ಕರ್ನಾಟಕ

karnataka

ETV Bharat / business

3 ತಿಂಗಳಲ್ಲಿ ಲಕ್ಷ ಕಿ.ಮೀ. ಕ್ರಮಿಸಿದ 'ವಂದೇ ಭಾರತ್ ಎಕ್ಸ್​ಪ್ರೆಸ್​' ರೈಲು - undefined

ಚಾಲನೆಗೊಂಡ ಮೊದಲ ದಿನ ವಾರಣಾಸಿಯಿಂದ ಮರಳಿ ಸಂಚರಿಸುವಾಗ ಕಾನ್ಪುರ ನಿಲ್ದಾಣದ ಬಳಿ ರೈಲಿನ ಬ್ರೇಕ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಇದ್ದಾದ ನಂತರ ಯಾವುದೇ ಸಮಸ್ಯೆ ಇಲ್ಲದೆ ಯಶಸ್ವಿಯಾಗಿ 1 ಲಕ್ಷ ಕಿ.ಮೀ. ಸಂಚರಿಸಿದೆ.

ವಂದೇ ಭಾರತ್ ಎಕ್ಸ್​ಪ್ರೆಸ್​

By

Published : May 16, 2019, 5:48 PM IST

ನವದೆಹಲಿ:ಭಾರತದ ಮಹತ್ವಕಾಂಕ್ಷೆಯ ಸ್ವದೇಶಿ ನಿರ್ಮಿತ 'ವಂದೇ ಭಾರತ್ ಎಕ್ಸ್​ಪ್ರೆಸ್​' ರೈಲು ಯಾವುದೇ ಸಂಚಾರ ಅಡೆತಡೆ ಇಲ್ಲದೆ ಒಂದು ಲಕ್ಷ ಕಿ.ಮೀ. ಯಶಸ್ವಿಯಾಗಿ ಕ್ರಮಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 15ರಂದು ಚಾಲನೆ ನೀಡಿದ ದೇಶದ ಅತ್ಯಂತ ವೇಗದ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲು, ಕಳೆದ ಮೂರು ತಿಂಗಳಲ್ಲಿ ಒಂದೇ ಒಂದು ಸಂಚಾರ ಅಡೆತಡೆ ಇಲ್ಲದೆ 1 ಲಕ್ಷ ಕಿ.ಮೀ. ಸಂಚರಿಸಿದೆ ಎಂದು ಹೇಳಿದ್ದಾರೆ.

ಚಾಲನೆಗೊಂಡ ಮೊದಲ ದಿನ ವಾರಣಾಸಿಯಿಂದ ಮರಳಿ ಸಂಚರಿಸುವಾಗ ಕಾನ್ಪುರ ನಿಲ್ದಾಣದ ಬಳಿ ರೈಲಿನ ಬ್ರೇಕ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಇದ್ದಾದ ನಂತರ ಯಾವುದೇ ಸಮಸ್ಯೆ ಇಲ್ಲದೆ ಯಶಸ್ವಿಯಾಗಿ 1 ಲಕ್ಷ ಕಿ.ಮೀ. ಸಂಚರಿಸಿದೆ. ಫೆಬ್ರವರಿ 17ರಂದು ಮೊದಲ ವಾಣಿಜ್ಯ ಸಂಚಾರ ಆರಂಭಿಸಿದ್ದು, ಪ್ರಯಾಣಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

For All Latest Updates

TAGGED:

ABOUT THE AUTHOR

...view details