ನವದೆಹಲಿ :ಭಾರತೀಯ ಕಸ್ಟಮ್ಸ್ ಕಾರ್ಯವೈಖರಿಯ ಕೆಲಸವೆಲ್ಲ ವ್ಯಾಪಾರದ ಸುಲಲತೆ ಮತ್ತು ವ್ಯಾಪಾರಕ್ಕೆ ಬೇಕಾದ ಸೌಲಭ್ಯಗಳನ್ನು ಸುಲಭಗೊಳಿಸುವತ್ತ ಬದಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕಸ್ಟಮ್ಸ್ ದಿನಾಚರಣೆಯ ವೇಳೆ ತಮ್ಮ ಸಂದೇಶ ನೀಡಿದ ಸೀತಾರಾಮನ್ ಅವರು, ಕಸ್ಟಮ್ಸ್ ಅಧಿಕಾರಿಗಳು ಜನರು ಕೇಂದ್ರಿತ ವಿಧಾನ ಅಳವಡಿಸಿಕೊಳ್ಳುತ್ತಿದ್ದು, ಇಲಾಖೆಯ ಕಾರ್ಯಚಟುವಟಿಕೆಯ ಪರಿವರ್ತನೆಯ ಚಟುವಟಿಕೆಗಳು ಮತ್ತಷ್ಟು ವೃದ್ಧಿಸುತ್ತಿವೆ ಎಂದರು.
ಭಾರತೀಯ ಕಸ್ಟಮ್ಸ್ ಕೆಲಸದ ಮಾದರಿ ಬದಲಾವಣೆಯಾಗಿದೆ. ವ್ಯಾಪಾರ ಮತ್ತು ವ್ಯಾಪಾರ ಸೌಲಭ್ಯ ಸುಲಭಗೊಳಿಸುವತ್ತ ಗಮನ ಹರಿಸಲಾಗಿದೆ. ಜನರ ಕೇಂದ್ರಿತ ವಿಧಾನ ಅಳವಡಿಸಿಕೊಳ್ಳುವುದು ಕಸ್ಟಮ್ಸ್ ಕಾರ್ಯನಿರ್ವಹಣೆಯ ಪರಿವರ್ತಕ ಪ್ರಕ್ರಿಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದರು.