ಕರ್ನಾಟಕ

karnataka

18 ವರ್ಷ ಮೇಲ್ಪಟ್ಟ 84.19 ಕೋಟಿ ಜನರಿಗೆ ಫ್ರೀ ಲಸಿಕೆ ಕೊಟ್ಟರೆ ತಗುಲುವ ವೆಚ್ಚ ಜಸ್ಟ್​ ₹__ ಮಾತ್ರ!

By

Published : Apr 22, 2021, 8:51 PM IST

ವ್ಯಾಕ್ಸಿನೇಷನ್​ಗೆ ಅರ್ಹರಾಗಿರುವ ಒಟ್ಟು ಜನಸಂಖ್ಯೆಯ 133.26 ಕೋಟಿ ಪೈಕಿ 84.19 ಕೋಟಿ ಆಗಿರಲಿದೆ. ಇದಕ್ಕೆ 67,193 ಕೋಟಿ ರೂ. ವೆಚ್ಚವಾಗಬಹುದು. ಅದರಲ್ಲಿ ಕೇಂದ್ರ ಸರ್ಕಾರವು 20,870 ಕೋಟಿ ರೂ. ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ 46,323 ಕೋಟಿ ರೂ. ಖರ್ಚು ಮಾಡಬೇಕಿದೆ. ಇದು ಜಿಡಿಪಿಯ ಶೇ 0.36ರಷ್ಟಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿಭಜಿಸಿದರೆ, ಕೇಂದ್ರ ಬಜೆಟ್ ಮೇಲೆ ಹಣಕಾಸಿನ ಪರಿಣಾಮವು ಜಿಡಿಪಿಯ ಶೇ 0.12ರಷ್ಟು ಮತ್ತು ರಾಜ್ಯ ಬಜೆಟ್ ಮೇಲೆ ಜಿಡಿಪಿಯ ಶೇ 0.24ರಷ್ಟಾಗುತ್ತದೆ.

Vaccinating
Vaccinating

ನವದೆಹಲಿ: ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಭಾರತವು 18 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಲಸಿಕೆ ಹಾಕಲು 67,193 ಕೋಟಿ ರೂ. ವೆಚ್ಚವಾಗಲಿದ್ದು, ಇದರಲ್ಲಿ ರಾಜ್ಯಗಳ ಒಟ್ಟಾರೆ ವೆಚ್ಚ 46,323 ಕೋಟಿ ರೂ. ಒಳಗೊಳ್ಳಲಿದೆ ಎಂದು ಇಂಡಿಯಾ ರೇಟಿಂಗ್ಸ್ ಹೇಳಿದೆ.

ಕೋವಿಡ್ ಎರಡನೇ ಅಲೆಯು ದೇಶಾದ್ಯಂತ ಅಪಾಯಕಾರಿ ವೇಗ ಮತ್ತು ತೀವ್ರತೆಯಿಂದ ವ್ಯಾಪಿಸುತ್ತಿದೆ. ಕೋವಿಡ್-19 ವ್ಯಾಕ್ಸಿನೇಷನ್‌ನ ವೇಗವರ್ಧಿತೆಯ 3ನೇ ಹಂತದ ತಂತ್ರವನ್ನು ಸರ್ಕಾರ ಘೋಷಿಸಿದೆ. ಈ ಯೋಜನೆಯಡಿ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವ್ಯಕ್ತಿಗಳು ಕೋವಿಡ್-19 ಲಸಿಕೆ ಡೋಸ್​ ಪಡೆಯಲು ಅರ್ಹರಾಗಿದ್ದಾರೆ.

ಈಗ ವ್ಯಾಕ್ಸಿನೇಷನ್ ಪಡೆಯಲು ಅರ್ಹರಾಗಿರುವ ಒಟ್ಟು ಜನಸಂಖ್ಯೆಯ 133.26 ಕೋಟಿ ಪೈಕಿ 84.19 ಕೋಟಿ ಆಗಿರಲಿದೆ. ಇದಕ್ಕೆ 67,193 ಕೋಟಿ ರೂ. ವೆಚ್ಚವಾಗಬಹುದು. ಅದರಲ್ಲಿ ಕೇಂದ್ರ ಸರ್ಕಾರವು 20,870 ಕೋಟಿ ರೂ. ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ 46,323 ಕೋಟಿ ರೂ. ಲಸಿಕೆಗಳ ಬೆಲೆ, ಸಂಗ್ರಹಣೆ, ಅರ್ಹತೆ ಮತ್ತು ವಿತರಣೆ ಒಳಗೊಂಡಿರಲಿದೆ.

ಇದನ್ನೂ ಓದಿ: ಕಂಪನಿಗಳಿಗೆ ಗುಡ್ ನ್ಯೂಸ್​: ಕೋವಿಡ್ ಆಸ್ಪತ್ರೆ, ಆರೈಕೆಗೆ CSR ಹಣ ಬಳಸಲು ಕೇಂದ್ರದ ಅಸ್ತು!

ವ್ಯಾಕ್ಸಿನೇಷನ್ ಡ್ರೈವ್ ಮೊದಲಿನಂತೆ ಮುಂದುವರಿಯಲಿದ್ದು, ಆದ್ಯತೆಯ ಮೇರೆಗೆ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಮಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನೇಷನ್ ಒದಗಿಸಲಾಗುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚುವರಿ ಕೋವಿಡ್-19 ಲಸಿಕೆ ಡೋಸ್​ ನೇರವಾಗಿ ಉತ್ಪಾದಕರಿಂದ ಸಂಗ್ರಹಿಸಲು ಅವಕಾಶವಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮುಕ್ತ ವ್ಯಾಕ್ಸಿನೇಷನ್ ಸಿಗಲಿದೆ.

ಈಗಿನ ನಿರ್ಧಾರದಿಂದಾಗಿ ಭಾರತೀಯ ಲಸಿಕೆ ತಯಾರಕರು ಈಗ ತಮ್ಮ ಉತ್ಪಾದನೆಯ 50 ಪ್ರತಿಶತವನ್ನು ಕೇಂದ್ರ ಸರ್ಕಾರಕ್ಕೆ ಪೂರೈಸಲಿದ್ದಾರೆ. ಉಳಿದ 50 ಪ್ರತಿಶತವನ್ನು ರಾಜ್ಯ ಸರ್ಕಾರಗಳು ಮತ್ತು ಮುಕ್ತ ಮಾರುಕಟ್ಟೆ (ಖಾಸಗಿ ಆಸ್ಪತ್ರೆಗಳು) ಸಂಗ್ರಹಿಸಲು ಲಭ್ಯವಿರುತ್ತದೆ.

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್​ನಿಂದ 21.4 ಕೋಟಿ ಲಸಿಕೆ ಖರೀದಿಸಲು ಕೇಂದ್ರ ಸರ್ಕಾರ ಈಗಾಗಲೇ 5,090 ಕೋಟಿ ರೂ. ನೀಡಿದೆ. ಹೊಸ ಲಸಿಕೆ ಖರೀದಿ ಮತ್ತು ಶೇ 5ರಷ್ಟು ವ್ಯರ್ಥವಾಗುವುದಕ್ಕೆ ಎರಡು ಡೋಸ್‌ ಲಸಿಕೆಗಳನ್ನು 400 ರೂ.ಗೆ ಅಂದಾಜಿಸಿದರೆ, ಕೇಂದ್ರ ಸರ್ಕಾರಕ್ಕೆ 155.4 ಕೋಟಿ ಡೋಸ್‌ಗಳಿಗೆ 62,103 ಕೋಟಿ ರೂ. ತಗುಲಲಿದೆ ಎಂದು ಹೇಳಿದೆ.

ಇವೆರಡರ ಒಟ್ಟು ಮೊತ್ತ 67,193 ಕೋಟಿ ರೂ. ಆಗಿದ್ದು, ಇದು ಜಿಡಿಪಿಯ ಶೇ 0.36ರಷ್ಟಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿಭಜಿಸಿದರೆ, ಕೇಂದ್ರ ಬಜೆಟ್ ಮೇಲೆ ಹಣಕಾಸಿನ ಪರಿಣಾಮವು ಜಿಡಿಪಿಯ ಶೇ 0.12ರಷ್ಟು ಮತ್ತು ರಾಜ್ಯ ಬಜೆಟ್ ಮೇಲೆ ಜಿಡಿಪಿಯ ಶೇ 0.24ರಷ್ಟಾಗುತ್ತದೆ.

ಗರಿಷ್ಠ ಪರಿಣಾಮ ಬಿಹಾರದ ಮೇಲೆ (ಒಟ್ಟು ರಾಜ್ಯ ದೇಶೀಯ ಉತ್ಪನ್ನದ ಶೇ 0.60ರಷ್ಟು), ನಂತರದ ಸ್ಥಾನದಲ್ಲಿ ಉತ್ತರ ಪ್ರದೇಶ ಶೇ 0.47ರಷ್ಟು, ಜಾರ್ಖಂಡ್ ಶೇ 0.37ರಷ್ಟು, ಮಣಿಪುರ ಶೇ 0.36ರಷ್ಟು, ಅಸ್ಸೋಂ ಶೇ 0.35 ರಷ್ಟು, ಮಧ್ಯಪ್ರದೇಶ ಶೇ 0.30ರಷ್ಟು ಮತ್ತು ಒಡಿಶಾ ಶೇ 0.30ರಷ್ಟು ಆಗಲಿದೆ.

ಈ ಲಸಿಕೆಗಳಿಂದ ಉತ್ಪತ್ತಿಯಾಗುವ ಪ್ರತಿಕಾಯಗಳು 12-18 ತಿಂಗಳುಗಳವರೆಗೆ ಇರುವುದರಿಂದ, ಈ ವೆಚ್ಚವು ಕೇಂದ್ರ ಮತ್ತು ರಾಜ್ಯ ಬಜೆಟ್‌ಗಳ ಪುನರಾವರ್ತಿತ ವೆಚ್ಚವಾಗಿದೆ. ಕೇರಳ, ಛತ್ತೀಸ್‌ಗಢ, ಬಿಹಾರ ಮತ್ತು ಮಧ್ಯಪ್ರದೇಶದಂತಹ ಅನೇಕ ರಾಜ್ಯಗಳು ವ್ಯಾಕ್ಸಿನೇಷನ್ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಈಗಾಗಲೇ ಘೋಷಿಸಿವೆ. ದೊಡ್ಡ ಕಾರ್ಪೊರೇಟ್ ಗ್ರೂಪ್​ಗಳ ವ್ಯಾಕ್ಸಿನೇಷನ್ ರಾಜ್ಯ ಮತ್ತು ಕೇಂದ್ರ ಬಜೆಟ್ ಮೇಲಿನ ಒತ್ತಡ ಕಡಿಮೆ ಮಾಡುತ್ತದೆ ಎಂದು ರೇಟಿಂಗ್ ಏಜೆನ್ಸಿ ಹೇಳಿದೆ.

ABOUT THE AUTHOR

...view details