ಕರ್ನಾಟಕ

karnataka

ETV Bharat / business

ಇ-ಸಿಗರೇಟ್​ನಂತೆ ತಂಬಾಕು ನಿಷೇಧ ಏಕಿಲ್ಲ? ಕೇಂದ್ರಕ್ಕೆ ನೆಟ್ಟಿಗರ ಪ್ರಶ್ನೆ

ಇ-ಸಿಗರೇಟ್ ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮ ಇದೀಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.

ಸಾಂದರ್ಭಿಕ ಚಿತ್ರ

By

Published : Sep 19, 2019, 8:54 PM IST

ನವದೆಹಲಿ:ಕೇಂದ್ರದ ಇ- ಸಿಗರೇಟ್​ ಮೇಲಿನ ನಿಷೇಧ ಘೋಷಣೆ ಹೊರ ಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧದ ಪ್ರತಿಕ್ರಿಯೆಗಳು ನೆಟ್ಟಿಗರಿಂದ ಕೇಳಿಬರುತ್ತಿವೆ.

ಇ- ಸಿಗರೇಟ್​ ನಿಷೇಧವನ್ನು ಬಹುತೇಕ ನೆಟ್ಟಿಗರು ಸ್ವಾಗತಿಸಿದ್ದು, ತಂಬಾಕು ನಿಷೇಧ ಏಕಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ತರಹೇವಾರಿ ಮೀಮ್​, ಎಮೋಜಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಇ-ಸಿಗರೇಟ್​ಗಳು ತಂಬಾಕು ಮುಕ್ತ ಮತ್ತು ಕಡಿಮೆ ನಿಕೋಟಿನ್​ ಇದೆ. ನಮ್ಮ ದೇಶದ ಅತಿದೊಡ್ಡ ಸಮಸ್ಯೆ ಇರುವುದು ತಂಬಾಕಿನಲ್ಲಿ. ಅದನ್ನು ಏಕೆ ನಿಷೇಧಿಸಿಲ್ಲ ಎಂದು ಪ್ರೀತಿ ಶರ್ಮಾ ಟ್ವೀಟ್​ ಮಾಡಿದ್ದಾರೆ.

ಅಭಿಷೇಕ್​ ಗುಪ್ತಾ, ತಂಬಾಕು ಕಂಪನಿಗಳು ಸಂತುಷ್ಟವಾಗಿವೆ ಎಂಬಂತೆ ರೂಪಕವಾಗಿ ಬಾಲಿವುಡ್​ ನಟ ಅಕ್ಷಯ್ ಕುಮಾರ್​ ನಗುತ್ತಿರುವ ಮೀಮ್​ ಪೋಸ್ಟ್ ಮಾಡಿದ್ದಾರೆ.

ಬುಧವಾರ ಸಚಿವ ಸಂಪುಟ ನಡೆಸಿದ ಬಳಿಕ ಸಭೆಯ ನೇತೃತ್ವದ ವಹಿಸಿದ್ದ ನಿರ್ಮಲಾ ಸೀತಾರಾಮನ್ ಅವರು, ಆರೋಗ್ಯ ಸಚಿವಾಲಯದ ಪ್ರಸ್ತಾವನೆಯ ಮೇರೆಗೆ ಇ- ಸಿಗರೇಟ್​ ನಿಷೇಧಿಸುವ ಅನುಮೋದನೆ ಪಡೆಯಲಾಗಿದೆ, ಉದ್ದೇಶಿತ ಯೋಜನೆ ಜಾರಿಯಾದ ಬಳಿಕ ಇ- ಸಿಗರೇಟ್​ ಬಳಕೆ, ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಮೊದಲ ಬಾರಿಯ ನಿಯಮ್ಮ ಉಲ್ಲಂಘನೆಗೆ 1 ಲಕ್ಷ ರೂ. ದಂಡ​ ಅಥವಾ 1 ವರ್ಷ ಜೈಲು ಶಿಕ್ಷೆ ಇಲ್ಲವೇ ಎರಡೂ ಅನುಭವಿಸಬೇಕಾಗುತ್ತದೆ. ಮತ್ತೆ ಕೃತ್ಯ ಮರುಕಳಿಸಿದರೆ 5 ಲಕ್ಷ ದಂಡ ಅಥವಾ 3 ವರ್ಷ ಸಜೆ ಇಲ್ಲವೆ ಎರಡೂ ಶಿಕ್ಷಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದ್ದರು.

ABOUT THE AUTHOR

...view details