ಕರ್ನಾಟಕ

karnataka

ETV Bharat / business

ಭಾರತದ ಶೇ 1ರಷ್ಟು ಆಗರ್ಭ ಶ್ರೀಮಂತರ ಆಸ್ತಿ 95.3 ಕೋಟಿ ಜನರ ಸಂಪತ್ತಿಗೆ ಸಮ - ಭಾರತದ ಶ್ರೀಮಂತರ ಸಂಪತ್ತು

ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) 50ನೇ ವಾರ್ಷಿಕ ಸಭೆಗೂ ಮುನ್ನ 'ಟೈಮ್ ಟು ಕೇರ್' ಈ ಅಧ್ಯಯನ ವರದಿ ಬಿಡುಗಡೆ ಮಾಡಿದೆ. ವಿಶ್ವದ 2,153 ಶತಕೋಟ್ಯಧಿಪತಿಗಳು 4.6 ಬಿಲಿಯನ್ ಜನರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದು, ಭೂಮಿ ಮೇಲಿನ ಶೇ 60ರಷ್ಟು ಜನಸಂಖ್ಯೆಯ ಸಂಪತ್ತು ಇವರ ಬಳಿ ಇದೆ. ಜಾಗತಿಕ ಅಸಮಾನತೆಯು ಆಘಾತಕಾರಿ ಮತ್ತು ವ್ಯಾಪಕವಾಗಿದ್ದು, ಕಳೆದ ದಶಕದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ರೈಟ್ಸ್​ ಗ್ರೂಪ್​ ಆಕ್ಸ್​ಫಾರ್ಮ್​ ಹೇಳಿದೆ.

Distribution of Wealth
ಸಂಪತ್ತಿನ ಹಂಚಿಕೆ

By

Published : Jan 20, 2020, 6:54 PM IST

ನವದೆಹಲಿ:'ಬಡವರು ಬಡವರಾಗಿ ಉಳಿಯುತ್ತಿದ್ದಾರೆ. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ' ಎಂಬ ಜನಸಾಮಾನ್ಯರ ಮಾತಿಗೆ ಸಾಕ್ಷಿಯಾಗಿ ಇತ್ತೀಚೆಗೆ ವರದಿಯೊಂದು ಬಿಡುಗಡೆಯಾಗಿದೆ.

ಭಾರತದ ಶೇ 1ರಷ್ಟು ಶ್ರೀಮಂತರು ದೇಶದ 70 ಪ್ರತಿಶತದಷ್ಟು ಜನರು ಹೊಂದಿರುವ ಸಂಪತ್ತಿಗೆ ಸರಿಸಮನಾಗಿ ಸಿರಿವಂತಿಕೆ ಹೊಂದಿದ್ದಾರೆ. ದೇಶದ 95.3 ಕೋಟಿ ಜನರು ಹೊಂದಿರುವ ಸಂಪತ್ತನ್ನು ಕೇವಲ 1 ಪ್ರತಿಶತದಷ್ಟು ಕುಬೇರರ ಬಳಿ ಇದೆ. ಎಲ್ಲ ಭಾರತೀಯ ಬಿಲೆನೇರ್‌ಗಳ ಒಟ್ಟು ಸಂಪತ್ತು ದೇಶದ ವಾರ್ಷಿಕ ಬಜೆಟ್‌ಗಿಂತಲೂ ಅಧಿಕವಾಗಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) 50ನೇ ವಾರ್ಷಿಕ ಸಭೆಗೂ ಮುನ್ನ 'ಟೈಮ್ ಟು ಕೇರ್' ಈ ಅಧ್ಯಯನ ವರದಿ ಬಿಡುಗಡೆ ಮಾಡಿದೆ. ವಿಶ್ವದ 2,153 ಶತಕೋಟ್ಯಧಿಪತಿಗಳು 4.6 ಬಿಲಿಯನ್ ಜನರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದು, ಭೂಮಿ ಮೇಲಿನ ಶೇ 60ರಷ್ಟು ಜನಸಂಖ್ಯೆಯ ಸಂಪತ್ತು ಇವರ ಬಳಿ ಇದೆ. ಜಾಗತಿಕ ಅಸಮಾನತೆಯು ಆಘಾತಕಾರಿ ಮತ್ತು ವ್ಯಾಪಕವಾಗಿದ್ದು, ಕಳೆದ ದಶಕದಲ್ಲಿ ಶತಕೋಟ್ಯಧಿಪತಿಗಳ ಸಂಖ್ಯೆ ದ್ವಿಗುಣಗೊಂಡಿದೆ ಎಂದು ರೈಟ್ಸ್​ ಗ್ರೂಪ್​ ಆಕ್ಸ್​ಫಾರ್ಮ್​ ಹೇಳಿದೆ.

ಉದ್ದೇಶಪೂರ್ವಕ ಅಸಮಾನತೆಯ ನೀತಿಗಳಿಂದ ಶ್ರೀಮಂತ ಮತ್ತು ಬಡವರ ನಡುವಿನ ಅಂತರವನ್ನು ಪರಿಹರಿಸಲು ಸಾಧ್ಯವಿಲ್ಲ. ಬಹುತೇಕ ಸರ್ಕಾರಗಳು ಸಂಪತ್ತಿನ ಅಸಮಾನತೆಯನ್ನು ತೊಲಗಿಸಲು ಬದ್ಧವಾಗಿಲ್ಲ ಎಂದು ಡಬ್ಲ್ಯುಇಎಫ್​ನ ಆಕ್ಸ್‌ಫ್ಯಾಮ್ ಒಕ್ಕೂಟ ಪ್ರತಿನಿಧಿ/ ಆಕ್ಸ್‌ಫ್ಯಾಮ್ ಇಂಡಿಯಾ ಸಿಇಒ ಅಮಿತಾಬ್ ಬೆಹರ್ ಹೇಳಿದ್ದಾರೆ.

ಭಾರತದಲ್ಲಿನ 63 ಭಾರತೀಯ ಬಿಲಿಯನೇರ್‌ಗಳ ಒಟ್ಟು ಸಂಪತ್ತು 2018-19ನೇ ಸಾಲಿನ ಕೇಂದ್ರ ಬಜೆಟ್‌ ಮೊತ್ತದ 24,42,200 ಕೋಟಿ ರೂ.ಗಿಂತ ಅಧಿಕವಾಗಿದೆ. ನಮ್ಮಲ್ಲಿನ ಮುರಿದ ಆರ್ಥಿಕತೆಗಳು ಕೋಟ್ಯಧಿಪತಿಗಳ- ದೊಡ್ಡವರ ಹಾಗೂ ಸಾಮಾನ್ಯ ಪುರುಷ- ಮಹಿಳೆಯರ ವೆಚ್ಚದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಮುಂದೊಂದು ದಿನ ಕೋಟ್ಯಧಿಪತಿಗಳು ಮಾತ್ರ ಇರಬೇಕೇ ಎಂದು ಜನರು ಪ್ರಶ್ನಿಸಲು ಆರಂಭಿಸಿದರೂ ಆಶ್ಚರ್ಯವಿಲ್ಲ ಎಂದು ಬೆಹರ್ ಹೇಳಿದ್ದಾರೆ.

ABOUT THE AUTHOR

...view details