ಕರ್ನಾಟಕ

karnataka

ETV Bharat / business

ಮತ್ತೆ ಒಂದು ವರ್ಷ ವಸತಿ ತೆರಿಗೆ ವಿನಾಯತಿ ಘೋಷಿಸಿದ ನಿರ್ಮಲಾ: ಯಾರಿಗೆಲ್ಲ ಲಾಭ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಕೈಗೆಟುಕುವ ವಸತಿ ಯೋಜನೆಗಳ ತೆರಿಗೆ ರಜೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸುವುದಾಗಿ ಘೋಷಿಸಿದರು. ಕೈಗೆಟುಕುವ ವಸತಿ ಯೋಜನೆಗಳು 2021ರ ಮಾರ್ಚ್ 31ರವರೆಗೆ ತೆರಿಗೆ ವಿನಾಯಿತಿ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

Union Budget
Union Budget

By

Published : Feb 1, 2021, 4:41 PM IST

ನವದೆಹಲಿ: ಕೇಂದ್ರ ಹಣಕಾಸು ಸಚಿವರು ತಮ್ಮ 'ಹಿಂದೆಂದೂ ಇರದಂತೆ ಇರಲಿದೆ' ಎನ್ನುತಲೇ ಬಜೆಟ್‌ನಲ್ಲಿ ಕೈಗೆಟುಕುವ ವಸತಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ ಕೈಗೆಟುಕುವ ವಸತಿ ಯೋಜನೆಗಳ ತೆರಿಗೆ ರಜೆಯನ್ನು ಇನ್ನೂ ಒಂದು ವರ್ಷ ವಿಸ್ತರಿಸುವುದಾಗಿ ಘೋಷಿಸಿದರು. ಕೈಗೆಟುಕುವ ವಸತಿ ಯೋಜನೆಗಳು 2021ರ ಮಾರ್ಚ್ 31ರವರೆಗೆ ತೆರಿಗೆ ವಿನಾಯಿತಿ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಎಲ್ಲರಿಗೂ ಆರ್ಥಿಕ ಸೇರ್ಪಡೆ ನೀಡುವಂತಹ ಆತ್ಮನಿರ್ಬರ ಭಾರತ ಮಿಷನ್‌ನ ಮೂರನೇ ಘೋಷಣೆಯಡಿ ಎಲ್ಲರಿಗೂ ಕೈಗೆಟುಕುವ ವಸತಿ ಖಾತ್ರಿಪಡಿಸುವ ಉದ್ದೇಶದಿಂದ ಹಣಕಾಸು ಸಚಿವರು ಒಂದು ಹೆಚ್ಚುವರಿ ತೆರಿಗೆ ವಿನಾಯಿತಿ ನೀಡಿದ್ದರು.

ಈ ಸರ್ಕಾರವು ‘ಎಲ್ಲರಿಗೂ ವಸತಿ’ ಮತ್ತು ಕೈಗೆಟುಕುವ ಗೃಹಗಳನ್ನು ಆದ್ಯತೆಯ ಕ್ಷೇತ್ರಗಳಾಗಿ ನೋಡುತ್ತದೆ. ಜುಲೈ 2019ರ ಬಜೆಟ್‌ನಲ್ಲಿ ಕೈಗೆಟುಕುವ ಮನೆ ಖರೀದಿಸಲು ತೆಗೆದುಕೊಂಡ ಸಾಲಕ್ಕಾಗಿ ನಾನು 1.5 ಲಕ್ಷ ರೂ. ತನಕ ಹೆಚ್ಚುವರಿ ಬಡ್ಡಿ ಕಡಿತ ಒದಗಿಸಿದೆ. ಈ ಕಡಿತದ ಅರ್ಹತೆ ಇನ್ನೂ ಒಂದು ವರ್ಷದವರೆಗೆ ಅಂದರೆ 2022ರ ಮಾರ್ಚ್ 31ಕ್ಕೆ ವಿಸ್ತರಿಸಲು ಸಲಹೆ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ದೇಶಾದ್ಯಂತ ಉತ್ತಮ ಸ್ಪಂದನೆ; ಬಜೆಟ್​​ ವೇಳೆ ನಿರ್ಮಲಾ ಹೇಳಿಕೆ

ವಲಸೆ ಕಾರ್ಮಿಕರಿಗೆ ಕೈಗೆಟುಕುವ ವಸತಿ ಖಾತ್ರಿಪಡಿಸಿಕೊಳ್ಳಲು ಕೈಗೆಟುಕುವ ಬಾಡಿಗೆ ವಸತಿ ಯೋಜನೆಗಳಿಗೆ ಇನ್ನೂ ಒಂದು ವರ್ಷದವರೆಗೆ ತೆರಿಗೆ ರಜೆ ಸಿಗಲಿದೆ. ಕೈಗೆಟುಕುವ ಬಾಡಿಗೆ ವಸತಿ ಯೋಜನೆಗಳು ಪ್ರಧಾನ್ ಮಂತಿ ಗರೀಬ್ ಆವಾಸ್ ಯೋಜನೆ ಭಾಗವಾಗಿದೆ. ಕೈಗೆಟುಕುವ ವಸತಿ ಯೋಜನೆಗಳು ಮುಖ್ಯವಾಗಿ ಸರ್ಕಾರಿ ಕೇಂದ್ರೀಕೃತ ರಿಯಲ್ ಎಸ್ಟೇಟ್ ಕ್ಷೇತ್ರವಾಗಿದ್ದು, ಎಲ್ಲರಿಗೂ ವಸತಿ ಖಾತ್ರಿಪಡಿಸುತ್ತದೆ.

ABOUT THE AUTHOR

...view details