ಮುಂಬೈ(ಮಹಾರಾಷ್ಟ್ರ): ಖಾಸಗಿ ವಲಯದ ಯಸ್ ಬ್ಯಾಂಕ್ ಹಣಕಾಸು ಬಿಕ್ಕಟ್ಟಿಗೆ ಸಿಲುಕಿದ್ದು, ಇದೀಗ ಬ್ಯಾಂಕ್ ಷೇರು ಬೆಲೆ ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದು ವರದಿಯಾಗಿದೆ.
ಯಸ್ ಬ್ಯಾಂಕ್ ಷೇರುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿಯೇ ಶೇ.12.85 ರಿಂದ ಶೇ.34ರಷ್ಟು ಇಳಿಕೆ ಕಂಡಿದೆ. ಇನ್ನು ನಿಫ್ಟಿಯಲ್ಲೂ ಸಹ ಶೇ.4 ರಿಂದ 6 ರಷ್ಟು ಕುಸಿತ ಕಂಡಿದ್ದು, ಇಂದು ಬೆಳಗ್ಗೆ 11.40ರ ವೇಳೆಗೆ ಯಸ್ ಬ್ಯಾಂಕ್, 26.90 ಇಂದ 73.10ರಷ್ಟು ಇಳಿಕೆ ಕಂಡಿದೆ.
ಯಸ್ ಬ್ಯಾಂಕ್ ಸಾಲದ ಸುಳಿಗೆ ಸಿಲುಕಿ ತೀವ್ರ ನಷ್ಟ ಅನುಭವಿಸಿದ್ದರಿಂದ ಎಸ್ಬಿಐ 2020 ರ ಏಪ್ರಿಲ್ 3 ರವರೆಗೆ ಖಾಸಗಿ ಸಾಲಗಾರರ ಮೇಲೆ ನಿಷೇಧವನ್ನು ಹೇರಿದ್ದು, ಎಸ್ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಯಿಂದ 50,000 ವರೆಗೆ ಮಾತ್ರ ಹಣ ಹಿಂಪಡೆಯಲು ಗರಿಷ್ಠ ಮಿತಿ ವಿಧಿಸಿದೆ.
ಹಣಕಾಸು ಬಿಕ್ಕಟ್ಟನಿಂದ ಕಂಗೆಟ್ಟಿರುವ ಯಸ್ ಬ್ಯಾಂಕ್ ಮೇಲೆ ಆರ್ಬಿಐ ಗುರುವಾರದಂದು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ಇನ್ನು ಆರ್ಬಿಐ ಎಸ್ ಬ್ಯಾಂಕಿನ ಮೇಲೆ ನಿಷೇಧ ಹೇರಿರುವ ಪರಿಣಾಮ ಬ್ಯಾಂಕ್ ಠೇವಣಿದಾರರು ಮತ್ತು ಸಾಲಗಾರರ ಸಮಯೋಚಿತ ಮರುಪಾವತಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೂಡಿಸ್ ಅಭಿಪ್ರಾಯಪಟ್ಟಿದೆ.
ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯಸ್ ಬ್ಯಾಂಕ್ ಹಿಂದೊಮ್ಮೆ ಗ್ರಾಹಕರ ಮೆಚ್ಚುಗೆಗ ಪಾತ್ರವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ದೊಡ್ಡ ಮೊತ್ತದ ಸಾಲ ಮರುಪಾವತಿಯಾಗದ ಕಾರಣದಿಂದಾಗಿ ಹಣಕಾಸಿನ ಮುಗ್ಗಟ್ಟಿಗೆ ಗುರಿಯಾಗಿದ್ದು, ಇದರಿಂದಾಗಿ ಹೊಸ ಸಾಲ ನೀಡುವುದರ ಪ್ರಮಾಣವು ಇಳಿಕೆಯಾಗಿತ್ತು.