ಕರ್ನಾಟಕ

karnataka

ETV Bharat / business

ಪುರುಷ ಸಮನಾದ ಕಾನೂನು ಹಕ್ಕು: ಭಾರತಕ್ಕೆ ಸೌದಿ, ಟರ್ಕಿಗಿಂತ ಕಳಪೆ ಶ್ರೇಯಾಂಕ - ಮಹಿಳಾ ಕಾರ್ಮಿಕ ಶಕ್ತಿ

ವಿಶ್ವದ 190 ಆರ್ಥಿಕತೆಗಳಲ್ಲಿ ಮಹಿಳೆಯರ ಆರ್ಥಿಕ ಅವಕಾಶದ ಮೇಲೆ ಕಾನೂನುಗಳು ಮತ್ತು ನಿಯಮಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಅಧ್ಯಯನ ಮಾಡಲಾಗಿದೆ. 2021ರ ಆವೃತ್ತಿಯು 2019ರ ಸೆಪ್ಟೆಂಬರ್ ಮತ್ತು 2020ರ ಅಕ್ಟೋಬರ್ ನಡುವೆ ನಡೆಸಿದ ಸುಧಾರಣೆಗಳನ್ನು ಇದು ಒಳಗೊಂಡಿದೆ. ಮಹಿಳೆಯರಿಗೆ ಹಕ್ಕುಗಳನ್ನು ನೀಡುವಲ್ಲಿ ಭಾರತವು ಶೇ 74.4ರಷ್ಟು ಆದ್ಯತೆ ನೀಡುವ ಮೂಲಕ ಜಾಗತಿಕವಾಗಿ 123ನೇ ಸ್ಥಾನ ಪಡೆದುಕೊಂಡಿದೆ.

International women's day
International women's day

By

Published : Mar 3, 2021, 9:15 PM IST

ನವದೆಹಲಿ: ವಿಶ್ವದಾದ್ಯಂತ ಮಹಿಳೆಯರಿಗೆ ಈಗಲೂ ಪುರುಷರ ಕಾನೂನು ಹಕ್ಕುಗಳ ಪೈಕಿ ನಾಲ್ಕರಲ್ಲಿ ಮೂರರಷ್ಟು ಮಾತ್ರ ಇರುವುದಾಗಿ ಎಂದು ವಿಶ್ವ ಬ್ಯಾಂಕ್​ನ ಮಹಿಳೆಯರು, ವ್ಯವಹಾರ ಮತ್ತು ಕಾನೂನು 2021ರ ವರದಿ ಹೇಳಿದೆ.

ಮಹಿಳೆಯರು, ವ್ಯವಹಾರ ಮತ್ತು ಕಾನೂನು ಸೂಚ್ಯಂಕದಲ್ಲಿನ ಉತ್ತಮ ಕಾರ್ಯಕ್ಷಮತೆಯ ಅಭಿವೃದ್ಧಿ ಫಲಿತಾಂಶಗಳಲ್ಲಿ ಕಿರಿದಾದ ಲಿಂಗ ಅಂತರವು ಹೆಚ್ಚಿನ ಮಹಿಳಾ ನೀತಿ ನಿರೂಪಕರು, ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಮತ್ತು ಕಡಿಮೆ ದುರ್ಬಲ ಉದ್ಯೋಗಕ್ಕೆ ಸಂಬಂಧಿಸಿದೆ. ಮಹಿಳೆಯರ ಆರ್ಥಿಕ ಸೇರ್ಪಡೆಗೆ ಉತ್ತೇಜನ ನೀಡುವ ಕಾನೂನು ವಾತಾವರಣವು ಬಿಕ್ಕಟ್ಟಿನ ಸಂದರ್ಭದಲ್ಲಿ ಅವರನ್ನು ಕಡಿಮೆ ದುರ್ಬಲಗೊಳಿಸುತ್ತದೆ.

ಮಹಿಳೆಯರಿಗೆ ಹಕ್ಕುಗಳನ್ನು ನೀಡುವಲ್ಲಿ ಭಾರತವು ಶೇ 74.4ರಷ್ಟು ಆದ್ಯತೆ ನೀಡುವ ಮೂಲಕ ಜಾಗತಿಕವಾಗಿ 123ನೇ ಸ್ಥಾನ ಪಡೆದುಕೊಂಡಿದೆ. ಸೌದಿ ಮತ್ತು ಟರ್ಕಿ ದೇಶಗಳಿಗಿಂತಲೂ ಭಾರತದ ಹಿಂದಿದೆ.

190 ಆರ್ಥಿಕತೆಗಳಲ್ಲಿ ಮಹಿಳೆಯರ ಆರ್ಥಿಕ ಅವಕಾಶದ ಮೇಲೆ ಕಾನೂನುಗಳು ಮತ್ತು ನಿಯಮಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಮಹಿಳೆಯರು, ವ್ಯವಹಾರ ಮತ್ತು ಕಾನೂನು ಅಧ್ಯಯನ ಮಾಡಿದೆ. 2021ರ ಆವೃತ್ತಿಯು 2019ರ ಸೆಪ್ಟೆಂಬರ್ ಮತ್ತು 2020ರ ಅಕ್ಟೋಬರ್ ನಡುವೆ ನಡೆಸಿದ ಸುಧಾರಣೆಗಳನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ: ಬ್ರಿಟನ್​ನಲ್ಲಿ ನಾರಾಯಣ ಮೂರ್ತಿ ಅಳಿಯನ ಬಜೆಟ್​ ಕಮಾಲ್​: ಇಂಗ್ಲಿಷರಿಗೆ ಸುನಾಕ್​ ಕೊಟ್ಟ ಗಿಫ್ಟ್‌ಗಳಿವು..

ಕೆಲಸದ ಸ್ಥಳದಲ್ಲಿ ಹಕ್ಕುಗಳು, ಮದುವೆ ವೇಳೆ ಮತ್ತು ಮಕ್ಕಳು ಪಡೆದ ನಂತರ ಕಾನೂನು ಹೇಗೆ ತಡೆಯುತ್ತದೆ ಅಥವಾ ತಮ್ಮ ಸ್ವಂತ ವ್ಯವಹಾರಗಳನ್ನು ನಡೆಸಲು ಅನುಮತಿ ಹಾಗೂ ನಿವೃತ್ತಿಯವರೆಗೆ ಸ್ವತ್ತುಗಳನ್ನು ನಿರ್ವಹಣೆ ಸೇರಿ ಎಂಟು ಸೂಚಕಗಳ ಮೂಲಕ ವಿಶ್ಲೇಷಿಸಲಾಗಿದೆ. 2020ರಲ್ಲಿ ಜಾಗತಿಕ ಸರಾಸರಿ ಸ್ಕೋರ್ 76.1 ಆಗಿದೆ, 2019ರಲ್ಲಿ ಇದು 75.5ರಷ್ಟಿತ್ತು.

ವಿಶ್ವ ಬ್ಯಾಂಕ್ ಇತ್ತೀಚೆಗೆ ಪ್ರಕಟಿಸಿರುವ ಮಹಿಳಾ, ವ್ಯವಹಾರ ಮತ್ತು ಕಾನೂನು 2021ರ ವರದಿಯ ಪ್ರಕಾರ, ಮಹಿಳೆಯರಿಗೆ ಸಂಪೂರ್ಣ ಕಾನೂನು ರಕ್ಷಣೆ ನೀಡುವ ವಿಶ್ವದ ಹತ್ತು ದೇಶಗಳೆಂದರೇ ಬೆಲ್ಜಿಯಂ, ಫ್ರಾನ್ಸ್, ಡೆನ್ಮಾರ್ಕ್, ಲಾಟ್ವಿಯಾ, ಲಕ್ಸೆಂಬರ್ಗ್, ಸ್ವೀಡನ್, ಕೆನಡಾ, ಐಸ್​ಲ್ಯಾಂಡ್, ಪೋರ್ಚುಗಲ್ ಮತ್ತು ಐರ್ಲೆಂಡ್ ಸೇರಿವೆ. ಈ ರಾಷ್ಟ್ರಗಳು ಕಾನೂನು ದೃಷ್ಟಿಕೋನದಿಂದ ಪುರುಷ ಮತ್ತು ಮಹಿಳೆಯರಿಗೆ ಸಂಪೂರ್ಣ ಸಮಾನ ಹಕ್ಕುಗಳನ್ನು ನೀಡುತ್ತಿವೆ. ವಿಶ್ವದ 194 ರಾಷ್ಟ್ರಗಳಲ್ಲಿ ತೊಂಬತ್ತನಾಲ್ಕು ದೇಶಗಳು ಶೇ 80ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಸ್ಥಾನದಲ್ಲಿವೆ. 2020ರಲ್ಲಿ 87 ರಿಂದ ಹೆಚ್ಚಾಗಿದೆ.

ABOUT THE AUTHOR

...view details