ನವದೆಹಲಿ: ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್, ಆರ್ಥಿಕತೆ ಪುನರಾರಂಭ ಆಗುತ್ತಿದ್ದಂತೆ ಜನರ ಜೀವ ರಕ್ಷಣೆಯಷ್ಟೇ ಅವರ ಜೀವನೋಪಾಯ ಉಳಿಸುವುದು ಮುಖ್ಯ ಎಂದು ಹೇಳಿದರು.
ಲಾಕ್‌ಡೌನ್‌ನಿಂದ ಆರ್ಥಿಕ ಪರಿಣಾಮಗಳು ತೀವ್ರವಾಗಿ ಉಂಟಾಗಿರಬಹುದು. ಭಾರತದ ಯಶಸ್ವಿ ಆರ್ಥಿಕತೆಯ ಗುರಿ ಸಾಧಿಸಲು ವ್ಯಾಪಾರ ಚಟುವಟಿಕೆಗಳ ಪ್ರಾರಂಭವೇ ನಿರ್ಣಾಯಕವಾಗಿದೆ ಎಂದಿದ್ದಾರೆ.
ಜಾಗತಿಕ ಆರ್ಥಿಕತೆಗಳು ತೆರೆದುಕೊಳ್ಳುತ್ತಿವೆ. ಚಿಕಿತ್ಸೆ ದೊರೆಯುವವರೆಗೂ ಮನೆಯಲ್ಲಿಯೇ ಇರುವುದು ಭಾರತದಲ್ಲಿನ ಜೀವ ಹಾನಿಯಷ್ಟೇ ಜೀವನೋಪಾಯದ ನಷ್ಟವನ್ನೂ ಉಂಟುಮಾಡುತ್ತದೆ. ನಾವು ನಿಧಾನವಾಗಿ ಪುನಃ ಕೆಲಸ ಪ್ರಾರಂಭಿಸುವತ್ತ ಹೊರಳಿಕೊಳ್ಳಬೇಕಿದೆ. ಲಾಕ್‌ಡೌನ್‌ನಿಂದ ಅತೀ ಹೆಚ್ಚು ಹಾನಿಗೊಳಗಾದ ದೇಶಗಳು ತೆರೆದುಕೊಳ್ಳುತ್ತಿವೆ. ನಾವು ಇನ್ನು ಮುಂದೆ ಹೆಚ್ಚಿನ ಸಮಯ ಕಳೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಒಂದು ದೇಶವಾಗಿ ಭಾರತ, ತನ್ನ ಸಂಪೂರ್ಣ ಸಾಮರ್ಥ್ಯವನ್ನು ಮರಳಿ ಪಡೆಯಬೇಕಾದರೆ ಅದು ಯಶಸ್ವಿ ಆರ್ಥಿಕತೆ ಮೇಲೆ ನಿಂತಿದೆ ಎಂದಿದ್ದಾರೆ. ಯುರೋಪ್ ತೆರೆದುಕೊಂಡಿದೆ. ಸ್ಪೇನ್, ಫ್ರಾನ್ಸ್, ಆಮ್ಸ್ಟರ್ಡ್ಯಾಮ್ ಮತ್ತು ಜರ್ಮನಿಯ ಜನರು ಹೊಸ ಸವಾಲುಗಳನ್ನು ಸ್ವೀಕರಿಸಿ ಮತ್ತೆ ಬದುಕಲು ಪ್ರಾರಂಭಿಸಿದ್ದಾರೆ. ರೆಸ್ಟೋರೆಂಟ್, ಶಾಪಿಂಗ್ ಮಾಲ್, ಸಾರ್ವಜನಿಕ ಸಾರಿಗೆ ಎಲ್ಲವೂ ಮತ್ತೆ ಕಾರ್ಯರೂಪಕ್ಕೆ ಬಂದಿವೆ. ನೀವು ಆರ್ಥಿಕತೆಯನ್ನು ಹೇಗೆ ಉಳಿಸುತ್ತೀರಿ! ಎಂದು ಪ್ರಶ್ನಿಸಿದ್ದಾರೆ.