ನ್ಯೂಯಾರ್ಕ್:ಕಳೆದ ವರ್ಷ ಕೊರೊನಾ ವೈರಸ್ ಪ್ರೇರಿತ ಭಾರತದ ಆರ್ಥಿಕತೆ ಕಳೆದ ವರ್ಷ ಶೇ 9.6ರಷ್ಟು ಕುಸಿದ ನಂತರ ಈ ಕ್ಯಾಲೆಂಡರ್ ವರ್ಷದಲ್ಲಿ ಶೇ 7.3ರಷ್ಟು ಚೇತರಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.
ಇತ್ತೀಚೆಗೆ ಬಿಡುಗಡೆಯಾದ ಯುಎನ್‌ನ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ನಿರೀಕ್ಷಣ 2021ರ ವರದಿಯಲ್ಲಿ ತೀವ್ರ ಹಣಕಾಸಿನ ಮತ್ತು ವಿತ್ತೀಯ ಪ್ರಚೋದನೆಯ ಹೊರತಾಗಿಯೂ" ಭಾರತದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಲಾಕ್‌ಡೌನ್ ಮತ್ತು ಇತರ ಪ್ರಯತ್ನಗಳಿಂದಾಗಿ ಕುಸಿಯಿತು. ರೋಗ ಹಬ್ಬುವಿಕೆ ತಡೆಯ ಪ್ರಯತ್ನದ ಕ್ರಮಗಳ ವೇಳೆ ದೇಶೀಯ ಬಳಕೆ ಕಡಿತಗೊಳಿಸಿತು ಎಂದು ಉಲ್ಲೇಖವಾಗಿದೆ.
ಭಾರತದ ಜಿಡಿಪಿ ಬೆಳವಣಿಗೆಯು 2022ರ ಕ್ಯಾಲೆಂಡರ್ ವರ್ಷದಲ್ಲಿ ಶೇ 5.9ಕ್ಕೆ ಇಳಿಯಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಪ್ರಪಂಚದಾದ್ಯಂತ ಹಬ್ಬಿದ ವರ್ಷದಲ್ಲಿ ಚೀನಾದ ಆರ್ಥಿಕತೆ ಮಾತ್ರವೇ ಬೆಳವಣಿಗೆ ಕಂಡಿದೆ. ಇತ್ತೀಚಿನ ವರದಿಯಲ್ಲಿ ಶೇ 2.4ರಷ್ಟು ಹೆಚ್ಚಳ ದಾಖಲಿಸಿದ ಚೀನಾ, ಈ ವರ್ಷ ಶೇ 7.2ರಷ್ಟು ಏರಿಕೆಯಾಗುವ ಮುನ್ಸೂಚನೆಯಿದೆ. ಮುಂದಿನ ವರ್ಷ ಶೇ 5.8ರಷ್ಟು ಏರಿಕೆಯಾಗಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: 1930ರ ಮಹಾ ಆರ್ಥಿಕ ಕುಸಿತಕ್ಕಿಂತಲೂ ಭೀಕರ ಉದ್ಯೋಗ ನಷ್ಟ : ವಿಶ್ವ ಕಾರ್ಮಿಕರ ಒಕ್ಕೂಟ ಕಳವಳ
ಜಾಗತಿಕ ಆರ್ಥಿಕತೆಯು ಕಳೆದ ವರ್ಷ ಶೇ 4.3ರಷ್ಟು ಕುಗ್ಗಿದೆ. ಈ ವರ್ಷ ಶೇ 4.7ರಷ್ಟು ಮತ್ತು ಮುಂದಿನ ವರ್ಷದಲ್ಲಿ ಶೇ 5.9ರಷ್ಟು ಏರಿಕೆಯಾಗುವ ಮುನ್ಸೂಚನೆ ಇದೆ.
ಅತ್ಯಂತ ದೊಡ್ಡ ಬಿಕ್ಕಟ್ಟಿನ ಆಳ ಮತ್ತು ತೀವ್ರತೆಯು ನಿಧಾನಗತಿಯು ನೋವಿನ ಚೇತರಿಕೆಗೆ ಮುನ್ಸೂಚನೆ ನೀಡುತ್ತದೆ. ಪ್ರಪಂಚವು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುವಾಗ ವಿಪರೀತ ಹಣಕಾಸಿನ ಸಂಯಮ ಹೇರುವ ಪ್ರಲೋಭನೆಯ ಬಗ್ಗೆಯೂ ಯುಎನ್ ಮುಖ್ಯ ಅರ್ಥಶಾಸ್ತ್ರಜ್ಞ ಎಲಿಯಟ್ ಹ್ಯಾರಿಸ್ಎಚ್ಚರಿಕೆ ನೀಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ 9.6ರಷ್ಟು ಕುಸಿಯುತ್ತದೆ ಎಂದು ವಿಶ್ವ ಬ್ಯಾಂಕ್ ಈ ತಿಂಗಳ ಮುನ್ಸೂಚನೆ ನೀಡಿದೆ. ಆದರೆ, ರೋಗದ ವಿರುದ್ಧ ವ್ಯಾಪಕ ವ್ಯಾಕ್ಸಿನೇಷನ್ ಕೈಗೊಂಡರೇ ಮುಂದಿನ ಹಣಕಾಸು ವರ್ಷದಲ್ಲಿ ಶೇ 5.4ರಷ್ಟು ಚೇತರಿಸಿಕೊಳ್ಳಲಿದೆ ಎಂದಿದೆ.
ಭಾರತಕ್ಕೆ ಹಣಕಾಸಿನ ಆಧಾರದ ಮೇಲೆ ಕೈಗೊಂಡ ಯುಎನ್ ಅಂದಾಜಿನ ಪ್ರಕಾರ, ಅದರ ಆರ್ಥಿಕತೆಯು 2020-21ರಲ್ಲಿ ಕೇವಲ ಶೇ 5.7ರಷ್ಟು ಕುಸಿಯುತ್ತದೆ. 2021-22ರಲ್ಲಿ ಶೇ 7ರಷ್ಟು ಮತ್ತು 2022-23ರಲ್ಲಿ ಶೇ 5.6ರಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.