ಕರ್ನಾಟಕ

karnataka

ETV Bharat / business

ಲಾಕ್​ಡೌನ್​ ಜಾರಿಗಿಂತ ಸಾಮೂಹಿಕ ಲಸಿಕೆ ಬಹುದೊಡ್ಡ ಆರ್ಥಿಕ ಹೊರೆ ತಪ್ಪಿಸುತ್ತೆ: ಎಸ್‌ಬಿಐ ವರದಿ - ಭಾರತೀಯ ಸ್ಟೇಟ್ ಬ್ಯಾಂಕ್ ವರದಿ

ಸಂಪೂರ್ಣ ಲಾಕ್‌ಡೌನ್‌ಗಳಿಗಿಂತ ವೇಗದ ವ್ಯಾಕ್ಸಿನೇಷನ್ ಆರ್ಥಿಕತೆಯ ಮೇಲೆ ಅಗ್ಗವಾಗಲಿದೆ. ಒಟ್ಟು ವ್ಯಾಕ್ಸಿನೇಷನ್ ವೆಚ್ಚವು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 0.1 ಪ್ರತಿಶತದಷ್ಟು ಕಡಿಮೆಯಾಗಿದೆ. ಲಾಕ್‌ಡೌನ್‌ಗಳಿಗೆ ಈಗಾಗಲೇ ಜಿಡಿಪಿಯ ಶೇ 0.7ರಷ್ಟು ವೆಚ್ಚವಾಗಿದೆ ಎಂದು ಎಸ್‌ಬಿಐ ರಿಸರ್ಚ್ ವರದಿ ಹೇಳಿದೆ.

Vaccination
Vaccination

By

Published : Apr 23, 2021, 7:47 PM IST

ಮುಂಬೈ:ಸಾಂಕ್ರಾಮಿಕ ರೋಗ ಬಂದು ಒಂದು ವರ್ಷದ ನಂತರವೂ ಭಾರತೀಯರ ಜೀವನ ಮತ್ತು ಜೀವನೋಪಾಯದ ಸಂದಿಗ್ಧತೆ ಎದುರಿಸುತ್ತಿರುವಾಗ, ಕೋವಿಡ್ -19 ಪ್ರೇರಿತ ಲಾಕ್‌ಡೌನ್‌ಗಳು ಆರ್ಥಿಕ ಸಂಪನ್ಮೂಲಗಳಿಗಿಂತ ಬೊಕ್ಕಸಕ್ಕೆ ಹೆಚ್ಚಿನ ಹೊರೆ ಮಾಡಲಿವೆ. ಹೀಗಾಗಿ ಸರ್ಕಾರವು ಪರಿಣಾಮಕಾರಿ ಸಾಮೂಹಿಕ ವ್ಯಾಕ್ಸಿನೇಷನ್ ಚಾಲನೆಯತ್ತ ಗಮನ ಹರಿಸಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಬಿಐ ರಿಸರ್ಚ್ ವರದಿಯು ಸಂಪೂರ್ಣ ಲಾಕ್‌ಡೌನ್‌ಗಳಿಗಿಂತ ವೇಗದ ವ್ಯಾಕ್ಸಿನೇಷನ್ ಆರ್ಥಿಕತೆಯ ಮೇಲೆ ಅಗ್ಗವಾಗಲಿದೆ. ಒಟ್ಟು ವ್ಯಾಕ್ಸಿನೇಷನ್ ವೆಚ್ಚವು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 0.1 ಪ್ರತಿಶತದಷ್ಟು ಕಡಿಮೆಯಾಗಿದೆ. ಲಾಕ್‌ಡೌನ್‌ಗಳಿಗೆ ಈಗಾಗಲೇ ಜಿಡಿಪಿಯ ಶೇ 0.7ರಷ್ಟು ವೆಚ್ಚವಾಗಿದೆ ಎಂದಿದೆ.

ಬ್ಯಾಂಕಿನ ಮುಖ್ಯ ಆರ್ಥಿಕ ಸಲಹೆಗಾರ ಸೌಮ್ಯಾ ಕಾಂತಿ ಘೋಷ್ ಬರೆದಿರುವ ವರದಿಯಲ್ಲಿ, ಬಹುತೇಕ ಎಲ್ಲ ರಾಜ್ಯಗಳಲ್ಲಿನ ಭಾಗಶಃ, ಸ್ಥಳೀಯ ಮತ್ತು ವಾರಾಂತ್ಯದ ಲಾಕ್​ಡೌನ್​ಗಳ ಪ್ರಸ್ತುತ ಪರಿಸ್ಥಿತಿಗಳನ್ನು ಗಮನಿಸಿದರೆ, 2021-22ರ ಭಾರತದ ನೈಜ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯ ಈ ಹಿಂದಿನ ಶೇ 11ರಿಂದ 10.4ಕ್ಕೆ ಪರಿಷ್ಕರಿಸಲಾಗಿದೆ.

ಸೀಮಿತ ಲಾಕ್‌ಡೌನ್‌ಗಳಿಂದ 1.5 ಲಕ್ಷ ಕೋಟಿ ರೂ.ಯಷ್ಟು ನಷ್ಟವಾಗಲಿದೆ. ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನಗಳು ಶೇ 80ರಷ್ಟಿದ್ದರೆ, ಮಹಾರಾಷ್ಟ್ರದಲ್ಲಿ ಮಾತ್ರ ಶೇ 54ರಷ್ಟಿದೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ತಿಂಗಳ ಅಂತ್ಯದವರೆಗೆ ಲಾಕ್‌ಡೌನ್ ಆಗಿರುವುದರಿಂದ, 81,672 ಕೋಟಿ ರೂ. ನಷ್ಟವಾಗಿದೆ. ವಾರಾಂತ್ಯದ ಲಾಕ್‌ಡೌನ್ ಅಡಿ 15 ಜಿಲ್ಲೆಗಳೊಂದಿಗೆ ಮಧ್ಯಪ್ರದೇಶದ ಆರ್ಥಿಕ ಪರಿಣಾಮವು ಅದರ 11.3 ಲಕ್ಷ ಕೋಟಿ ರೂ. ಒಟ್ಟು ರಾಜ್ಯ ದೇಶೀಯ ಉತ್ಪನ್ನದ (ಜಿಎಸ್‌ಡಿಪಿ) 21,712 ಕೋಟಿ ರೂ.ನಷ್ಟಿದೆ. ಮೇ 3ರವರೆಗೆ ಲಾಕ್‌ಡೌನ್ ಇರುವ ರಾಜಸ್ಥಾನದ 12 ಲಕ್ಷ ಕೋಟಿ ರೂ. ಆರ್ಥಿಕತೆಯಲ್ಲಿ 17,237 ಕೋಟಿ ರೂ.ಯಷ್ಟು ಕಳೆದುಕೊಂಡಿದೆ.

ಘೋಷ್ ಅವರ ಜಿಡಿಪಿ ನಷ್ಟದ ಮೌಲ್ಯಮಾಪನದ ಶೇ 0.1ರಷ್ಟು ಅಂಶವು ಈ ರಾಜ್ಯಗಳ ಆರೋಗ್ಯ ವೆಚ್ಚದ ಬಜೆಟ್​​ನಲ್ಲಿ ಕೇವಲ ಶೇ 15-20ರಷ್ಟು ಮಾತ್ರ ಆಧರಿಸಿದೆ. ಈ ರಾಜ್ಯಗಳಲ್ಲಿನ ಅರ್ಧದಷ್ಟು ಜನಸಂಖ್ಯೆಯು ಕೇಂದ್ರದಿಂದ ಲಸಿಕೆ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.

ABOUT THE AUTHOR

...view details