ಬ್ರಸೆಲ್ಸ್: ಯುರೋಪಿಯನ್ ಒಕ್ಕೂಟ ಮತ್ತು ಬ್ರಿಟನ್ ಜಂಟಿಯಾಗಿ ಬ್ರೆಕ್ಸಿಟ್ ನಂತರದ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದು, 10 ತಿಂಗಳ ಕಠಿಣ ಮಾತುಕತೆ ಬಳಿಕ ಇಂಗ್ಲೆಂಡ್ ಒಂದೇ ಮಾರುಕಟ್ಟೆಯಿಂದ ಹೊರ ಹೋಗುವ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಂಡಿದೆ.
ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಒನ್ಲೈನ್ ಟ್ವೀಟ್ ಮಾಡಿದ್ದಾರೆ. ನಾವು ಅಂತಿಮವಾಗಿ ಒಪ್ಪಂದವನ್ನು ಕಂಡುಕೊಂಡಿದ್ದೇವೆ ಎಂದು ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದ್ದಾರೆ.