ಕರ್ನಾಟಕ

karnataka

ETV Bharat / business

ಬಿಎಸ್​​​ವೈರಂತೆ ಪ್ರತ್ಯೇಕ ಕೃಷಿ ಬಜೆಟ್​ ಮಂಡಿಸುವಂತೆ ಮೋದಿಗೆ ಪಂಜಾಬ್ ರೈತರ​ ಸಲಹೆ - ಕೇಂದ್ರ ಬಜೆಟ್ 2020

ರೈತರ ಹಕ್ಕುಗಳ ಗುಂಪಿನ ಕಿಸಾನ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಮಾತನಾಡಿ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ನಮ್ಮಲ್ಲಿ ಈಗ ಯಾವುದೇ ಮಾರ್ಗಸೂಚಿ ಇಲ್ಲ. ಹೀಗಾಗಿ, ಕೃಷಿ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಬಜೆಟ್​ ಮಂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್​ ಅನ್ನು ಪ್ರತ್ಯೇಕವಾಗಿ ಮಂಡಿಸಿದ ಶ್ರೇಯಸ್ಸು ಬಿಎಸ್​ವೈ ಅವರಿಗೆ ಸಲ್ಲುತ್ತದೆ. ಇಂತಹುದ್ದೇ ಬೇಡಿಕೆಯನ್ನು ಕೃಷಿಕರು ಕೇಂದ್ರದ ಮುಂದೆ ಇರಿಸಿದ್ದಾರೆ.

Union Budget
ಬಜೆಟ್​

By

Published : Jan 21, 2020, 11:57 PM IST

ಅಮೃತಸರ: ಕೇಂದ್ರದ 2020-21ನೇ ಸಾಲಿನ ಬಜೆಟ್​ ಮಂಡನೆಯ ದಿನಾಂಕ ಹತ್ತಿರ ಆಗುತ್ತಿದ್ದಂತೆ ವಿವಿಧ ಕ್ಷೇತ್ರಗಳ ಉದ್ಯಮಿಗಳು ತಮಗೆ ಅಗತ್ಯವಾದ ಬೇಡಿಕೆಗಳನ್ನು ಕೇಂದ್ರದ ಮುಂದಿಡುತ್ತಿದ್ದಾರೆ.

ಅದೇ ಮಾದರಿಯಲ್ಲಿ ರೈತರು ಕೂಡ ಕೃಷಿ ಕ್ಷೇತ್ರದ ಅಭ್ಯುದಯದ ದೃಷ್ಟಿಯಿಂದ ತಮ್ಮದೆಯಾದ ಅಹವಾಲುಗಳನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಿದ್ದಾರೆ. ಬೆಳೆಗಳ ಬೆಲೆಗೆ ಪ್ರತ್ಯೇಕ ಅವಕಾಶ ಕಲ್ಪಿಸಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ಅಮೃತಸರ್ ರೈತರ ಪ್ರತ್ಯೇಕ ಕೃಷಿ ಬಜೆಟ್​ಗೆ ಬೇಡಿಕೆ

ರೈತರ ಹಕ್ಕುಗಳ ಗುಂಪಿನ ಕಿಸಾನ್ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿ ಸರ್ವಾನ್ ಸಿಂಗ್ ಮಾತನಾಡಿ, ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ನಮ್ಮಲ್ಲಿ ಈಗ ಯಾವುದೇ ಮಾರ್ಗಸೂಚಿ ಇಲ್ಲ. ಹೀಗಾಗಿ, ಕೃಷಿ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಬಜೆಟ್​ ಮಂಡಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಕೃಷಿ ಬಜೆಟ್​ ಪ್ರತ್ಯೇಕವಾಗಿ ಮಂಡಿಸಿದ ಶ್ರೇಯಸ್ಸು ಬಿಎಸ್​ವೈ ಅವರಿಗೆ ಸಲ್ಲುತ್ತದೆ. 2011ರ ಫೆಬ್ರವರಿ 24ರಂದು ಮುಖ್ಯಮಂತ್ರಿ ಆಗಿದ್ದಾಗ ಬಿಎಸ್​ ಯಡಿಯೂರಪ್ಪ ಪ್ರಥಮ ಬಾರಿಗೆ ಪ್ರತ್ಯೇಕ ಕೃಷಿ ಬಜೆಟ್​ ಮಂಡಿಸಿದ್ದರು.

ABOUT THE AUTHOR

...view details