ನವದೆಹಲಿ:ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು 3ನೇ ಸುತ್ತಿನ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆಯನ್ನು ಘೋಷಿಸಿದೆ. ದೇಶದಲ್ಲಿನ 27 ಸಾರ್ವಜನಿಕ ವಲಯದ ಬ್ಯಾಂಕ್ಗಳ ಸಂಖ್ಯೆ ಇನ್ನು ಮುಂದೆ 12ಕ್ಕೆ ಇಳಿಯಲಿದೆ. ವಿಲೀನದ ನಂತರ ಈ ಬ್ಯಾಂಕ್ಗಳ ಗ್ರಾಹಕರು ಮುಂದೆ ಅನುಸರಿಸಬೇಕಾದ ನಿಯಮಗಳ ಮಾಹಿತಿ ಇಲ್ಲಿದೆ.
ವಿಲೀನವಾಗುವ ಬ್ಯಾಂಕ್ಗಳು
ಓರಿಯಂಟಲ್ ಬ್ಯಾಂಕ್ + ಯುನೈಟೆಡ್ ಬ್ಯಾಂಕ್ಗಳು = ಪಂಜಾಬ್ ನ್ಯಾಷನಲ್ ಬ್ಯಾಂಕ್
ಆಂಧ್ರ ಬ್ಯಾಂಕ್ + ಕಾರ್ಪೊರೇಷನ್ ಬ್ಯಾಂಕ್ = ಯೂನಿಯನ್ ಬ್ಯಾಂಕ್
ಸಿಂಡಿಕೇಟ್ ಬ್ಯಾಂಕ್ = ಕೆನರಾ ಬ್ಯಾಂಕ್
ಅಲಹಾಬಾದ್ ಬ್ಯಾಂಕ್= ಇಂಡಿಯನ್ ಬ್ಯಾಂಕ್
ಈ ಹಿಂದೆ ಎರಡು ಹಂತದ ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಕೊನೆಗೊಂಡಿದ್ದು, ಮೊದಲನೇ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವ್ಯಾಪ್ತಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ್, ಸ್ಟೇಟ್ ಬ್ಯಾಂಕ್ ಆಫ್ ಬಿಕನಾರ್ ಮತ್ತು ಜೈಪುರ್ ಸೇರಿದಂತೆ ಇತರೆ ಬ್ಯಾಂಕ್ಗಳ ಹಾಗೂ ಎರಡನೇ ಹಂತದಲ್ಲಿ ಬ್ಯಾಂಕ್ ಆಫ್ ಬರೋಡಾದೊಂದಿಗೆ ದೇನಾ ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್ ಸೇರ್ಪಡೆಗೊಂಡಿದ್ದವು.
ವಿಲೀನದ ಬಳಿಕ ಸಂಬಂಧಪಟ್ಟ ಬ್ಯಾಂಕ್ಗಳ ಗ್ರಾಹಕರ ಮುಂದಿರುವ ನಡೆಗಳು
* ವಿಲೀನವಾಗಲಿರುವ ಬ್ಯಾಂಕ್ಗಳ ಗ್ರಾಹಕರು ಮೊದಲು ತಮ್ಮ ಖಾತೆ ಹಾಗೂ ಚೆಕ್ ಪುಸ್ತಕ ಬದಲಾಯಿಸಿಕೊಳ್ಳಬೇಕು. ವಿಲೀನ ಮಾಡಿಕೊಳ್ಳುತ್ತಿರುವ ಬ್ಯಾಂಕಿನ ಖಾತೆ, ಚೆಕ್ ಪುಸ್ತಕ ಪಡೆಯಬೇಕು