ಕರ್ನಾಟಕ

karnataka

ETV Bharat / business

ದಿವಾಳಿ ಅಂಚಿನಲ್ಲಿ ವಿಜಯ್ ಮಲ್ಯ... ಕೋರ್ಟ್​ ಆದೇಶದಿಂದ ತಾತ್ಕಾಲಿಕ ರಿಲೀಫ್​ - ಕಂಪನಿ ಕೋರ್ಟ್​

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (ಎಸ್​ಬಿಐ) ನೇತೃತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟದ ಮನವಿಯ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಲಂಡನ್​ ಹೈಕೋರ್ಟ್​, 'ವಿಜಯ್ ಮಲ್ಯ ಅವರನ್ನು ದಿವಾಳಿತನ ಆದೇಶ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ'.

Fugitive Vijay Mallya

By

Published : Apr 10, 2020, 3:26 PM IST

ಲಂಡನ್​:ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಮರಳಿಸಿದೆ ಲಂಡನ್​ಗೆ ಪರಾರಿ ಆಗಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ದಿವಾಳಿತನದ ಆದೇಶದಿಂದ ತಾತ್ಕಾಲಿಕವಾಗಿ ನಿರಾಳರಾಗಿದ್ದಾರೆ.

ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (ಎಸ್​ಬಿಐ) ನೇತೃತ್ವದ ಭಾರತೀಯ ಬ್ಯಾಂಕ್​ಗಳ ಒಕ್ಕೂಟದ ಮನವಿಯ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಲಂಡನ್​ ಹೈಕೋರ್ಟ್​, 'ವಿಜಯ್ ಮಲ್ಯ ಅವರನ್ನು ದಿವಾಳಿತನ ಆದೇಶ ನೀಡುವುದನ್ನು ತಾತ್ಕಾಲಿಕವಾಗಿ ಮುಂದೂಡಿದ್ದಾರೆ'.

ಲಂಡನ್ ಹೈಕೋರ್ಟ್​​​ನ ದಿವಾಳಿತನ ವಿಭಾಗದ ನ್ಯಾಯಮೂರ್ತಿ ಮೈಕೆಲ್​ ಬ್ರಿಗ್ಸ್​ ಅವರು ಮಲ್ಯಗೆ ರೀಲಿಫ್​ ನೀಡಿದ್ದು, 'ಭಾರತದ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಅರ್ಜಿಗಳ ಹಾಗೂ ಕರ್ನಾಟಕ ಹೈಕೋರ್ಟ್​ ಮುಂದೆ ಇರುವ ಅರ್ಜಿಗಳ ವಿಚಾರಣೆ ಇತ್ಯರ್ಥ ಆಗುವವರೆಗೆ ಅವರ ಸಾಲ ಮರುಪಾವತಿಗೆ ಗಡುವು ನೀಡಬೇಕು' ಎಂದು ಹೇಳಿದ್ದಾರೆ.

ಭಾರತೀಯ ಬ್ಯಾಂಕ್​ಗಳ ದಿವಾಳಿತನದ ಅರ್ಜಿಯು ಯಾವುದೇ ಮಾನದಂಡಗಳನ್ನು ಮೀರಿದ್ದಾಗಿದೆ. ಭಾರತದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ದಿವಾಳಿತನದ ಆದೇಶಕ್ಕಾಗಿ ಒತ್ತಾಯಿಸುತ್ತಿವೆ. ನನ್ನ ತೀರ್ಪಿನ ಬಗ್ಗೆ ಹೇಳುವುದಾರೇ ಬ್ಯಾಂಕ್​ಗಳನ್ನು ಭಾಗಶಃ ಸುರಕ್ಷಿತವಾಗಿದೆ. ಅರ್ಜಿಯ ವಿಚಾರಣೆ ಉದ್ದೇಶದಿಂದ ಸಾಲಗಳನ್ನು ಪೂರ್ಣವಾಗಿ ಪಾವತಿಸುವ ಸಮಯವನ್ನು ವಿಸ್ತರಿಸಬೇಕು ಎಂದು ತಿಳಿಸಿದ್ದಾರೆ.

ABOUT THE AUTHOR

...view details