ಕರ್ನಾಟಕ

karnataka

ETV Bharat / business

ಆರ್ಥಿಕತೆ ನಿದ್ರೆಗೆ ಜಾರುವ ಮುನ್ನ ಮೇಲೇಳಿ: ಕೇಂದ್ರಕ್ಕೆ ಸಜ್ಜನ್ ಜಿಂದಾಲ್ ಸಲಹೆ - ಲಾಕ್​​ಡೌನ್

ಆರ್ಥಿಕತೆಯು ಜಾಗೃತಗೊಳಿಸಲು ಭಾರೀ ಪ್ರಯತ್ನಗಳನ್ನು ಕೈಗೊಳ್ಳಬೇಕು. ಅದು ನಿದ್ರೆಗೆ ಜಾರದಂತೆ ನೋಡಿಕೊಳ್ಳಲು ನಾವೀಗ ಮೇಲೇಳಬೇಕಿದೆ. ಆರ್ಥಿಕತೆಯಲ್ಲಿ ಖಿನ್ನತೆ ಕೂಡ ಈ ರಾಷ್ಟ್ರಕ್ಕೆ ಬೆದರಿಕೆಯಾಗಿದೆ ಎಂದು ಸಜ್ಜನ್ ಜಿಂದಾಲ್ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.

Sajjan Jindal
ಸಜ್ಜನ್ ಜಿಂದಾಲ್

By

Published : Apr 28, 2020, 4:33 PM IST

ನವದೆಹಲಿ:ದೇಶದ ಆರ್ಥಿಕತೆ ನಿದ್ರೆಗೆ ಜಾರುವುದನ್ನು ತಡೆಗಟ್ಟಲು ಸಾಧ್ಯವಾದಷ್ಟು ಬೇಗನೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕೈಗಾರಿಕೋದ್ಯಮಿ ಸಜ್ಜನ್ ಜಿಂದಾಲ್ ಹೇಳಿದ್ದಾರೆ.

ದೇಶಿಯವಾಗಿ ಲಾಕ್ ಡೌನ್ ಹಾಗೂ ಕೊರೊನಾ ವೈರಸ್ ಒಳಗೊಂಡಿರುವ ಸಕಾರಾತ್ಮಕ ಪರಿಣಾಮ ಹೊಂದಿದೆ. ಆದರೆ, ಆರ್ಥಿಕ ಶ್ರೇಯಸ್ಸಿಗೂ ಕೂಡ ಸರ್ಕಾರ ತನ್ನ ಗಮನ ಹರಿಸುವುದು ಅನಿವಾರ್ಯ ಎಂದು ಜೆಎಸ್​ಡಬ್ಲ್ಯು ಗ್ರೂಪ್ ಅಧ್ಯಕ್ಷ ತಿಳಿಸಿದ್ದಾರೆ.

ಆರ್ಥಿಕತೆ ಜಾಗೃತಗೊಳಿಸಲು ಭಾರೀ ಪ್ರಯತ್ನಗಳನ್ನು ಕೈಗೊಳ್ಳಬೇಕು. ಅದು ನಿದ್ರೆಗೆ ಜಾರದಂತೆ ನೋಡಿಕೊಳ್ಳಲು ನಾವೀಗ ಮೇಲೇಳಬೇಕಿದೆ. ಆರ್ಥಿಕತೆಯಲ್ಲಿ ಖಿನ್ನತೆ ಕೂಡ ಈ ರಾಷ್ಟ್ರಕ್ಕೆ ಬೆದರಿಕೆಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದರ ಲಸಿಕೆ ಶೋಧಿಸುವವರೆಗೂ ವೈರಸ್ ಬೆದರಿಕೆ ಯೊಡ್ಡುತ್ತಿರುತ್ತದೆ. ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಈ ಆರ್ಥಿಕತೆಯನ್ನು ಮತ್ತೆ ಸಾಮರ್ಥ್ಯಕ್ಕೆ ತರಲು 'ಹೊಸ ಸಾಮಾನ್ಯ'ದೊಳಗೆ ಕೆಲಸ ಮಾಡುವ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಎರಡು ಹಂತದ ಲಾಕ್​ಡೌನ್ ಆರ್ಥಿಕತೆಯ ವಿವಿಧ ವಲಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ, ಆರ್ಥಿಕತೆ ಮೇಲೆ ಅದರ ಪ್ರಭಾವವನ್ನು ಕಡಿಮೆ ಮಾಡಲು ಸರ್ಕಾರ ಏಪ್ರಿಲ್ 20ರಿಂದ ಕೈಗಾರಿಕೆಗಳಿಗೆ ಸಡಿಲತೆಗಳನ್ನು ಒದಗಿಸಿದೆ ಎಂದರು.

ABOUT THE AUTHOR

...view details