ಕರ್ನಾಟಕ

karnataka

ETV Bharat / business

ಸಿಟಿ ಸಹಕಾರಿ ಬ್ಯಾಂಕ್​ಗಳ ಸುತ್ತ ವಂಚಕರ ದಂಡು... ಬೆಣ್ಣೆಯಂತೆ ಕರಗುತ್ತಿದೆ ಹಣ

2014-15 ಮತ್ತು 2018-19 ಅವಧಿಯ ನಡುವಿನಲ್ಲಿ 972 ಪ್ರಕರಣಗಳು ಕಂಡು ಬಂದಿದ್ದು, ಇವುಗಳ ಮೊತ್ತ ₹ 221 ಕೋಟಿಯಷ್ಟಿದೆ. ಆರ್‌ಬಿಐಗೆ ವರದಿ ಮಾಡಲಾದ ವಂಚನೆ ಪ್ರಕರಣಗಳನ್ನು ಬ್ಯಾಂಕ್​ಗಳು ಕ್ರಿಮಿನಲ್ ದೂರುಗಳಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ. ಬ್ಯಾಂಕ್​ಗಳ ಸಿಬ್ಬಂದಿ ತಮ್ಮ ಹೊಣೆಗಾರಿಕೆಯ ಬಗ್ಗೆ ಪರಿಶೀಲಿಸಬೇಕು. ಆಂತರಿಕ ವಿಚಾರಣೆಯ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾಗುತ್ತದೆ' ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ಬ್ಯಾಂಕ್ ವಂಚನೆ
Bank fraud

By

Published : Jan 27, 2020, 4:51 PM IST

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ನಗರ ಸಹಕಾರಿ ಬ್ಯಾಂಕ್​ಗಳಲ್ಲಿ (ಯುಸಿಬಿ) ಸುಮಾರು 1,000 ವಂಚನೆ ಪ್ರಕರಣಗಳು ದಾಖಲಾಗಿದ್ದು, ಇದರ ಮೊತ್ತ ₹ 220 ಕೋಟಿಗೂ ಅಧಿಕಾವಾಗಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ತಿಳಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಬ್ಯಾಂಕ್​, 2018-19ರ ಅವಧಿಯಲ್ಲಿ ₹ 127.7 ಕೋಟಿ ಮೊತ್ತದ 181 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.

2016-7 ಹಾಗೂ 2017-18ನೇ ಸಾಲಿನಲ್ಲಿ ಕ್ರಮವಾಗಿ 27 ಮತ್ತು 99 ಪ್ರಕರಣಗಳು ದಾಖಲಾಗಿವೆ. ಈ ಎರಡೂ ವರ್ಷಗಳ ಮೊತ್ತ ₹ 9.3 ಕೋಟಿ ಹಾಗೂ ₹ 46.9 ಕೋಟಿಯಷ್ಟಿದೆ. 2015-16ರಲ್ಲಿ 187 ಕೇಸ್​ಗಳಿಂದ ₹ 17.3 ಕೋಟಿ ಮತ್ತು 2014-15ರಲ್ಲಿ 478 ವಂಚನೆ ಪ್ರಕರಣಗಳಿಂದ ₹ 19.8 ಕೋಟಿಯಷ್ಟು ಸಂಪತ್ತು ಕರಗಿದೆ.

2014-15 ಮತ್ತು 2018-19 ಅವಧಿಯ ನಡುವಿನಲ್ಲಿ 972 ಪ್ರಕರಣಗಳು ಕಂಡುಬಂದಿದ್ದು, ಇವುಗಳ ಮೊತ್ತ ₹ 221 ಕೋಟಿಯಷ್ಟಿದೆ. 'ಆರ್‌ಬಿಐಗೆ ವರದಿ ಮಾಡಲಾದ ವಂಚನೆ ಪ್ರಕರಣಗಳನ್ನು ಬ್ಯಾಂಕ್​ಗಳು ಕ್ರಿಮಿನಲ್ ದೂರುಗಳಾಗಿ ದಾಖಲಿಸಿಕೊಳ್ಳಬೇಕಾಗುತ್ತದೆ. ಬ್ಯಾಂಕ್​ಗಳ ಸಿಬ್ಬಂದಿ ತಮ್ಮ ಹೊಣೆಗಾರಿಕೆಯ ಬಗ್ಗೆ ಪರಿಶೀಲಿಸಬೇಕು. ಆಂತರಿಕ ವಿಚಾರಣೆಯ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕಾಗುತ್ತದೆ' ಎಂದು ಕೇಂದ್ರ ಬ್ಯಾಂಕ್ ಹೇಳಿದೆ.

ABOUT THE AUTHOR

...view details