ನವದೆಹಲಿ: ಮಂದಗತಿಯಲ್ಲಿ ದೇಶದ ಆರ್ಥಿಕತೆಯ ದೃಷ್ಟಿಯಿಂದ ಇಂದು ಮಂಡನೆ ಆಗಲಿರುವ 2020-21ನೇ ಸಾಲಿನ ಕೇಂದ್ರದ ಮುಂಗಡ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಹು ಸವಾಲಿನಿಂದ ಕೂಡಿರಲಿದೆ.
ಸವಾಲಿನ ಬಜೆಟ್ ಮಂಡನೆಗೆ ನಿರ್ಮಲಾ ಸಜ್ಜು... ಮೋದಿ 2.0 ಲೆಕ್ಕಾಚಾರಕ್ಕೆ ವಿಘ್ನಗಳ ಸರಮಾಲೆ
ನಿರ್ಮಲಾ ಸೀತಾರಾಮನ್ ಅವರ ಎರಡನೇ ಆಯವ್ಯಯ ಇದಾಗಿದ್ದು, ಸಂಸತ್ತಿನಲ್ಲಿ ಬೆಳಗ್ಗೆ 11ಕ್ಕೆ ಬಜೆಟ್ ಮಂಡನೆ ಆರಂಭವಾಗಲಿದೆ. ಸಾಮಾನ್ಯವಾಗಿ ಬಜೆಟ್ ಅನ್ನು 90-ರಿಂದ 120 ನಿಮಿಷಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಕಳೆದ ಬಾರಿ 127 ನಿಮಿಷಗಳ ಕಾಲ ನಿರರ್ಗಳವಾಗಿ ಬಜೆಟ್ ಭಾಷಣ ಮಂಡಿಸಿದ್ದರು. ಇದರ ಮಧ್ಯೆ ಚಾಣಕ್ಯ ನೀತಿ, ಉರ್ದು ಶಾಯರಿ, ತಮಿಳಿನ ತಿರುವಳ್ಳುವರ್ ಹೇಳಿಕೆ, ಕಥೆ, ಸ್ವಾಮಿ ವಿವೇಕಾನಂದ ಹೇಳಿಕೆ, ಉದ್ಯಮಿಗಳ ಕೋಟ್‌ಗಳನ್ನು ಪ್ರಸ್ತಾಪಿಸಿದ್ದರು. ಈ ಬಾರಿ ಯಾವರೀತಿಯ ನಡೆ ಅನುಸರಿಸುತ್ತಾರೋ ಎದುರುನೋಡಲಾಗುತ್ತಿದೆ.
ನಿರ್ಮಲಾ ಅವರ ಎರಡನೇ ಆಯವ್ಯಯ ಇದಾಗಿದ್ದು, ಸಂಸತ್ತಿನಲ್ಲಿ ಬೆಳಗ್ಗೆ 11ಕ್ಕೆ ಬಜೆಟ್ ಮಂಡನೆ ಆರಂಭವಾಗಲಿದೆ. ಸಾಮಾನ್ಯವಾಗಿ ಬಜೆಟ್ ಅನ್ನು 90-ರಿಂದ 120 ನಿಮಿಷಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಕಳೆದ ಬಾರಿ 127 ನಿಮಿಷಗಳ ಕಾಲ ನಿರರ್ಗಳವಾಗಿ ಬಜೆಟ್ ಭಾಷಣ ಮಂಡಿಸಿದ್ದರು. ಇದರ ಮಧ್ಯೆ ಚಾಣಕ್ಯ ನೀತಿ, ಉರ್ದು ಶಾಯರಿ, ತಮಿಳಿನ ತಿರುವಳ್ಳುವರ್ ಹೇಳಿಕೆ, ಕಥೆ, ಸ್ವಾಮಿ ವಿವೇಕಾನಂದ ಹೇಳಿಕೆ, ಉದ್ಯಮಿಗಳ ಕೋಟ್‌ಗಳನ್ನು ಪ್ರಸ್ತಾವಿಸಿದ್ದರು. ಈ ಬಾರಿ ಯಾವ ರೀತಿಯ ನಡೆ ಅನುಸರಿಸುತ್ತಾರೋ ಎದುರುನೋಡಲಾಗುತ್ತಿದೆ.
ಕಳೆದ ವರ್ಷದಿಂದ ಜಿಡಿಪಿ ಬೆಳವಣಿಯು ಕುಸಿಯುತ್ತ ಸಾಗುತ್ತಿದೆ. ಆರ್ಥಕ ಸ್ಥಿತಿ ಸುಧಾರಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಉದ್ಯೋಗ ಸೃಷ್ಟಿಗೆ ಒತ್ತು, ಹಣದುಬ್ಬರ ನಿಯಂತ್ರಣ, ಬೇಡಿಕೆಗಳನ್ನು ಉತ್ತೇಜಿಸಲು ತೆರಿಗೆ ಭಾರ ಇಳಿಕೆ, ಕೃಷಿಕರ ಆದಾಯ ವೃದ್ಧಿಗೆ ಮಹತ್ವದ ಘೋಷಣೆ, ವಿತ್ತೀಯ ಕೊರತೆ ಗುರಿ ನಿರ್ವಹಣೆಯ ಮಧ್ಯೆ ವಲಯವಾರು ಅನುದಾನ ನೀಡಿಕೆಯಂತಹ ದೊಡ್ಡ ಸವಾಲುಗಳು ಹಣಕಾಸು ಸಚಿವ ಮುಂದಿವೆ.