ಕರ್ನಾಟಕ

karnataka

By

Published : Sep 13, 2019, 8:03 PM IST

ETV Bharat / business

ಗುರುತ್ವಾನ್ವೇಷಕ ತಿಳಿಯದ ಗೋಯಲ್​ಗೆ ಆರ್ಥಿಕ ಕುಸಿತ ಅರ್ಥವಾಗಲ್ಲ: ರಘುರಾಮ್​ ರಾಜನ್​ ವ್ಯಂಗ್ಯ

ಟಿವಿಯಲ್ಲಿ ಕಂಡುಬರುವ ಲೆಕ್ಕಾಚಾರಕ್ಕೆ ಗಮನ ಕೊಡದಂತೆ ಜನರಿಗೆ ಸಲಹೆ ನೀಡಿದರು. ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನೋಡುತ್ತಿದ್ದರೆ, ದೇಶವು ಶೇ 12ರಷ್ಟು ಬೆಳವಣಿಗೆ ದರದಲ್ಲಿ ಸಾಗಬೇಕಾಗುತ್ತದೆ. ಇಂದು ಅದು ಶೇ 6 ರಷ್ಟಿದೆ. ಆ ಗಣಿತವನ್ನು ಎಳೆದು ತರಲು ಹೋಗಬೇಡಿ. ಐನ್‌ಸ್ಟೈನ್‌ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ಆ ಗಣಿತ ಎಂದಿಗೂ ಸಹಾಯ ಮಾಡಿಲ್ಲ ಎಂದು ಕೇಂದ್ರ ಸಚಿವ ಪಿಯೂಶ್​ ಗೋಯಲ್ ಹೇಳಿದ್ದರು.

ಸಾಂದರ್ಭಿಕ ಚಿತ್ರ

ನವದೆಹಲಿ: 'ಐನ್ ಸ್ಟೈನ್​'ನ ಗುರುತ್ವಾಕರ್ಷಣಾ ಸಿದ್ಧಾಂತದ ಆವಿಷ್ಕಾರಕ್ಕೆ ಗಣಿತ ನೆರವಾಗಲಿಲ್ಲ ಎನ್ನುವ ಮೂಲಕ ಅಸಂಬದ್ಧ ಹೇಳಿಕೆ ನೀಡಿದ್ದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್​ ಗೋಯಲ್​ ವಿರುದ್ಧ ಆರ್​ಬಿಐನ ಮಾಜಿ ಗವರ್ನರ್​ ರಘುರಾಮ್ ರಾಜನ್​ ಟ್ವೀಟ್​ ಮೂಲಕ ತರಾಟೆಗೆ ತೆಗೆದುಕೊಂಡಿದ್ದು 'ಆರ್ಥಿಕ ಕುಸಿತದ ಗುರುತ್ವಾಕರ್ಷಣೆ ಅರ್ಥೈಸಿಕೊಳ್ಳುವಲ್ಲಿ ಅವರು ವಿಫಲವಾಗಿದ್ದಾರೆ' ಎಂದಿದ್ದಾರೆ.

ರಾಜನ್ ಅವರು ತಮ್ಮ ಟ್ವಿಟ್ಟರ್​ನಲ್ಲಿ, ಆರ್ಥಿಕ ಮಂದಗತಿಯ ಗುರುತ್ವಾಕರ್ಷಣೆ (#ಗ್ರಾವಿಟಿ) ಅರ್ಥಮಾಡಿಕೊಳ್ಳದಿದ್ದಾಗ, ತಾರ್ಕಿಕ ಪದಗಳು ದುರ್ಬಲವಾಗುತ್ತವೆ. ಗುರುತ್ವ ಮತ್ತು ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಗಣಿತವು ಸಹಾಯ ಮಾಡುವುದಿಲ್ಲ ಎಂದು ಯಾರಾದರೂ ಭಾವಿಸಿದರೆ, ನೀವು ನಿಜವಾಗಿಯೂ ಅಂಕಿಅಂಶಗಳನ್ನು ಮರೆಮಾಚಲು ಯತ್ನಿಸುತ್ತಿದ್ದೀರಿ ಎಂಬುದರ ಸಂಕೇತವಾಗಿದೆ ಎಂದು ಬರೆದುಕೊಂಡಿದ್ದಾರೆ.

ಗೋಯಲ್ ಹೇಳಿದ್ದು:

ಟಿವಿಯಲ್ಲಿ ಕಂಡುಬರುವ ಲೆಕ್ಕಾಚಾರಕ್ಕೆ ಗಮನ ಕೊಡದಂತೆ ಜನರಿಗೆ ಸಲಹೆ ನೀಡಿದರು. ನೀವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ನೋಡುತ್ತಿದ್ದರೆ, ದೇಶವು ಶೇ 12ರಷ್ಟು ಬೆಳವಣಿಗೆ ದರದಲ್ಲಿ ಸಾಗಬೇಕಾಗುತ್ತದೆ. ಇಂದು ಅದು ಶೇ 6 ರಷ್ಟಿದೆ. ಆ ಗಣಿತವನ್ನು ಎಳೆದು ತರಲು ಹೋಗಬೇಡಿ. ಐನ್‌ಸ್ಟೈನ್‌ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ಆ ಗಣಿತ ಎಂದಿಗೂ ಸಹಾಯ ಮಾಡಿಲ್ಲ ಎಂದು ಕೇಂದ್ರ ಸಚಿವ ಪಿಯೂಶ್​ ಗೋಯಲ್ ಹೇಳಿದ್ದರು.

ABOUT THE AUTHOR

...view details