ಜಾಗತಿಕ ಸ್ಪರ್ಧಾತ್ಮಕತೆ ವರದಿ (ಜಿಸಿಆರ್) ಸರಣಿಯ 2020 ರ ವಿಶೇಷ ಆವೃತ್ತಿ, ಜಗತ್ತು ಐತಿಹಾಸಿಕ ಬಿಕ್ಕಟ್ಟಿನಲ್ಲಿರುವಾಗ ಹೊರ ಬರುತ್ತಿದೆ. ಕೋವಿಡ್ ಪರಿಸ್ಥಿತಿ ಜಾಗತಿಕ ಆರೋಗ್ಯ ಬಿಕ್ಕಟ್ಟಿನ ಜೊತೆಗೆ 2008-09 ಕ್ಕಿಂತ ಹೆಚ್ಚಿನ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದು ಭವಿಷ್ಯದ ಬಗ್ಗೆಯೂ ದೊಡ್ಡ ಆತಂಕವನ್ನು ಸೃಷ್ಟಿಸಿದೆ.
ಕೋವಿಡ್ ಬಳಿಕ ಜಗತ್ತು ಮತ್ತೆ ಚೇತರಿಸಿಕೊಳ್ಳಲು ಅಣಿಯಾಗುತ್ತಿದೆ. ಸದ್ಯ, ಆರೋಗ್ಯ ಬಿಕ್ಕಟ್ಟನ್ನು ಬಗೆ ಹರಿಸಿಕೊಳ್ಳುವುದು ಆದ್ಯತೆಯಾಗಿದ್ದರೂ, ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಗಮನ ಹರಿಸುವುದು ಅಷ್ಟೇ ಪ್ರಮುಖವಾಗಿದೆ. ಉತ್ಪಾದನೆಯನ್ನು ಹೆಚ್ಚಿಸಲು, ಭವಿಷ್ಯದಲ್ಲಿ ನಮ್ಮ ಅರ್ಥಿಕತೆಯನ್ನು ನಾವು ಹೇಗೆ ರೂಪಿಸಿಕೊಳ್ಳಬೇಕು ಎಂದು ತೀರ್ಮಾನಿಸಲು, ಪರಿಸರ ಮತ್ತು ಸುಸ್ಥಿರ ಅಭಿವೃದ್ದಿಯ ಬಗ್ಗೆ ಚಿಂತಿಸಲು ಮತ್ತು ನಿರ್ಧಾರ ಕೈಗೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ಜಾಗತಿಕ ಸ್ಪರ್ಧಾತ್ಮಕತೆ ವರದಿಯ ಸರಣಿಯು ತನ್ನ ಮೊದಲ ಆವೃತ್ತಿಯಿಂದಲೇ ನೀತಿ ರೂಪಕರನ್ನು ಅಲ್ಪಾವಧಿಯ ಬೆಳವಣಿಗೆಯನ್ನು ಮೀರಿ ಪ್ರೇರೇಪಿಸುವ ದೀರ್ಘಾವಧಿಯ ಸಮೃದ್ಧಿಯ ಗುರಿಯನ್ನು ಹೊಂದಿದೆ. ಜಾಗತಿಕ ಸ್ಪರ್ಧಾತ್ಮಕತೆಯ ವರದಿಯ 2019 ರ ಆವೃತ್ತಿಯು ಉತ್ಪಾದಕತೆಯ ಮೂಲಭೂತ ಅಂಶಗಳು ಹೇಗೆ ಕ್ಷೀಣಿಸುತ್ತಿವೆ ಮತ್ತು ದೀರ್ಘಕಾಲದ ಹಣಕಾಸು ನೀತಿಯನ್ನು ಹೇಗೆ ಮರೆ ಮಾಚಲಾಗಿದೆ ಮತ್ತು ಈ ಅಂಶಗಳು ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸಲು ಹೇಗೆ ಅಡ್ಡಿಯಾಗುತ್ತಿವೆ ಎಂಬುವುದನ್ನು ತೋರಿಸುತ್ತವೆ.
ಕೋವಿಡ್ ಕಾರಣದಿಂದ ಉಂಟಾದ ಈ ವಿಶೇಷ ಸಂದರ್ಭ ನವನವೀನ ಮತ್ತು ಅಗತ್ಯದಾಯಕ ಆರ್ಥಿಕ ನೀತಿಗಳನ್ನು ರೂಪಿಸಲು ಒಂದು ಅವಕಾಶವಾಗಿದೆ. ಹಾಗಾಗಿ, 2020 ರ ದೀರ್ಘಕಾಲದ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕ (ಜಿಸಿಐ) ಶ್ರೇಯಾಂಕಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಈ ವಿಶೇಷ ಸಂದರ್ಭವು ಜನರು, ಭೂಮಿ ಮತ್ತು ಗುರಿ, ಈ ಅಂಶಗಳನ್ನು ಒಳಗೊಂಡು ಜಗತ್ತು ಹೇಗೆ ಚೇತರಿಸಿಕೊಳ್ಳಬೇಕು ಮತ್ತು ಚೇತರಿಸಿಕೊಳ್ಳುವಿಕೆಯ ಅಗತ್ಯತೆಗಳೇನು ಎಂಬುವುದನ್ನು ವಿವರಿಸುವ ಸಮಯವಾಗಿದೆ.
ಈ ವಿಶೇಷ ಆವೃತ್ತಿಯು ಸ್ಪರ್ಧಾತ್ಮಕತೆಯ ಅಂಶಗಳು ಮತ್ತು ಭವಿಷ್ಯದ ಆದ್ಯತೆಗಳ ಕುರಿತು ಇತ್ತೀಚಿನ ಚಿಂತನೆಗಳನ್ನು ವಿಶ್ಲೇಷಿಸುತ್ತದೆ. ಇದು ಮೂರು ಟೈಮ್‌ಲೈನ್‌ಗಳ ವಿರುದ್ಧ ಶಿಫಾರಸುಗಳನ್ನು ನೀಡುತ್ತದೆ. 1 ಆರೋಗ್ಯ ಬಿಕ್ಕಟ್ಟಿಗಿಂತ ಮೊದಲ ವಿಶ್ಲೇಷಣೆಯಿಂದ ತಿಳಿದು ಬಂದ ಆದ್ಯತೆಗಳು. 2 ಕೋವಿಡ್ -19 ಬಿಕ್ಕಟ್ಟಿಗೆ ತಕ್ಷಣದ ಪ್ರತಿಕ್ರಿಯೆಗಳನ್ನು ಮೀರಿ ಆರ್ಥಿಕತೆಯನ್ನು ಪುನರಾರಂಭಿಸಲು ಅಗತ್ಯವಾದ ಆದ್ಯತೆಗಳು. (ಮುಂದಿನ 1-2 ವರ್ಷಗಳಲ್ಲಿ ಚೇತರಿಕೆ) ಮತ್ತು 3 ಭವಿಷ್ಯದಲ್ಲಿ ಸುಸ್ಥಿರ ಮತ್ತು ಅಂತರ್ಗತ ಸಮೃದ್ಧಿಯನ್ನು ಸಾಧಿಸಲು ದೀರ್ಘಾವಧಿಯಲ್ಲಿ ಆರ್ಥಿಕ ವ್ಯವಸ್ಥೆಗಳನ್ನು ರೀಬೂಟ್ ಮಾಡಲು ಅಗತ್ಯವಾದ ಆದ್ಯತೆಗಳು ಮತ್ತು ನೀತಿಗಳು (ಮುಂದಿನ 3-5 ವರ್ಷಗಳಲ್ಲಿ ಪರಿವರ್ತನೆ).
ಶಿಫಾರಸುಗಳು ಮತ್ತು ಸಮಯವನ್ನು ನಾಲ್ಕು ವಿಶಾಲ ಕ್ಷೇತ್ರಗಳಾಗಿ ವಿಂಗಡಿಸಲಾಗಿದೆ: 1 ಪರಿಸರವನ್ನು ಪುನರುಜ್ಜೀವನಗೊಳಿಸುವುದು ಮತ್ತು ಪರಿವರ್ತಿಸುವುದು, 2 ಮಾನವ ಬಂಡವಾಳವನ್ನು ಪುನರುಜ್ಜೀವನಗೊಳಿಸುವುದು ಮತ್ತು ಪರಿವರ್ತಿಸುವುದು. 3 ಮಾರುಕಟ್ಟೆಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಪರಿವರ್ತಿಸುವುದು ಮತ್ತು 4. ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಪರಿವರ್ತಿಸುವುದು. ಪ್ರಮುಖ 37 ಆರ್ಥಿಕ ಆದ್ಯತೆಗಳನ್ನು ಪರಿಮಾಣಾಕಾರಿಯಾಗಿ ಪರಿವರ್ತಿಸುವ ಕುರಿತು ದೇಶಗಳು ಹೇಗೆ ಆರಂಭಿಕ ಮೌಲ್ಯಮಾಪನ ಮಾಡಬೇಕು ಎಂಬುವುದನ್ನು ಈ ಸಂಚಿಕೆಯಲ್ಲಿ ಹೇಳಲಾಗಿದೆ.
ವಿಶ್ವ ಆರ್ಥಿಕ ವೇದಿಕೆ ಬಿಡುಗಡೆ ಮಾಡಿರುವ ಗ್ರಾಫಿಕ್ಸ್ ಜಾಗತಿಕ ಸ್ಪರ್ಧಾತ್ಮಕತೆ ವರದಿ- 2020