ಕರ್ನಾಟಕ

karnataka

ETV Bharat / business

ಬ್ರಿಟನ್​ನಲ್ಲಿ ನಾರಾಯಣ ಮೂರ್ತಿ ಅಳಿಯನ ಬಜೆಟ್​ ಕಮಾಲ್​: ಇಂಗ್ಲಿಷರಿಗೆ ಸುನಾಕ್​ ಕೊಟ್ಟ ಗಿಫ್ಟ್‌ಗಳಿವು.. - ರಿಷಿ ಸುನಾಕ್ ಇಂಗ್ಲೆಂಡ್ ಬಜೆಟ್​

ಬ್ರಿಟನ್‌ ದೇಶವು ಮೂರನೇ ಬಾರಿಗೆ ರಾಷ್ಟ್ರೀಯ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿದ್ದು, ಅಲ್ಪಾವಧಿಯಲ್ಲಿ ಉದ್ಯೋಗಗಳ ರಕ್ಷಣೆಗೆ ಬಜೆಟ್‌ನಲ್ಲಿ ಆದ್ಯತೆ ನೀಡಲಾಗಿದೆ ಎಂದು ಬೊಕ್ಕಸದ ಉಸ್ತುವಾರಿ ಸಚಿವ ರಿಷಿ ಸುನಾಕ್​ ತಿಳಿಸಿದರು.

Sunak
Sunak

By

Published : Mar 3, 2021, 8:19 PM IST

Updated : Mar 3, 2021, 8:28 PM IST

ಲಂಡನ್​: ಇಂಗ್ಲೆಂಡ್​ನ ಹಣಕಾಸು ಮಂತ್ರಿ, ಇನ್ಫೋಸಿಸ್​ ಸ್ಥಾಪಕ ನಾರಾಯಣ ಮೂರ್ತಿ ಅಳಿಯ ರಿಷಿ ಸುನಾಕ್ ಅವರು ಕೊರೊನಾ ಬಿಕ್ಕಟ್ಟಿನ ಮಧ್ಯೆ ತಮ್ಮ ಎರಡನೇ ಬಜೆಟ್ ಮಂಡಿಸಿದರು.

ಕೊರೊನಾ ವೈರಸ್‌ನಿಂದ ಬ್ರಿಟಿಷ್ ಆರ್ಥಿಕತೆಯು ಚೇತರಿಸಿಕೊಳ್ಳಲು ಸುನಾಕ್ ಅವರು ತುರ್ತು ತೆರಿಗೆ ಕಡಿತ ವಿಸ್ತರಿಸಿದ್ದಾರೆ. ದೇಶವು ಮೂರನೇ ಬಾರಿಗೆ ರಾಷ್ಟ್ರೀಯ ಲಾಕ್‌ಡೌನ್‌ನಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಅಲ್ಪಾವಧಿಯಲ್ಲಿ ಉದ್ಯೋಗಗಳ ರಕ್ಷಣೆಗೆ ಅವರು ಆದ್ಯತೆ ನೀಡಿದ್ದಾರೆ.

ಈ ವರ್ಷ ಮತ್ತು ಮುಂದಿನ ವರ್ಷ ದೇಶವನ್ನು ಆರ್ಥಿಕ ಚೇತರಿಕೆ ಹಾದಿಯಲ್ಲಿ ಕೊಂಡೊಯ್ಯಲು ನೆರವಾಗುವಂತೆ ಇನ್ನೂ 65 ಬಿಲಿಯನ್ ಪೌಂಡ್ (90.7 ಬಿಲಿಯನ್ ಡಾಲರ್​) ಅನುದಾನ ಸೇರಿಸುತ್ತಿರುವುದಾಗಿ ಸುನಾಕ್‌ ಹೇಳಿದರು.

ಬ್ರಿಟನ್‌ನಲ್ಲಿ ಆರ್ಥಿಕ ಕೊರತೆಯ ಪ್ರಮಾಣ ತಗ್ಗಿಸಲು ಪ್ರಾರಂಭಿಸುವ ಯೋಜನೆ ರೂಪಿಸಿದ್ದು, ಕಾರ್ಪೊರೇಟ್​ ತೆರಿಗೆಯನ್ನು ಈಗಿನ ಶೇ 19ರಿಂದ ಶೇ 25ಕ್ಕೆ ಹೆಚ್ಚಿಸಲಾಗಿದೆ. ಇದು 2023ರಲ್ಲಿ ಜಾರಿಗೆ ಬರಲಿದೆ.

ಇದನ್ನೂ ಓದಿ: ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಮೇಲೆ 8.5 ರೂ. ಅಬಕಾರಿ ಸುಂಕ ಕಡಿತ ಸಾಧ್ಯತೆ

ಸಾಂಕ್ರಾಮಿಕ ರೋಗವನ್ನು ಎದುರಿಸಲು ಸರ್ಕಾರವು 100 ಶತಕೋಟಿ ಪೌಂಡ್​ಗಳಷ್ಟು ಬೆಂಬಲವನ್ನು ಉದ್ದಿಮೆ, ವ್ಯವಹಾರಗಳಿಗೆ ಒದಗಿಸುತ್ತಿದೆ. ಆದ್ದರಿಂದ ದೇಶದ ಚೇತರಿಕೆಗೆ ಕೊಡುಗೆ ನೀಡುವಂತೆ ಉದ್ದಿಮೆದಾರರನ್ನು ಕೇಳಿಕೊಳ್ಳುವುದು ನ್ಯಾಯಯುತ ಮತ್ತು ಇಂದಿನ ತುರ್ತಾಗಿದೆ ಎಂದು ಸುನಾಕ್ ಹೇಳಿದರು.

ಕಾರ್ಪೊರೇಷನ್ ತೆರಿಗೆಯನ್ನು ಲಾಭದ ಮೇಲೆ ಮಾತ್ರ ವಿಧಿಸಲಾಗುತ್ತದೆ. ಹೆಣಗಾಡುತ್ತಿರುವ ವ್ಯವಹಾರಗಳ ಮೇಲೆ ಈ ತೆರಿಗೆ ವಿಧಿಸಲಾಗುವುದಿಲ್ಲ ಎಂದರು.

ಬಜೆಟ್ ಘೋಷಣೆಗಳೇನು?

- ಮೂಲ ಮತ್ತು ಹೆಚ್ಚಿನ ದರದ ಆದಾಯ ತೆರಿಗೆ ಮಿತಿ ಸ್ಥಗಿತಗೊಳಿಸಲಾಗುತ್ತಿದೆ. ಜನರ ಗಳಿಕೆ ಹೆಚ್ಚಾದಂತೆ ಹೆಚ್ಚಿನ ತೆರಿಗೆ ಪಾವತಿಸಲು ಅನುಕೂಲವಾಗುತ್ತದೆ.

- ಫರ್ಲಫ್ (ಅನುಪಸ್ಥಿತಿಯ ರಜೆ) ಯೋಜನೆಯನ್ನು ಸೆಪ್ಟೆಂಬರ್ ಮೂಲಕ ವಿಸ್ತರಿಸಲಾಗುವುದು. ವ್ಯವಹಾರಗಳು ಮತ್ತೆ ಮರು ಆರಂಭಗೊಳ್ಳುತ್ತಿದ್ದಂತೆ ಜುಲೈನಿಂದ, ಶೇ 10ರಷ್ಟು ಕೊಡುಗೆ ಕೇಳಲಾಗುತ್ತದೆ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಶೇ 20ಕ್ಕೆ ಏರಿಕೆ ಆಗಲಿದೆ.

- ಶೇ 5ರಷ್ಟು ಕಡಿಮೆಯಾದ ವ್ಯಾಟ್ ದರವನ್ನು ಆರು ತಿಂಗಳವರೆಗೆ ಅಂದರೆ, ಸೆಪ್ಟೆಂಬರ್ 30ಕ್ಕೆ ವಿಸ್ತರಿಸಲಾಗುವುದು.

- ಮನೆ ಮಾರಾಟಕ್ಕೆ ತೆರಿಗೆ ವಿಧಿಸುವ ಸ್ಟಾಂಪ್ ಡ್ಯೂಟಿ ರಜಾ ಅವಧಿ ಜೂನ್ 30ರವರೆಗೆ ವಿಸ್ತರಣೆ.

- ಯುನಿವರ್ಸಲ್ ಕ್ರೆಡಿಟ್ ವೆಲ್​ಫೆರ್​ ಪಾವತಿಗಳಿಗೆ ವಾರಕ್ಕೆ 20 ಪೌಂಡ್, ಆರು ತಿಂಗಳವರೆಗೆ ಮುಂದೂಡಿಕೆ.

- ಮದ್ಯ ಮತ್ತು ಇಂಧನ ಸುಂಕದಲ್ಲಿ ಯೋಜಿತ ಏರಿಕೆ ರದ್ದು.

- ಕಳೆದ ವರ್ಷ ಸುಮಾರು ಶೇ 10ರಷ್ಟು ಕುಗ್ಗಿದ ಯು.ಕೆ ಆರ್ಥಿಕತೆಯು 2021ರಲ್ಲಿ ಶೇ 4ರಷ್ಟು ವಿಸ್ತರಿಸುವ ಮುನ್ಸೂಚನೆ ಇದೆ ಎಂದು ಆಫೀಸ್ ಫಾರ್ ಬಜೆಟ್ ಜವಾಬ್ದಾರಿ ಹೇಳಿದೆ.

- ಮುಂದಿನ ವರ್ಷ ಆರ್ಥಿಕ ಬೆಳವಣಿಗೆ ದರವು ಶೇ 7.3ರಷ್ಟು ಏರಿಕೆಯಾಗಲಿದೆ. ಇದು ನವೆಂಬರ್‌ನಲ್ಲಿನ ಶೇ 6.6ರಷ್ಟು ವೇಗದ ಮುನ್ಸೂಚನೆಗಿಂತ ಸದೃಢವಾಗಿರಲಿದೆ ಎಂದು ಒಬಿಆರ್ ತಿಳಿಸಿದೆ.

Last Updated : Mar 3, 2021, 8:28 PM IST

ABOUT THE AUTHOR

...view details