ಕರ್ನಾಟಕ

karnataka

ETV Bharat / business

ಜಿಡಿಪಿ ಜಿಗಿಯಬೇಕಾದ್ರೆ ಬಡ್ಡಿ ದರ ಇಳಿಬೇಕು: ಡಿ. ಮುರಳೀಧರ್ ಅಭಿಮತ

'ಈಟಿವಿ ಭಾರತ್' ಜತೆಗೆ ಮಾತನಾಡಿದ ಸರ್.ಎಂ. ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಿ. ಮುರಳೀಧರ್ , ಹಣದುಬ್ಬರ ಯಾವಾಗ ಕಡಿಮೆ ಆಗುತ್ತದೆಯೋ ಆಗ ಬಡ್ಡಿ ದರ ಇಳಿಸಬೇಕು. ಬಡ್ಡಿ ದರ ಹೆಚ್ಚಿದ್ದ ಸಂದರ್ಭದಲ್ಲಿ ವ್ಯವಹಾರ- ವಹಿವಾಟು ಮಾಡುವ ವೆಚ್ಚ ಅಧಿಕವಾಗದು. ಈ ರೆಪೊ ದರ ಕಡಿತವು ಮುಂದಿನ 3- 4 ತ್ರೈಮಾಸಿಕವರೆಗೂ ಹೀಗೆ ಮುಂದುವರಿಯಲಿದೆ ಎಂದು ಭವಿಷ್ಯ ನುಡಿದರು.

ಡಿ. ಮುರಳೀಧರ್

By

Published : Oct 5, 2019, 8:40 AM IST

ಬೆಂಗಳೂರು: ಆರ್​ಬಿಐ ರೆಪೊ ದರ ಕಡಿತ ಮಾಡಿದ್ದು ಸ್ವಾಗತಾರ್ಹ. ದೇಶದ ಜಿಡಿಪಿ ಏರಿಕೆ ಆಗಬೇಕಾದ್ರೆ ಬಡ್ಡಿ ದರ ಕಡಿತವಾಗಬೇಕು. ಜಿ- 20 ಸದಸ್ಯ ಹಾಗೂ ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳ ಬಡ್ಡಿ ದರ ಎರಡಂಕಿ ಕೂಡ ದಾಟಿಲ್ಲ ಎಂದು ಸರ್.ಎಂ. ವಿಶ್ವೇಶ್ವರಯ್ಯ ಆರ್ಥಿಕ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಿ. ಮುರಳೀಧರ್ ಹೇಳಿದರು.

'ಈಟಿವಿ ಭಾರತ್' ಜತೆಗೆ ಮಾತನಾಡಿದ ಅವರು, ಹಣದುಬ್ಬರ ಯಾವಾಗ ಕಡಿಮೆ ಆಗುತ್ತದೆಯೋ ಆಗ ಬಡ್ಡಿ ದರ ಇಳಿಸಬೇಕು. ಬಡ್ಡಿ ದರ ಹೆಚ್ಚಿದ್ದ ಸಂದರ್ಭದಲ್ಲಿ ವ್ಯವಹಾರ- ವಹಿವಾಟು ಮಾಡುವ ವೆಚ್ಚ ಅಧಿಕವಾಗದು. ಈ ರೆಪೊ ದರ ಕಡಿತವು ಮುಂದಿನ 3- 4 ತ್ರೈಮಾಸಿಕವರೆಗೂ ಹೀಗೆ ಮುಂದುವರಿಯಲಿದೆ ಎಂದರು.

ಆರ್​ಬಿಐನ ಬಡ್ಡಿ ದರ ಇಳಿಕೆಯ ಕುರಿತು ವಿಶ್ಲೇಷಣೆ ನೀಡಿದ ಡಿ. ಮುರಳೀಧರ್

ಈ ಹಿಂದೆಯೂ ರೆಪೊ ದರ ಕಡಿತ ಮಾಡಿದ ನಂತರವೂ ಬ್ಯಾಂಕ್​ಗಳು ಬಡ್ಡಿ ದರ ಇಳಿಕೆ ಮಾಡದ ನಿದರ್ಶನಗಳಿವೆ. ಇದನ್ನು ಗಮನಿಸಿದ ಆರ್​ಬಿಐ ರೆಪೊ ದರ ಆಧಾರಿತ ಬಡ್ಡಿ ದರ ನಿಗದಿಪಡಿಸಬೇಕೆಂದು ಬ್ಯಾಂಕ್​ಗಳಿಗೆ ಕಠಿಣ ಸೂಚನೆ ನೀಡಿದ್ದು, ಬಡ್ಡಿ ದರ ಕಡಿಮೆ ಆಗಲಿದೆ ಎಂದು ತಿಳಿಸಿದರು.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್‌ಸಿ) ನಮ್ಮ ಆರ್ಥಿಕತೆ ಕುಸಿದಿದೆ. ದೇಶದಲ್ಲಿ ಸುಮಾರು 2000 ಎನ್​​ಬಿಎಫ್​ಸಿಗಳಿದ್ದು, ಬ್ಯಾಂಕ್​ಗಳನ್ನು ನಿಯಂತ್ರಿಸುವಂತೆ ಆರ್​ಬಿಐ ಇವುಗಳನ್ನು ನಿಯಂತ್ರಿಸಲು ಆಗುತ್ತಿಲ್ಲ. ಮುಂದಿನ ದಿನಗಳಲ್ಲಿ ಆರ್​ಬಿಐ ಎನ್​ಬಿಎಫ್​ಸಿಗಳ ಮೇಲೆ ನಿಯಂತ್ರಣ ಸಾಧಿಸಿ, ಅವುಗಳ ಸಂಖ್ಯೆಯನ್ನು ಹಂತಹಂತವಾಗಿ 300 ರಿಂದ 400ಕ್ಕೆ ತಗ್ಗಿಸುವ ಉದ್ದೇಶ ಇರಿಸಿಕೊಂಡಿದೆ ಎಂದು ಮುರುಳೀಧರ್​ ತಿಳಿಸಿದರು.

ABOUT THE AUTHOR

...view details