ಕರ್ನಾಟಕ

karnataka

ETV Bharat / business

ಮೇ ಮಾಸಿಕದಲ್ಲಿ ಖಾಸಗಿ ವಲಯದಿಂದ 2.7 ಮಿಲಿಯನ್ ಉದ್ಯೋಗ ಕಡಿತ - ಉದ್ಯೋಗ ಕಡಿತ

ದೊಡ್ಡ ಉದ್ಯಮಗಳಲ್ಲಿ ಮೇ ತಿಂಗಳ ವೇಳೆ 1.6 ದಶಲಕ್ಷಕ್ಕೂ ಹೆಚ್ಚಿನ ಜನ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಮಧ್ಯಮ ವ್ಯವಹಾರಗಳು 7,22,000 ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಸಣ್ಣ ಉದ್ಯಮಗಳು 4,35,000 ನೌಕರರನ್ನು ವಜಾಗೊಳಿಸಿವೆ ಎಂದು ಎಡಿಪಿ ರಾಷ್ಟ್ರೀಯ ಉದ್ಯೋಗ ವರದಿ ತಿಳಿಸಿದೆ.

Job cut
ಉದ್ಯೋಗ ಕಡಿತ

By

Published : Jun 5, 2020, 7:36 PM IST

Updated : Jun 5, 2020, 8:14 PM IST

ನ್ಯೂಯಾರ್ಕ್:ಅಮೆರಿಕದ ಖಾಸಗಿ ವಲಯದಲ್ಲಿ ಉದ್ಯೋಗ ಕಡಿತವು ಏಪ್ರಿಲ್‌ನಿಂದ ಮೇವರೆಗೆ 2.7 (27 ಲಕ್ಷ) ಮಿಲಿಯನ್​ನಷ್ಟಾಗಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.

ದೊಡ್ಡ ಉದ್ಯಮಗಳಲ್ಲಿ ಮೇ ತಿಂಗಳ ವೇಳೆ 1.6 ದಶಲಕ್ಷಕ್ಕೂ ಹೆಚ್ಚಿನ ಜನ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಮಧ್ಯಮ ವ್ಯವಹಾರಗಳು 7,22,000 ಉದ್ಯೋಗಗಳನ್ನು ಕಡಿತಗೊಳಿಸಿದ್ದು, ಸಣ್ಣ ಉದ್ಯಮಗಳು 4,35,000 ನೌಕರರನ್ನು ವಜಾಗೊಳಿಸಿವೆ ಎಂದು ಎಡಿಪಿ ರಾಷ್ಟ್ರೀಯ ಉದ್ಯೋಗ ವರದಿ ತಿಳಿಸಿದೆ.

ಮೇ ತಿಂಗಳಲ್ಲಿನ ರಿಫಿನಿಟಿವಿಯಲ್ಲಿ ಅರ್ಥಶಾಸ್ತ್ರಜ್ಞರು ಮುನ್ಸೂಚನೆ ನೀಡಿದ್ದ 9 ಮಿಲಿಯನ್ ಉದ್ಯೋಗ ಕಡಿತಕ್ಕಿಂತ ಕಡಿಮೆಯಾಗಿದೆ ಎಂದು ಫಾಕ್ಸ್ ಬ್ಯುಸಿನೆಸ್ ವರದಿ ಮಾಡಿದೆ.

ಮೇ ತಿಂಗಳಲ್ಲಿ ಖಾಸಗಿ ವಲಯದ ಉದ್ಯೋಗಗಳಲ್ಲಿ 2.7 ಮಿಲಿಯನ್ ಇಳಿಕೆ ಕಂಡುಬಂದಿದ್ದು, ಏಪ್ರಿಲ್‌ನಲ್ಲಿ ಪರಿಷ್ಕೃತ 19.6 ಮಿಲಿಯನ್ ಇಳಿಕೆ ಕಂಡುಬಂದಿದೆ ಎಂದು ವೇತನದಾರರ ಮಾಹಿತಿಯ ಆಧಾರದ ಮೇಲೆ ಎಡಿಪಿ ವರದಿ ಮಾಡಿದೆ.

ಕೋವಿಡ್ -19 ಬಿಕ್ಕಟ್ಟು ಎಲ್ಲ ವ್ಯವಹಾರಗಳ ಮೇಲೆ ತೂಗು ಕತ್ತಿಯಾಗಿದೆ. ಕಾರ್ಮಿಕ ಮಾರುಕಟ್ಟೆಯು ಸಾಂಕ್ರಾಮಿಕ ರೋಗದಿಂದ ತತ್ತರಿಸುತ್ತಿರುವಾಗ ಉದ್ಯೋಗ ನಷ್ಟವು ಏಪ್ರಿಲ್​ನಲ್ಲಿ ಉತ್ತುಂಗಕ್ಕೇರಿತು ಎಂದು ಎಡಿಪಿ ಸಂಶೋಧನಾ ಸಂಸ್ಥೆಯ ಸಹ ಮುಖ್ಯಸ್ಥ ಅಹು ಯಿಲ್ಡಿರ್​ಮಾಜ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Last Updated : Jun 5, 2020, 8:14 PM IST

ABOUT THE AUTHOR

...view details