ಕರ್ನಾಟಕ

karnataka

ETV Bharat / business

ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಭಾರತದ ಸ್ಥಾನ ಕೇಳಿದರೆ ಅಚ್ಚರಿಯಾಗದೇ ಇರದು! - ಅಪಾಯಕಾರಿ ರಸ್ತೆಗಳ ದೇಶಗಳು

56 ದೇಶಗಳ ಸಮೀಕ್ಷೆ ನಡೆಸಿದ ಅಂತಾರಾಷ್ಟ್ರೀಯ ಚಾಲಕ ಶಿಕ್ಷಣ ತರಬೇತಿ ಕಂಪನಿಯಾದ ಜುಟೋಬಿ ತನ್ನ ವರದಿ ಬಿಡುಗಡೆ ಮಾಡಿದ್ದು, ಜಗತ್ತಿನ ಅಪಾಯಕಾರಿ ರಸ್ತೆಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅತ್ಯಂತ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ಎರಡನೇ ದೇಶ ಥಾಯ್ಲೆಂಡ್​​ ಅಮೆರಿಕ ಮೂರನೇ ಅತಿದೊಡ್ಡ ದೇಶವಾಗಿದೆ.

dangerous roads
dangerous roads

By

Published : Mar 19, 2021, 1:32 PM IST

ಜೋಹಾನ್ಸ್‌ಬರ್ಗ್: ಅತ್ಯಂತ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ.

56 ದೇಶಗಳ ಸಮೀಕ್ಷೆ ನಡೆಸಿದ ಅಂತಾರಾಷ್ಟ್ರೀಯ ಚಾಲಕ ಶಿಕ್ಷಣ ತರಬೇತಿ ಕಂಪನಿಯಾದ ಜುಟೋಬಿ ತನ್ನ ವರದಿ ಬಿಡುಗಡೆ ಮಾಡಿದ್ದು, ಜಗತ್ತಿನ ಅಪಾಯಕಾರಿ ರಸ್ತೆಗಳ ಪೈಕಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಅತ್ಯಂತ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ಎರಡನೇ ದೇಶ ಥಾಯ್ಲೆಂಡ್​. ಅಮೆರಿಕ ಮೂರನೇ ಅತಿದೊಡ್ಡ ದೇಶ ಎಂಬುದು ಇನ್ನೂ ಅಚ್ಚರಿಯಾಗಿದೆ.

ಅತ್ಯಂತ ಸುರಕ್ಷಿತ ರಸ್ತೆಗಳು ನಾರ್ವೆಯಲ್ಲಿವೆ. ಜಪಾನ್ ಮತ್ತು ಸ್ವೀಡನ್ ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ಒಟ್ಟು ಐದು ಅಂಶಗಳನ್ನು ಗಣನೆಗೆ ತೆಗೆದುಕೊಂಡು ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಪ್ರತಿ ಲಕ್ಷ ಜನರಲ್ಲಿ ಎಷ್ಟು ಜನರು ರಸ್ತೆ ಅಪಘಾತಗಳಲ್ಲಿ ಎಷ್ಟು ಜನ ಸಾಯುತ್ತಾರೆ? ವಾಹನದ ಮುಂಭಾಗದಲ್ಲಿ ಕುಳಿತವರಲ್ಲಿ ಸೀಟ್ ಬೆಲ್ಟ್ ಧರಿಸಿದವರ ಶೇಕಡಾವಾರು ಎಷ್ಟು? ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವಾಗ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು? ರಸ್ತೆಗಳಲ್ಲಿ ಗರಿಷ್ಠ ವೇಗವನ್ನು ಅನುಮತಿಸಲಾಗಿದೆಯಾ? ಅಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡು ರಸ್ತೆ ಅಪಘಾತಗಳ ತೀವ್ರತೆ ಕಂಡುಹಿಡಿಯಲಾಗಿದೆ.

ABOUT THE AUTHOR

...view details