಷೀಯ ವ್ಯಾಪಾರದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇದೆ.

Last Updated : Aug 16, 2021, 5:30 PM IST

ABOUT THE AUTHOR

...view details