ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ನಡೆದ ವಹಿವಾಟುಗಳ ಸಂಖ್ಯೆ 2020ರ ಅಕ್ಟೋಬರ್‌ನಲ್ಲಿ 2 ಬಿಲಿಯನ್ ಗಡಿ ದಾಟಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಮಿತಾಬ್ ಕಾಂತ್ ತಿಳಿಸಿದ್ದಾರೆ.
ದಾಖಲೆ ಮಟ್ಟ ತಲುಪಿದ ಯುಪಿಐ ಪಾವತಿ: ಅಕ್ಟೋಬರ್‌ನಲ್ಲಿ 2 ಬಿಲಿಯನ್ ಗಡಿ ಕ್ರಾಸ್ - ಪ್ರತಿ ತಿಂಗಳ ಯುಪಿಐ ವಹಿವಾಟು
ಯುಪಿಐ ಅಕ್ಟೋಬರ್ 2020ರಲ್ಲಿ 2 ಬಿಲಿಯನ್ ವಹಿವಾಟಿನ ಗಡಿ ದಾಟಿದೆ. ಯುಪಿಐ ಪರಿಮಾಣವು 2019ರ ಅಕ್ಟೋಬರ್‌ನಲ್ಲಿ 1.14 ಬಿಲಿಯನ್ ವಹಿವಾಟಿನಿಂದ ಕಳೆದ ತಿಂಗಳು 2.07 ಬಿಲಿಯನ್ ವಹಿವಾಟುಗಳಿಗೆ ಅಂದರೇ ಶೇ .80ರಷ್ಟು ಏರಿಕೆಯಾಗಿದೆ.
ಕಾಂತ್ ಪ್ರಕಾರ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಯುಪಿಐ ಮೂಲಕ 1.14 ಬಿಲಿಯನ್ ಪಾವತಿ ಮಾಡಿದ್ದರಿಂದ ವಹಿವಾಟಿನ ಪ್ರಮಾಣವು ಒಂದು ವರ್ಷದ ಅವಧಿಯಲ್ಲಿ ಶೇ 80ರಷ್ಟು ಹೆಚ್ಚಾಗಿದೆ.
ಈ ಸಮಯದ ಯುಪಿಐ ವಹಿವಾಟು ಮೌಲ್ಯವು ದ್ವಿಗುಣಗೊಂಡಿದೆ. ಅಮೇಜಿಂಗ್! ಯುಪಿಐ ಅಕ್ಟೋಬರ್ 2020ರಲ್ಲಿ 2 ಬಿಲಿಯನ್ ವಹಿವಾಟಿನ ಗಡಿ ದಾಟಿದೆ. ಯುಪಿಐ ಪರಿಮಾಣವು 2019ರ ಅಕ್ಟೋಬರ್‌ನಲ್ಲಿ 1.14 ಬಿಲಿಯನ್ ವಹಿವಾಟಿನಿಂದ ಕಳೆದ ತಿಂಗಳು 2.07 ಬಿಲಿಯನ್ ವಹಿವಾಟುಗಳಿಗೆ ಅಂದರೇ ಶೇ .80ರಷ್ಟು ಏರಿಕೆಯಾಗಿದೆ. ವಹಿವಾಟಿನ ಮೌಲ್ಯವು ಶೇ 101ರಷ್ಟು ಏರಿಕೆಯಾಗಿ 1,91,359.94 ಕೋಟಿ ರೂ.ಯಿಂದ 3,86,106.74 ಕೋಟಿ ರೂ.ಗೆ ತಲುಪಿದೆ ಎಂದು ಕಾಂತ್ ಟ್ವೀಟ್ ಮಾಡಿದ್ದಾರೆ.