ನವದೆಹಲಿ: ಆಹಾರ ಹಣದುಬ್ಬರ ಕಡಿಮೆಯಾದ ಕಾರಣ ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರ ಶೇ 1.22ಕ್ಕೆ ಇಳಿದಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ನವೆಂಬರ್‌ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಶೇ 1.55ರಷ್ಟಿತ್ತು. ಈರುಳ್ಳಿ ಬೆಲೆಯಲ್ಲಿ ತೀವ್ರ ಕುಸಿತದಿಂದಾಗಿ ಡಿಸೆಂಬರ್‌ನಲ್ಲಿ ಆಹಾರ ಹಣದುಬ್ಬರ ಶೇ 0.92ಕ್ಕೆ ಇಳಿದಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.