ನವದೆಹಲಿ: ಸರಬರಾಜು ಸರಪಳಿ ಮತ್ತು ಲಾಕ್ಡೌನ್ನಿಂದ ಉಂಟಾದ ಸಮಸ್ಯೆಗಳ ಹೊರತಾಗಿಯೂ ದೇಶಿಯ ಉತ್ಪಾದನೆ ಮೊಟಕುಗೊಂಡಿದ್ದರೂ ಜೂನ್ ತ್ರೈಮಾಸಿಕದಲ್ಲಿ ಭಾರತಕ್ಕೆ ರವಾನೆಯಾದ ಪ್ರತಿ ನಾಲ್ಕು ಸ್ಮಾರ್ಟ್‌ಫೋನ್‌ಗಳಲ್ಲಿ ಮೂರು ಚೀನಾ ಮೂಲದ್ದವು ಎಂದು ಹೊಸ ವರದಿಯೊಂದು ತಿಳಿಸಿದೆ.
ಸಿಎಂಆರ್‌ನ 'ಇಂಡಿಯಾ ಮೊಬೈಲ್ ಹ್ಯಾಂಡ್‌ಸೆಟ್ ಮಾರ್ಕೆಟ್ ರಿವ್ಯೂ' ಪ್ರಕಾರ, ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳು ಎದುರಿಸುತ್ತಿರುವ ಸವಾಲುಗಳ ತಕ್ಷಣದ ಫಲಾನುಭವಿ ಸ್ಯಾಮ್‌ಸಂಗ್ ಆಗಿದೆ. ಸ್ಯಾಮ್‌ಸಂಗ್ ತನ್ನ ಕುಸಿಯುತ್ತಿರುವ ಮಾರುಕಟ್ಟೆ ಪಾಲಿನ ಮಧ್ಯೆಯೂ 2ನೇ ತ್ರೈಮಾಸಿಕದಲ್ಲಿ ಶೇ 24ರಷ್ಟು ಸುಧಾರಣೆ ಕಂಡಿದೆ.
ಮುಂಬರುವ ತ್ರೈಮಾಸಿಕಗಳಲ್ಲಿ ಸ್ಯಾಮ್‌ಸಂಗ್ ತನ್ನ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ಸಮರ್ಥವಾಗಿದೆಯೇ ಎಂಬುದನ್ನು ತನ್ನನ್ನು ತಾನು ಪರೀಕ್ಷೆಗೆ ಒಳಪಡಿಸಿಕೊಳ್ಳಬೇಕಿದೆ. ಚೀನಾದ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳ ಪ್ರಾಬಲ್ಯದ ಬೇಡಿಕೆ, ಸ್ಪರ್ಧೆ ಮತ್ತು ಸವಾಲುಗಳನ್ನು ಎದುರಿಸಬೇಕಿದೆ ಎಂದು ಸಿಎಂಆರ್‌ನ ಇಂಡಸ್ಟ್ರಿ ಇಂಟೆಲಿಜೆನ್ಸ್ ಗ್ರೂಪ್‌ನ ವ್ಯವಸ್ಥಾಪಕ ಅಮಿತ್ ಶರ್ಮಾ ಹೇಳಿದ್ದಾರೆ.