ನವದೆಹಲಿ: ದೇಶದ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಅಂಚೆ ಕಚೇರಿ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದರು.
ಪ್ರತಿ ಸಂಸತ್ ಕ್ಷೇತ್ರಕ್ಕೂ ಅಂಚೆ ಕಚೇರಿ ಪಾಸ್ಪೋರ್ಟ್ ಸೇವಾ ಕೇಂದ್ರ: ಎಸ್.ಜೈಶಂಕರ್ - ಕೇಂದ್ರ ಸಚಿವ ಸಂಪುಟ
ಕೇಂದ್ರ ಸಚಿವ ಸಂಪುಟ ಸಭೆ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಈಗಾಗಲೇ ಅಸ್ತಿತ್ವದಲ್ಲಿ ಇರದ ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಿದ್ದೇವೆ. ನಾವು ಇಲ್ಲಿಯವರೆಗೆ 488 ಲೋಕಸಭಾ ಕ್ಷೇತ್ರಗಳಲ್ಲಿ ಈ ಸೇವೆಯನ್ನು ಒದಗಿಸಲು ಸಮರ್ಥರಾಗಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರ ಬಹಳ ಮಹತ್ವಾಕಾಂಕ್ಷೆಯಿಂದ ಮುಂದುವರಿಯುತ್ತಿದ್ದಾಗ ಕೋವಿಡ್ ಅಡ್ಡಗಾಲು ಹಾಕಿತು ಎಂದು ಅವರು ಹೇಳಿದರು.
ಎಸ್ ಜೈಶಂಕರ್
ಪಾಸ್ಪೋರ್ಟ್ ಸೇವಾ ದಿನಾಚರಣೆ ನಿಮಿತ್ತ ಮಾತನಾಡಿದ ಅವರು, ಕೋವಿಡ್ ಬಿಕ್ಕಟ್ಟಿನ ಮಧ್ಯೆಯೂ ಸಾರ್ವಜನಿಕ ಅವಶ್ಯಕತೆಗಳಿಗೆ ಉತ್ತಮವಾಗಿ ಸ್ಪಂದಿಸಿದ ಇಲಾಖೆಯ ಸಿಬ್ಬಂದಿಯ ಕೆಲಸವನ್ನು ಪ್ರಶಂಸಿದ್ದಾರೆ.