ಕರ್ನಾಟಕ

karnataka

ETV Bharat / business

ವಾಹನೋದ್ಯಮದ ಮೇಲೆ ಭಾರಿ ಹೊಡೆತ.. ಇಳಿಕೆಯಾಗುತ್ತಾ ಜಿಎಸ್​​ಟಿ ಹೆಚ್ಚುತ್ತಾ ಖರೀದಿ? - ವಾಹನೋದ್ಯಮ

ಸತತ 10 ನೇ ತಿಂಗಳು ಕಾರು ಮಾರಾಟದಲ್ಲಿ ಕುಸಿತ ಕಂಡಿದೆ. ದ್ವಿಚಕ್ರ ವಾಹನಗಳ ಮಾರಾಟ ಶೇ 22 ಕ್ಕಿಂತಲೂ ಕಡಿಮೆಯಾಗಿದೆ. ವಾಣಿಜ್ಯ ವಾಹನಗಳ ಮಾರಾಟ ಸುಮಾರು ಶೇ 39 ರಷ್ಟು ಕುಸಿತ ಕಂಡಿದೆ.

ವಾಹನೋದ್ಯಮ

By

Published : Sep 10, 2019, 11:02 AM IST

ನವದೆಹಲಿ: ಕಾರು ಮಾರಾಟವು ಆಗಸ್ಟ್​ನಲ್ಲಿ ಶೇ 41ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಭಾರತೀಯ ವಾಹನ ತಯಾರಕರ ಸಂಸ್ಥೆ (ಎಸ್​ಐಎಎಂ) 1997-98ರಿಂದ ಡೇಟಾ ಕಲೆಹಾಕಲು ಆರಂಭಿಸಿತು. ಈ ಸಂಸ್ಥೆಯ ಮಾಹಿತಿ ಅನ್ವಯ ಸತತ 10 ನೇ ತಿಂಗಳು ಕಾರು ಮಾರಾಟದಲ್ಲಿ ಕುಸಿತ ಕಂಡಿದೆ. ದ್ವಿಚಕ್ರ ವಾಹನಗಳ ಮಾರಾಟ ಶೇ 22 ಕ್ಕಿಂತಲೂ ಕಡಿಮೆಯಾಗಿದೆ. ವಾಣಿಜ್ಯ ವಾಹನಗಳ ಮಾರಾಟ ಸುಮಾರು ಶೇ 39 ರಷ್ಟು ಕುಸಿತ ಕಂಡಿದೆ.

ಬೇಡಿಕೆ ಹೆಚ್ಚಿಸಲು ಸರ್ಕಾರವು ಕಾರುಗಳ ಮೇಲಿನ ಜಿಎಸ್‌ಟಿಯನ್ನು ಅತ್ಯಧಿಕ ಸ್ಲ್ಯಾಬ್‌ನಿಂದ ಶೇ 28 ರಿಂದ ಶೇ.18ಕ್ಕೆ ಇಳಿಸಿದರೆ ವಾಹನ ಉದ್ಯಮದಲ್ಲಿ ಚೇತರಿಕೆ ಕಾಣಬಹುದಾಗಿದೆ. ಕಾರುಗಳ ಮೇಲಿನ ಪರಿಣಾಮಕಾರಿ ತೆರಿಗೆ ಸುಮಾರು ಶೇ43ರ ವರೆಗೆ ಇದೆ. ಇದು ಮಧ್ಯಮ ಗಾತ್ರದ ಮತ್ತು ದೊಡ್ಡ ಕಾರುಗಳು ಶೇ 28 ರಷ್ಟು ತೆರಿಗೆಗಿಂತ ಹೆಚ್ಚಿನ ತೆರಿಗೆ ಹಾಗೂ ಶೇ15 ರಷ್ಟು ಸೆಸ್ ಒಳಗೊಂಡಿದೆ. ಸೆಪ್ಟೆಂಬರ್ 20 ರಂದು ಜಿಎಸ್​ಟಿ ದರಗಳ ಬಗ್ಗೆ ಉನ್ನತ ನಿರ್ಧಾರ ತೆಗೆದುಕೊಳ್ಳುವ ಜಿಎಸ್​ಟಿ ಕೌನ್ಸಿಲ್ ಸಭೆ ನಡೆಯಲಿದೆ.

ವಾಹನ ವಲಯವು ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುವ ರಂಗಗಳಲ್ಲಿ ಒಂದು. ವಾರ್ಷಿಕವಾಗಿ ಸುಮಾರು 3 ಲಕ್ಷ ಕೋಟಿ ರೂ. ಅಂದರೆ ಉತ್ಪಾದನೆಯ ಒಟ್ಟು ದೇಶೀಯ ಉತ್ಪನ್ನದ ಅರ್ಧದಷ್ಟು ಪಾಲನ್ನು ವಾಹನ ಉದ್ಯಮ ಹೊಂದಿದೆ. ಶೇ15 ರಷ್ಟು ಜಿಎಸ್​ಟಿ, ನೇರವಾಗಿ ಮತ್ತು ಪರೋಕ್ಷವಾಗಿ 37 ಮಿಲಿಯನ್ ಜನರಿಗೆ ಉದ್ಯೋಗ ನೀಡಿದೆ.

ಆರ್ಥಿಕ ಕುಸಿತದಿಂದಾಗಿ ಕೇಂದ್ರದ ತೆರಿಗೆ ಸಂಗ್ರಹ ಕೇವಲ ಶೇ6 ರಷ್ಟು ಹೆಚ್ಚಾಗಿದೆ. 2022 ರವರೆಗೆ ಶೇ14ರಷ್ಟು ಅಥವಾ ಹೆಚ್ಚಿನ ವಾರ್ಷಿಕ ಜಿಎಸ್​ಟಿ ಬೆಳವಣಿಗೆಯನ್ನು ಕಾಣದ ರಾಜ್ಯಗಳಿಗೆ ಕೇಂದ್ರವು ಪರಿಹಾರ ನೀಡಬೇಕು. ಶೇ 10 ಜಿಎಸ್​ಟಿ ಕಡಿತವು 50,000 ಕೋಟಿ ರೂ. ನಷ್ಟಕ್ಕೆ ಕಾರಣವಾಗಬಹುದು. ವಾಹನಗಳ ಉತ್ಪಾದನೆಯಿಂದ ಬರುವ ಆದಾಯ ಈಗಾಗಲೇ ತಿಂಗಳಿಗೆ ಸುಮಾರು 15,000 ಕೋಟಿ ರೂ.ಗಳಿಂದ 10,000-11,000 ಕೋಟಿಗೆ ಇಳಿದಿದೆ.

ಅನೇಕ ರಾಜ್ಯಗಳು ಕಾರುಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಒಪ್ಪಿಗೆ ಸೂಚಿಸಿಲ್ಲ. ಯಾಕೆಂದರೆ, ಒಂದು ವೇಳೆ ವಾಹನದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದರೆ ರಾಜ್ಯಗಳ ಬೊಕ್ಕಸಕ್ಕೆ ಭಾರಿ ಹೊಡೆತ ಬೀಳಲಿದೆ. ‘ಇದು ಹೆಚ್ಚಿನ ಜಿಎಸ್​ಟಿ ದರವಲ್ಲ, ಇದು ಸ್ವಯಂ ಬಿಕ್ಕಟ್ಟಿಗೆ ಕಾರಣವಾಗಿದೆ. ಸೇವಾ ತೆರಿಗೆ ಹೊರತುಪಡಿಸಿ ಜಿಎಸ್‌ಟಿ ಪೂರ್ವ ಸಂಯೋಜಿತ ತೆರಿಗೆ ಶೇ 32 ರಿಂದ ಶೇ 54ರ ರವರೆಗೆ ಇರುತ್ತದೆ. ಈಗ ಪರಿಹಾರ ಸೆಸ್ ಸೇರಿದಂತೆ ತೆರಿಗೆ ಶೇ 29 ರಿಂದ ಶೆ 46ರ ವರೆಗೆ ಇರುತ್ತದೆ. ಅದನ್ನು ಮತ್ತಷ್ಟು ಕಡಿಮೆ ಮಾಡಲು ಕೇಂದ್ರವು ಉತ್ಸುಕವಾಗಿದ್ದರೆ, ಸೆಸ್ ಅನ್ನು ರದ್ದುಗೊಳಿಸಿ. ಶೇ 28ಕ್ಕೆ ಇಳಿಯುತ್ತದೆ’ ಎಂದು ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್ ಹೇಳುತ್ತಾರೆ.

ABOUT THE AUTHOR

...view details