ನವದೆಹಲಿ :1,482 ನಗರ ಸಹಕಾರಿ ಬ್ಯಾಂಕ್ಗಳು ಮತ್ತು 58 ಬಹು ರಾಜ್ಯ ಸಹಕಾರಿ ಬ್ಯಾಂಕ್ಗಳು ಸೇರಿ ಇತರೆ ಸರ್ಕಾರಿ ಬ್ಯಾಂಕ್ಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇಲ್ವಿಚಾರಣಾ ಅಧಿಕಾರಕ್ಕೆ ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಪ್ರಕಟಿಸಿದೆ.
ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ನಿಗದಿತ ಬ್ಯಾಂಕ್ಗಳಿಗೆ ಅನ್ವಯವಾಗುವಂತೆ ಆರ್‌ಬಿಐನ ಅಧಿಕಾರಗಳು ಸಹಕಾರಿ ಬ್ಯಾಂಕ್ಗಳಿಗೂ ಅನ್ವಯವಾಗುತ್ತವೆ ಎಂದು ಹೇಳಿದರು.
ಕಳೆದ ವರ್ಷ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್ ವೈಫಲ್ಯದ ನಂತರ, ಕೇಂದ್ರ ಕ್ಯಾಬಿನೆಟ್ ಫೆಬ್ರವರಿಯಲ್ಲಿ ದೇಶದ ಸಹಕಾರಿ ಬ್ಯಾಂಕ್ಗಳನ್ನು ಬಲಪಡಿಸಲು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿತು. 2020ರ ಬಜೆಟ್ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹಕಾರಿ ಬ್ಯಾಂಕ್ಗಳನ್ನು ಆರ್‌ಬಿಐ ವ್ಯಾಪ್ತಿಗೆ ತರಲಾಗುವುದು ಎಂದು ಘೋಷಿಸಿದ್ದರು.
ದೇಶಾದ್ಯಂತ 1,500ಕ್ಕೂ ಹೆಚ್ಚು ನಗರ ಮತ್ತು ಬಹು ರಾಜ್ಯ ಸಹಕಾರಿ ಬ್ಯಾಂಕ್ಗಳಲ್ಲಿ 8.6 ಕೋಟಿಗೂ ಹೆಚ್ಚು ಠೇವಣಿದಾರರಿದ್ದಾರೆ. ಸಹಕಾರಿ ಬ್ಯಾಂಕ್ಗಳಲ್ಲಿ 4.84 ಲಕ್ಷ ಕೋಟಿ ಮೊತ್ತದ ಠೇವಣಿದಾರರ ಹಣ ಸುರಕ್ಷಿತವಾಗಿರುತ್ತದೆ ಎಂದು ಜಾವಡೇಕರ್ ಹೇಳಿದರು.