ಕರ್ನಾಟಕ

karnataka

ETV Bharat / business

ಜುಲೈನ​ ಸಗಟು ಹಣದುಬ್ಬರ 25 ತಿಂಗಳ ಕನಿಷ್ಠ ಮಟ್ಟಕ್ಕೆ... ವಿದ್ಯುತ್​, ತರಕಾರಿ ಬೆಲೆ? - ಡಬ್ಲ್ಯುಪಿಐ

ಇಂಧನ, ಆಹಾರ ಉತ್ಪನ್ನಗಳು ಹಾಗೂ ತಯಾರಿಕಾ ವಲಯದ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಕಂಡಿದ್ದರಿಂದ ಡಬ್ಲ್ಯುಪಿಐ ಕೂಡ ಕ್ಷೀಣಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಸಗಟು ವ್ಯಾಪಾರಿ

By

Published : Aug 15, 2019, 8:49 AM IST

ನವದೆಹಲಿ: ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿ ಹಣದುಬ್ಬರ ಜುಲೈನಲ್ಲಿ ಶೇ 1.08ಕ್ಕೆ ತಲುಪಿದ್ದು, ಇದು ಕಳೆದ 25 ತಿಂಗಳ ಕನಿಷ್ಠ ಮಟ್ಟವಾಗಿದೆ.

ಇಂಧನ, ಆಹಾರ ಉತ್ಪನ್ನಗಳು ಹಾಗೂ ತಯಾರಿಕಾ ವಲಯದ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಕಂಡಿದ್ದರಿಂದ ಡಬ್ಲ್ಯುಪಿಐ ಕೂಡ ಕ್ಷೀಣಿಸಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

ಕಳೆದ ವರ್ಷದ 2017ರ ಜೂನ್‌ನಲ್ಲಿ ಡಬ್ಲ್ಯುಪಿಐ ಶೇ 0.9ರ ಕನಿಷ್ಠ ಮಟ್ಟದಲ್ಲಿ ದಾಖಲಾಗಿತ್ತು. ಪ್ರಸಕ್ತ ವರ್ಷದ ಜೂನ್​​ನಲ್ಲಿ ಶೇ 2.02ರಷ್ಟಿದ್ದು, ಇದಕ್ಕೆ ಹೋಲಿಸಿದರೆ ಶೇ 0.94 ರಷ್ಟು ಕಡಿಮೆಯಾಗಿದೆ. 2018ರ ಜುಲೈನಲ್ಲಿ ಇದ್ದ ಶೇ. 5.27ಕ್ಕೆ ಹೋಲಿಸಿದರೆ ಶೇ 4.19ರಷ್ಟು ಇಳಿಕೆಯಾಗಿದೆ.

ಆಹಾರ ಉತ್ಪನ್ನ, ಆಲೂಗಡೆ, ತರಕಾರಿ, ಇಂಧನ ಮತ್ತು ವಿದ್ಯುತ್ ವಲಯಗಳ ಸಗಟು ಹಣದುಬ್ಬರ ಕ್ರಮವಾಗಿ ಶೇ. (-) 23.63, ಶೇ. (-) 24.27, ಶೇ. 10.67, ಶೇ. (-) 3.64 ಮತ್ತು ಶೇ. (-) 2.2ಕ್ಕೆ ಇಳಿದಿದೆ. ಇದರಿಂದಾಗಿ ಒಟ್ಟಾರೆ ಸಗಟು ಹಣದುಬ್ಬರದ ಪ್ರಮಾಣ ಕಡಿಮೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ABOUT THE AUTHOR

...view details