ಕರ್ನಾಟಕ

karnataka

ETV Bharat / business

ಜಿಡಿಪಿ 7 ವರ್ಷದ ಕನಿಷ್ಠ ಮಟ್ಟದಲ್ಲಿದ್ದರೂ ವೃದ್ಧಿಯ ಕುಸಿತ ಸುಧಾರಿಸಿದೆ: ವಿತ್ತೀಯ ಸಚಿವಾಲಯ - ಜಿಡಿಪಿ ಬೆಳವಣಿಗೆ 7 ವರ್ಷದಲ್ಲಿ ಕನಿಷ್ಠ

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) 2019-20ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಮೇಲ್ಮುಖವಾಗಿ ಶೇ 5.6ಕ್ಕೆ (ಶೇ 5ರಿಂದ) ಪರಿಷ್ಕರಿಸಿದ್ದರೆ, ಎರಡನೇ ತ್ರೈಮಾಸಿಕದಲ್ಲಿ ಶೇ 5.1ಕ್ಕೆ (ಶೇ4.5 ರಿಂದ) ಪರಿಷ್ಕರಿಸಿತ್ತು.

Atanu Chakraborty
ಅತನು ಚಕ್ರವರ್ತಿ

By

Published : Feb 28, 2020, 8:05 PM IST

ನವದೆಹಲಿ: 2020ರ ಡಿಸೆಂಬರ್ ಅಂತ್ಯದ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯು ಸುಮಾರು ಏಳು ವರ್ಷಗಳ ಕನಿಷ್ಠ ಶೇ 4.7ಕ್ಕೆ ಇಳಿದಿದ್ದರಿಂದ ಆರ್ಥಿಕ ಬೆಳವಣಿಗೆಯ ಕುಸಿತವು ಕಡಿಮೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) 2019-20ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ಅಂದಾಜುಗಳನ್ನು ಮೇಲ್ಮುಖವಾಗಿ ಶೇ 5.6ಕ್ಕೆ (ಶೇ 5ರಿಂದ) ಪರಿಷ್ಕರಿಸಿದ್ದರೆ, ಎರಡನೇ ತ್ರೈಮಾಸಿಕದಲ್ಲಿ ಶೇ 5.1ಕ್ಕೆ (ಶೇ4.5 ರಿಂದ) ಪರಿಷ್ಕರಿಸಿತ್ತು.

'ನಾವು ಈಗಾಗಲೇ ಕೆಳ ಹಂತದಿಂದ ಪಾರಾಗಿದ್ದೇವೆ' ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅತನು ಚಕ್ರವರ್ತಿ ಹೇಳಿದ್ದಾರೆ.

ದೇಶದ ಪ್ರಮುಖ್ಯ ವಲಯವಾದ ಕೈಗಾರಿಕೆಗಳ ಬೆಳವಣಿಗೆಯು ಡಿಸೆಂಬರ್ ಮತ್ತು ಜನವರಿಯಲ್ಲಿ ವೃದ್ಧಿಯ ಲಕ್ಷಣ ಕಂಡಿದೆ. ಇದು ಹಣಕಾಸಿನ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಉತ್ಪಾದನಾ ವಲಯಕ್ಕೆ ಉತ್ತಮವಾಗಿದೆ. ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಮಾರಣಾಂತಿಕ ಕೊರೊನಾ ವೈರಸ್​ ಒಂದು ತೆರೆದುಕೊಳ್ಳುವ ಕಥೆ ಎಂದ ಚರ್ಕವರ್ತಿ ಹೇಳಿದರು.

ABOUT THE AUTHOR

...view details