ನಾಶಿಕ್: ಈರುಳ್ಳಿ ರಫ್ತು ನಿಷೇಧವನ್ನು ಹಿಂತೆಗೆದುಕೊಳ್ಳಲು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುವುದಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.
ಈರುಳ್ಳಿ ರಫ್ತು ನಿಷೇಧ ವಾಪಸಾತಿಗೆ ಗೋಯಲ್ ಭೇಟಿ ಮಾಡಲಿರುವ ಪವಾರ್.. - ಕೇಂದ್ರ ಸಚಿವ ಪಿಯೂಷ್ ಗೋಯಲ್
ಈರುಳ್ಳಿ ರಫ್ತು ನಿಷೇಧವನ್ನು ತೆಗೆದುಹಾಕುವ ಬೇಡಿಕೆಯೊಂದಿಗೆ ನಾನು ಒಂದೆರಡು ದಿನಗಳಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುತ್ತೇನೆ. ಈರುಳ್ಳಿ ಶೇಖರಣೆಯ ಮೇಲಿನ ನಿರ್ಬಂಧ ಸಹ ಸಡಿಲಿಸಬೇಕು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮನವಿ ಮಾಡಿದರು.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಘೋಷಿಸಿರುವ ಸಾಲ ಮನ್ನಾ 85 ಪ್ರತಿಶತ ರೈತರಿಗೆ ಪ್ರಯೋಜನವಾಗಲಿದೆ. ಏಕೆಂದರೆ, ಅವರ ಸಾಲದ ಪ್ರಮಾಣ 2 ಲಕ್ಷ ರೂ.ಗಿಂತ ಕಡಿಮೆ ಎಂದರು. ಈರುಳ್ಳಿ ರಫ್ತು ನಿಷೇಧವನ್ನು ತೆಗೆದು ಹಾಕುವ ಬೇಡಿಕೆಯೊಂದಿಗೆ ನಾನು ಒಂದೆರಡು ದಿನಗಳಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡುತ್ತೇನೆ. ಈರುಳ್ಳಿ ಶೇಖರಣೆಯ ಮೇಲಿನ ನಿರ್ಬಂಧ ಸಹ ಸಡಿಲಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದ ರೈತರು ಅಕಾಲಿಕ ಮಳೆಯಿಂದಾಗಿ ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ನೆರವಾಗಬೇಕು. ಶೇ.85ರಷ್ಟು ರೈತರ ಸಾಲ ₹ 2 ಲಕ್ಷಕ್ಕಿಂತ ಕಡಿಮೆ ಇದೆ. ಮಹಾ ವಿಕಾಸ್ ಅಘಡಿ ಅಡಿ ಸರ್ಕಾರವು ಸಾಲ ಮನ್ನಾ ಮಾಡಿ ಅವರಿಗೆ ನೆರವಾಗಿದೆ. ಉಳಿದ ಶೇ.15ರಷ್ಟು ರೈತರಿಗೆ ಮುಂದಿನ ಬಜೆಟ್ನಲ್ಲಿ ಸಾಲ ಮನ್ನಾ ಮಾಡಲಾಗುವುದು ಎಂದು ಪವಾರ್ ಭರವಸೆ ನೀಡಿದರು.