ಕರ್ನಾಟಕ

karnataka

ETV Bharat / business

ಎಲ್ಲರ ಸಮಸ್ಯೆಗಳನ್ನು ಬಗೆಹರಿಸುವ ವಿಶ್ವಸಂಸ್ಥೆಯ ಖಜಾನೆಯೇ ಖಾಲಿ-ಖಾಲಿ - financial crisis

ವಿಶ್ವಸಂಸ್ಥೆಗೆ ಸಲ್ಲಿಸಬೇಕಾದ ನಿಯಮಿತ ಬಜೆಟ್​​ ಮೊತ್ತವನ್ನು ಸರಿಯಾಗಿ ಪಾವತಿಸದ ಕಾರಣ ವಿಶ್ವಸಂಸ್ಥೆ ಪ್ರಸ್ತುತ ಹಣಕಾಸಿನ ಕೊರತೆ ಎದುರಿಸುತ್ತಿದೆ. ಅಕ್ಟೋಬರ್​ ಅಂತ್ಯದ ವೇಳೆಗೆ ಖರ್ಚಿಗೆ ಹಣವಿಲ್ಲದ ಪರಿಸ್ಥಿತಿ ಎದುರಾಗಬಹುದು. ವೇತನ ಹಾಗೂ ಭತ್ಯೆಗಳ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅಗತ್ಯವೆಂದು ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್​ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

By

Published : Oct 9, 2019, 7:59 AM IST

ನ್ಯೂಯಾರ್ಕ್​: ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಗೆ ಸಲ್ಲಿಸಬೇಕಾದ ನಿಯಮಿತ ಬಜೆಟ್​​ ಮೊತ್ತವನ್ನು ಸರಿಯಾಗಿ ಪಾವತಿಸದ ಕಾರಣ ವಿಶ್ವಸಂಸ್ಥೆಯು ಹಣಕಾಸಿನ ಕೊರತೆ ಎದುರಿಸುತ್ತಿದೆ ಎಂದು ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್​ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಹಣಕಾಸಿನ ಮೇಲ್ವಿಚಾರಣೆಯ ಯುಎನ್‌ನ ಐದನೇ ಸಮಿತಿಯ ಮುಂದೆ ಮಾತನಾಡಿದ ಅವರು, ಹಣದ ಚಟುವಟಿಕೆಯು ತುಂಬಾ ಬಿಗಿಯಾಗುತ್ತಿದೆ. ಕಳೆದ ತಿಂಗಳು ನಡೆದ ವಾರ್ಷಿಕ ಮಹಾಧಿವೇಶನಕ್ಕೂ ಮುನ್ನ ಆರಂಭಿಕ ಹಂತದ ತುರ್ತು ಖರ್ಚುಗಳಲ್ಲಿ ಕಡಿತಗೊಳಿಸಲಾಗಿತ್ತು. ಇದರಿಂದಾಗಿ ಮಹಾಧಿವೇಶನ ನಡೆಸಲು ಸಾಧ್ಯವಾಯಿತು ಎಂದರು.

ಅಕ್ಟೋಬರ್​ ಅಂತ್ಯದ ವೇಳೆಗೆ ಖರ್ಚಿಗೆ ಹಣವಿಲ್ಲದ ಪರಿಸ್ಥಿತಿ ಎದುರಾಗಬಹುದು. ವೇತನ ಹಾಗೂ ಭತ್ಯೆಗಳ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳುವುದು ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅಗತ್ಯವೆಂದು ಸೆಕ್ರೆಟರಿಯೇಟ್​ ಸಿಬ್ಬಂದಿ ಉದ್ದೇಶಿಸಿ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸದಸ್ಯ ರಾಷ್ಟ್ರಗಳು 2019ರಲ್ಲಿ ನಿಯಮಿತ ಬಜೆಟ್ ಕಾರ್ಯಾಚರಣೆಗಳಿಗೆ ಬೇಕಾದ ಒಟ್ಟು ಮೊತ್ತದಲ್ಲಿ ಶೇ 70ರಷ್ಟು ಮಾತ್ರ ಪಾವತಿಸಿವೆ. ಸೆಪ್ಟೆಂಬರ್ ಅಂತ್ಯದ ವೇಳೆಗೆ ₹ 1,637 ಕೋಟಿ (230 ಮಿಲಿಯನ್ ಡಾಲರ್​) ನಗದು ಕೊರತೆಗೆ ಕಾರಣವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ABOUT THE AUTHOR

...view details