ಕರ್ನಾಟಕ

karnataka

ETV Bharat / business

ಕೊರೊನಾ ಮುನ್ನ ಆರ್ಥಿಕ ಕುಸಿತ ಹೇಗೆ? ಸೀತಾರಾಮನ್ ದಯವಿಟ್ಟು ಉತ್ತರಿಸಿ: ಚಿದಂಬರಂ - ಭಾರತದ ಆರ್ಥಿಕತೆ

ಸಾಂಕ್ರಾಮಿಕವು ದೇವರ ಕಾರ್ಯವಾಗಿದ್ದರೆ, 2017-18, 2018-19 ಮತ್ತು 2019-20ರ ಅವಧಿಯಲ್ಲಿ ಆರ್ಥಿಕತೆಯ ಅಸಮರ್ಪಕ ನಿರ್ವಹಣೆಯನ್ನು ನಾವು ಹೇಗೆ ವಿವರಿಸಬೇಕು? ಸಾಂಕ್ರಾಮಿಕವು ಭಾರತವನ್ನು ಅಪ್ಪಳಿಸುವ ಮೊದಲು ಏನಿತ್ತು ಎಂದು ಟ್ವೀಟ್​​ ಮೂಲಕ ಪ್ರಶ್ನಿಸಿದ್ದಾರೆ.

FM
ಹಣಕಾಸು ಸಚಿವರು

By

Published : Aug 29, 2020, 3:03 PM IST

ನವದೆಹಲಿ:ಆರ್ಥಿಕ ಕುಸಿತವನ್ನು 'ಆ್ಯಕ್ಟ್ ಆಫ್ ಗಾಡ್' (ದೇವರ ಚಟುವಟಿಕೆ) ಎಂದು ಹೇಳಿಕೆ ನೀಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.

'ದೇವರ ಸಂದೇಶಗಾರ್ತಿ'ಯಾದ ನಿರ್ಮಲಾ ಸೀತಾರಾಮನ್ ಅವರೇ ಕೊರೊನಾ ಮುಂಚಿನ ಆರ್ಥಿಕ ಅಸಮರ್ಪಕತೆ ಹೇಗಾಯಿತು ಎಂಬುದನ್ನು ವಿವರಿಸಿ ಹೇಳಬಹುದೇ ಎಂದು ವ್ಯಂಗ್ಯವಾಗಿ ಟ್ವಿಟ್ಟರ್​ನಲ್ಲಿ ಪ್ರಶ್ನಿಸಿದ್ದಾರೆ.

'ಆ್ಯಕ್ಟ್​ ಆಫ್​ ಗಾಡ್​' ಎಂಬ ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಗೆ ತೀವ್ರ ತೊಂದರೆಯಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದರಿಂದ ಸಂಕೋಚನ ಕಾಣುತ್ತಿದೆ ಎಂದು ಸೀತಾರಾಮನ್ ಅವರು ಗುರುವಾರ ನಡೆದಿದ್ದ ಜಿಎಸ್​ಟಿ ಮಂಡಳಿ ಸಭೆ ಬಳಿಕ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಚಿದಂಬರಂದ ಟ್ವೀಟ್

ಜಿಎಸ್​​ಟಿ ಬಾಕಿ ಪಾವತಿಗೆ ರಾಜ್ಯಗಳ ಮುಂದಿ ಇರಿಸಿರುವ ಎರಡು ಆಯ್ಕೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಚಿದಂಬರಂ, ಜಿಎಸ್​​ಟಿ ಪರಿಹಾರದ ಅಂತರ ನಿವಾರಿಸಲು ಮೋದಿ ಸರ್ಕಾರ ರಾಜ್ಯಗಳಿಗೆ ನೀಡಿರುವ ಎರಡು ಆಯ್ಕೆಗಳು ಸ್ವೀಕಾರಾರ್ಹವಲ್ಲ ಎಂದರು.

ಚಿದಂಬರಂದ ಟ್ವೀಟ್

ಮೊದಲ ಆಯ್ಕೆಯಡಿ ರಾಜ್ಯಗಳು ತಮ್ಮ ಭವಿಷ್ಯದ ಒಪ್ಪಂದಗಳಿಗೆ ಪರಿಹಾರವಾಗಿ ಸೆಸ್ ಅಡಿಯಲ್ಲಿ ವಾಗ್ದಾನ ಮಾಡುವ ಮೂಲಕ ಸಾಲ ಪಡೆಯಲು ಕೇಳಲಾಗುತ್ತದೆ. ಆರ್ಥಿಕ ಹೊರೆ ಸಂಪೂರ್ಣವಾಗಿ ರಾಜ್ಯಗಳ ಮೇಲೆ ಬೀಳುತ್ತದೆ ಎಂದು ಚಿದಂಬರಂ ಹೇಳಿದರು.

ಎರಡನೆಯ ಆಯ್ಕೆಯಡಿ ರಾಜ್ಯಗಳನ್ನು ಆರ್‌ಬಿಐ ಗವಾಕ್ಷಿಯಿಂದ ಸಾಲ ಪಡೆಯಲು ಕೇಳಲಾಗುತ್ತದೆ. ಇದು ಹೆಚ್ಚು ಮಾರುಕಟ್ಟೆ ಸಾಲವಾಗಿದೆ. ಸಂಪೂರ್ಣ ಆರ್ಥಿಕ ಹೊರೆ ರಾಜ್ಯಗಳ ಮೇಲೆ ಬೀಳುತ್ತದೆ. ಆರ್ಥಿಕ ಹೊಣೆಗಾರಿಕೆಯಿಂದ ಪಾರಾಗಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದು ಜನತೆಗೆ ಮಾಡುತ್ತಿರುವ ದ್ರೋಹ ಮತ್ತು ಕಾನೂನಿನ ನೇರ ಉಲ್ಲಂಘನೆ ಎಂದು ಸರಣಿ ಟ್ವೀಟ್​​ನಲ್ಲಿ ಆರೋಪಿಸಿದರು.

ABOUT THE AUTHOR

...view details