ವಾಷಿಂಗ್ಟನ್: ಕೊರೊನಾ ವೈರಸ್ ಹಬ್ಬುವ ಮುನ್ನ ಜಾಗತಿಕ ಆರ್ಥಿಕತೆ ನಿಧಾನಗತಿಯಲ್ಲಿ ಸಾಗುತ್ತಿತ್ತು. ಈಗ 2020ರಲ್ಲಿ ಕೋವಿಡ್ 19ರಿಂದ ಈ ಹಿಂದಿನದಕ್ಕಿಂತ ತೀವ್ರ ಹಿಂಜರಿತ ಅನುಭವಿಸಲಿದೆ ಎಂದು ಐಎಂಎಫ್ ಮುಖ್ಯಸ್ಥ ಕ್ರಿಸ್ಟಲಿನಾ ಜಾರ್ಜೀವಾ ಎಚ್ಚರಿಸಿದ್ದಾರೆ.
ಪ್ರಸ್ತುತದಲ್ಲಿನ ಬಿಕ್ಕಟ್ಟು ಅಭಿವೃದ್ಧಿ ಹೊಂದುತ್ತಿರುವ ಹಾಗೂ ಅನೇಕ ಉದಯೋನ್ಮುಖ ಮಾರುಕಟ್ಟೆಗಳ ರಾಷ್ಟ್ರಗಳ ವಿತ್ತೀಯ ನೀತಿ- ನಿರೂಪಕರಿಗೆ ಬೆದರಿಕೆಯಂತಹ ಕಠಿಣ ಸವಾಲುಗಳನ್ನು ಒಡ್ಡಿದೆ. ಈ ವರ್ಷದ ಮೊದಲಾರ್ಧದಲ್ಲಿ ದೊಡ್ಡ ಜಾಗತಿಕ ಸಂಕುಚಿತ ಬೆಳವಣಿಗೆ ಅನಿವಾರ್ಯವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಯ ಅಭಿವೃದ್ಧಿ ಸಮಿತಿಯನ್ನು ಉದ್ದೇಶಿಸಿ ಮಾತನಾಡಿದರು.
ವ್ಯಾಪಾರ ವಿವಾದಗಳು, ನೀತಿಗಳ ಅನಿಶ್ಚಿತತೆ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದ ಆರ್ಥಿಕತೆ ದುರ್ಬಲವಾಗಿತ್ತು. ಇದೇ ಸಂದರ್ಭದಲ್ಲಿಯೇ ಕೊರೊನಾ ವೈರಸ್ ವಿಶ್ವ ಆರ್ಥಿಕತೆ ಮೇಲೆ ಅಪ್ಪಳಿಸಿದೆ ಎಂದರು.