ನವದೆಹಲಿ: ಭಾರತವು ಈ ಆರ್ಥಿಕ ವರ್ಷದಲ್ಲಿ ಶೇ. 7.5ರಷ್ಟು ಬೆಳವಣಿಗೆ ದರ ಸಾಧಿಸಲಿದೆ. ಮುಂದಿನ ಎರಡು ಆರ್ಥಿಕ ವರ್ಷಗಳಲ್ಲಿಯೂ ಇದೇ ಪ್ರಮಾಣದಲ್ಲಿ ಬೆಳವಣಿಗೆ ಮುಂದುವರೆಯಲಿದೆ ಎಂದು ವಿಶ್ವಬ್ಯಾಂಕ್ನ ಗ್ಲೋಬಲ್ ಎಕನಾಮಿಕ್ ಪ್ರಾಸ್ಪೆಕ್ಟ್ ರಿಪೋರ್ಟ್ನಲ್ಲಿ ಪ್ರಕಟಿಸಲಾಗಿದೆ.
ಅನುಕೂಲಕರ ಆರ್ಥಿಕ ನೀತಿಯಿಂದ ಖಾಸಗಿ ಸಹಭಾಗಿತ್ವ ಹಾಗೂ ಬಂಡವಾಳ ಹೂಡಿಕೆ ಆರ್ಥಿಕ ಬೆಳವಣಿಗೆಯನ್ನು ಸಬಲಗೊಳಿಸಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಗುರಿಯಂತೆ ಹಣದುಬ್ಬರವೂ ಕುಸಿತ ಕಾಣಲಿದೆ. ಇನ್ನು ಫೆಬ್ರವರಿಯಲ್ಲಿ ಭಾರತ-ಪಾಕಿಸ್ತಾನದ ನಡುವೆ ಉಂಟಾದ ಉದ್ವಿಗ್ನ ಸ್ಥಿತಿಯಿಂದಾಗಿ ದಕ್ಷಿಣ ಏಷ್ಯಾದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಿತು ಎನ್ನಲಾಗಿದೆ.