ಕರ್ನಾಟಕ

karnataka

ETV Bharat / business

ಈ ಎರಡೇ ಕಾರಣಗಳಿಂದ ಅರಬ್ ರಾಷ್ಟ್ರಗಳಲ್ಲಿ ನಡೆಯಲಿದೆಯಂತೆ ರಕ್ತದೋಕುಳಿ: IMF ಕೊಟ್ಟ ಎಚ್ಚರಿಕೆ ಇದು? - ನಿರುದ್ಯೋಗ

ಕಳೆದ ಒಂದು ದಶಕದಿಂದ ಅರಬ್ ರಾಷ್ಟ್ರಗಳಲ್ಲಿ ಹಿಂಸಾತ್ಮ ಮುಷ್ಕರಗಳು ಶುರುವಾಗಿವೆ. ಸಿರಿಯಾ, ಯೆಮೆನ್, ಲಿಬಿಯಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ರಕ್ತದೋಕುಳಿ ಹರಿಸಿದೆ. ಇನ್ನುಳಿದಂತೆ ಅಲ್ಜೇರಿಯಾ, ಸೂಡಾನ್, ಇರಾಕ್​, ಲೆಬನಾನ್​​ ​ಗಳಲ್ಲಿ ಮುಷ್ಕರದ ಕಾವು ಹೊಸ ಸಲೆಯನ್ನೇ ಸೃಷ್ಟಿಸುತ್ತಿದೆ. ಆರ್ಥಿಕ ಸುಧಾರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಒತ್ತಡ ಹೆಚ್ಚಾಗಿದೆ ಎಂದು ಐಎಂಎಫ್​ ವರದಿ ವಿವರಿಸಿದೆ.

ಸಾಂದರ್ಭಿಕ ಚಿತ್ರ

By

Published : Oct 29, 2019, 10:25 AM IST

ದುಬೈ:ಹೆಚ್ಚುತ್ತಿರುವ ನಿರುದ್ಯೋಗ ಹಾಗೂ ಆರ್ಥಿಕ ಬೆಳವಣಿಗೆಯ ಕುಸಿತದ ಮಧ್ಯಪ್ರಾಚ್ಯದ ಅರಬ್​ ರಾಷ್ಟ್ರಗಳಲ್ಲಿ ಸಾಮಾಜಿಕ ಪರಿಸ್ಥಿತಿ ವಿಷಮ ಸ್ಥಿತಿಗೆ ತಲುಪಿ ದೊಡ್ಡ ಮಟ್ಟದಲ್ಲಿ ಮುಷ್ಕರಗಳು ನಡೆಯಲಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್​) ಎಚ್ಚರಿಕೆ ನೀಡಿದೆ.

ಈ ತಿಂಗಳ ಆರಂಭದಲ್ಲಿ ಐಎಂಎಫ್​, ಅರಬ್ ರಾಷ್ಟ್ರಗಳು ಮತ್ತು ಇರಾನ್ ಒಳಗೊಂಡ ಪ್ರದೇಶದ ಆರ್ಥಿಕ ಬೆಳವಣಿಗೆಗೆ 2019ರ ಮುನ್ಸೂಚನೆಯನ್ನು ಕಳೆದ ವರ್ಷ ಶೇ 1.1ರಿಂದ ಶೇ 0.1ಕ್ಕೆ ಇಳಿಸಿತು. ಜಾಗತಿಕ ವ್ಯಾಪಾರ ಉದ್ವಿಗ್ನತೆ, ತೈಲ ಬೆಲೆಗಳ ಚಂಚಲತೆ ಮತ್ತು ಅವ್ಯವಸ್ಥೆಯ ಬ್ರೆಕ್ಸಿಟ್ ಒಪ್ಪಂದದ ಜೊತೆಗೆ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದಲ್ಲಿ (ಮೆನಾ) ನಿಧಾನಗತಿಯ ಆರ್ಥಿಕ ಬೆಳವಣಿಗೆ ಉಂಟಾಗುತ್ತದೆ ಎಂದು ಐಎಂಎಫ್ ಪ್ರಾದೇಶಿಕ ಆರ್ಥಿಕ ದೃಷ್ಟಿಕೋನದ ವರದಿಯಲ್ಲಿ ವಿವರಿಸಿದೆ.

ದೊಡ್ಡ ಪ್ರಮಾಣದ ಆರ್ಥಿಕತೆ ಹೊಂದಿರುವ ಸೌದಿ, ಇರಾನ್ ಹಾಗೂ ಅರಬ್​ ಎಮಿರೇಟ್ಸ್​ ಒಕ್ಕೂಟದ ಆರ್ಥಿಕ ಬೆಳವಣಿಗೆ ಕುಸಿತ ಕಾಣುತ್ತಿದೆ. ಜಾಗತಿಕ ಅವಲಂಬನೆಯ ಇದಕ್ಕೆ ಮುಖ್ಯ ಕಾರಣವಾಗಿದೆ. ಹೇಳಿದೆ. ನಿರುದ್ಯೋಗ ಸಮಸ್ಯೆ ನಿವಾರಿಸಲು ಅಗತ್ಯವಿರುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಈ ದೇಶಗಳ ಆರ್ಥಿಕ ಬೆಳವಣಿಗೆ ಕುಸಿತ ಕಂಡಿರುವುದಾಗಿ ಐಎಎಫ್​ ಹೇಳಿದೆ.

ಕಳೆದ ಒಂದು ದಶಕದಿಂದ ಅರಬ್ ರಾಷ್ಟ್ರಗಳಲ್ಲಿ ಹಿಂಸಾತ್ಮ ಮುಷ್ಕರಗಳು ಶುರುವಾಗಿವೆ. ಸಿರಿಯಾ, ಯೆಮೆನ್, ಲಿಬಿಯಾ ಸೇರಿದಂತೆ ಇತರ ರಾಷ್ಟ್ರಗಳಲ್ಲಿ ರಕ್ತದೋಕುಳಿ ಹರಿಸಿದೆ. ಇನ್ನುಳಿದಂತೆ ಅಲ್ಜೇರಿಯಾ, ಸೂಡಾನ್, ಇರಾಕ್​, ಲೆಬನಾನ್​​​ಗಳಲ್ಲಿ ಮುಷ್ಕರದ ಕಾವು ಹೊಸ ಸಲೆಯನ್ನೇ ಸೃಷ್ಟಿಸುತ್ತಿದೆ. ಆರ್ಥಿಕ ಸುಧಾರಣೆ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವ ಒತ್ತಡ ಹೆಚ್ಚಾಗಿದೆ ಎಂದು ವರದಿ ವಿವರಿಸಿದೆ.

ABOUT THE AUTHOR

...view details