ಕರ್ನಾಟಕ

karnataka

ETV Bharat / business

ಕೊರೊನಾ ಹೊಡೆತಕ್ಕೆ ನಡುಗಿದ ಅಮೆರಿಕ: ಭಾರತದ ಸ್ವಾತಂತ್ರ್ಯವರ್ಷಕ್ಕೆ ಜಾರಿ ಬಿದ್ದ ಟ್ರಂಪ್ ಆರ್ಥಿಕತೆ - ಶೇ 33ರಷ್ಟು ಕುಸಿದ ಆರ್ಥಿಕ ಕುಸಿತ

1958ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಐಸೆನ್​ಹೋವರ್​ ಆಡಳಿತದಲ್ಲಿ ಇಂತಹ ಕೆಟ್ಟ ತ್ರೈಮಾಸಿಕ ಸಂಕೋಚನ ದಾಖಲಾಗಿತ್ತು. ಅಂದು ಶೇ 10ರಷ್ಟು ದೇಶದ ಆರ್ಥಿಕತೆ ಕುಸಿತ ಕಂಡಿತ್ತು.

US
ಅಮೆರಿಕ

By

Published : Jul 30, 2020, 8:43 PM IST

ನ್ಯೂಯಾರ್ಕ್​:ಅಮೆರಿಕ ಆರ್ಥಿಕತೆಯು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 33ರಷ್ಟು ವಾರ್ಷಿಕ ದರದಲ್ಲಿ ಕುಸಿತ ಕಂಡಿದೆ.

ಕೊರೊನಾ ವೈರಸ್​ನಿಂದ ಏಕಾಏಕಿ ವ್ಯವಹಾರಗಳ ಸ್ಥಗಿತ, ಹತ್ತಾರು ಮಿಲಿಯನ್ ನೌಕರರ ವಜಾ ಮತ್ತು ಶೇ 14.7ಕ್ಕೆ ತಲುಪಿದ ನಿರುದ್ಯೋಗದ ಪ್ರಮಾಣವು ಇದುವರೆಗಿನ ಅತ್ಯಂತ ಕೆಟ್ಟ ತ್ರೈಮಾಸಿಕ ಕುಸಿತವಾಗಿದೆ ಟ್ರಂಪ್ ಸರ್ಕಾರ ಹೇಳಿದೆ.

ಒಟ್ಟು ದೇಶೀಯ ಉತ್ಪನ್ನದ ಎರಡನೇ ತ್ರೈಮಾಸಿಕ ಕುಸಿತದ ವಾಣಿಜ್ಯ ಇಲಾಖೆಯ ಅಂದಾಜು ಪ್ರಕಾರ, ಸರಕು ಮತ್ತು ಸೇವೆಗಳ ಒಟ್ಟು ಉತ್ಪಾದನೆಯು 1947ರ ಅವಧಿಯಲ್ಲಿ ಇಂತಹ ತೀವ್ರ ಕುಸಿತ ಕಂಡಿತ್ತು ಎಂದಿದೆ.

ಈ ಹಿಂದೆ 1958ರ ಐಸೆನ್​ಹೋವರ್​ ಆಡಳಿತದಲ್ಲಿ ಇಂತಹ ಕೆಟ್ಟ ತ್ರೈಮಾಸಿಕ ಸಂಕೂಚನ ದಾಖಲಾಗಿತ್ತು. ಅಂದು ಶೇ 10ರಷ್ಟು ಕುಸಿತ ಕಂಡಿತ್ತು. ಕಳೆದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಶೇ 5ರಷ್ಟು ಕುಸಿತವಾಗಿತ್ತು. ಈ ಸಮಯದಲ್ಲಿ ಆರ್ಥಿಕತೆಯು ಕೊರೊನಾ ವೈರಸ್‌ನ ಹೊಡೆತಕ್ಕೆ ಆಗ ತಾನೇ ಸಿಲುಕಿತ್ತು.

ಕಳೆದ ತ್ರೈಮಾಸಿಕದಲ್ಲಿ ಸಂಕೋಚನಕ್ಕೆ ಗ್ರಾಹಕರ ಖರ್ಚಿನಲ್ಲಿನ ಹಿನ್ನಡೆಯೇ ಕಾರಣವಾಗಿದೆ. ಅದು ಸುಮಾರು ಶೇ 70ರಷ್ಟು ಆರ್ಥಿಕ ಚಟುವಟಿಕೆ ಮೇಲೆ ಪ್ರಭಾವ ಬೀರಿತ್ತು. ಪ್ರಯಾಣದ ಕಾರಣದಿಂದಾಗಿ ಗ್ರಾಹಕರ ಖರ್ಚು ಶೇ 34ರಷ್ಟು ವಾರ್ಷಿಕ ದರದಲ್ಲಿ ಕುಸಿತವಾಗಿದೆ. ಲಾಕ್​ಡೌನ್​ ಘೋಷಣೆಯಿಂದಾಗಿ ರೆಸ್ಟೋರೆಂಟ್‌, ಬಾರ್‌, ಮನರಂಜನಾ ಸ್ಥಳ ಮತ್ತು ಇತರ ಚಿಲ್ಲರೆ ವ್ಯಾಪಾರ ಸಂಸ್ಥೆಗಳು ಮುಚ್ಚಿದ್ದವು.

ABOUT THE AUTHOR

...view details